ಕೋವಿಡ್ ರೋಗಿಗಳಿಗೆ ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮುಂದುವರಿಕೆ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಧ್ಯಯನ ವರದಿ ಏನೇ ಹೇಳಿದ್ದರೂ ರಾಜ್ಯದಲ್ಲಿ ಇದು ಪರಿಣಾಮಕಾರಿಯಾಗಿರುವುದರಿಂದ ಕರ್ನಾಟಕದ ಆರೋಗ್ಯ ತಜ್ಞರು ತಾವು ಪ್ಲಾಸ್ಮಾ ಚಿಕಿತ್ಸೆಯನ್ನು (ಸಿಪಿಟಿ) ಮುಂದುವರಿಸುವುದಾಗಿ ಹೇಳಿದ್ದಾರೆ. ಕೋವಿಡ್‌ಗಾಗಿ ಸಿಪಿಟಿ ಚಿಕಿತ್ಸೆ ನೀಡಲು  ಪಿಎಲ್‌ಸಿಐಡಿ ಎಂದು ಕರೆಯಲ್ಪಡುವ ಐಸಿಎಂಆರ್ ಪ್ರಣೀತ ಯೋಗವು ಮರಣ ಪ್ರಮಾಣವನ್
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಧ್ಯಯನ ವರದಿ ಏನೇ ಹೇಳಿದ್ದರೂ ರಾಜ್ಯದಲ್ಲಿ ಇದು ಪರಿಣಾಮಕಾರಿಯಾಗಿರುವುದರಿಂದ ಕರ್ನಾಟಕದ ಆರೋಗ್ಯ ತಜ್ಞರು ತಾವು ಪ್ಲಾಸ್ಮಾ ಚಿಕಿತ್ಸೆಯನ್ನು (ಸಿಪಿಟಿ) ಮುಂದುವರಿಸುವುದಾಗಿ ಹೇಳಿದ್ದಾರೆ. ಕೋವಿಡ್‌ಗಾಗಿ ಸಿಪಿಟಿ ಚಿಕಿತ್ಸೆ ನೀಡಲು  ಪಿಎಲ್‌ಸಿಐಡಿ ಎಂದು ಕರೆಯಲ್ಪಡುವ ಐಸಿಎಂಆರ್ ಪ್ರಣೀತ ಯೋಗವು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಅಥವಾ ರೋಗದ ಹರಡುವಿಕೆ ತಡೆಗೆ ವಿಫಲವಾಗಿದೆ ಎಂದು ತೋರಿಸಿದೆ.

ಪ್ಲಾಸ್ಮಾ ಪ್ರಯೋಗಗಳು ಮತ್ತು ರಾಜ್ಯ ಪ್ಲಾಸ್ಮಾ ಬ್ಯಾಂಕ್ ಅನ್ನು ಪ್ರಾರಂಭಿಸಿದ ಡಾ ಯು ಎಸ್ ವಿಶಾಲ್ ರಾವ್, “ರಾಜ್ಯದಲ್ಲಿ ಸುಮಾರು 60% ರೋಗಿಗಳು ಸಿಪಿಟಿಯಿಂದ ಚೇತರಿಸಿಕೊಂಡಿದ್ದಾರೆ. ನಾವು ಸುಮಾರು 400 ಜನರಿಗೆ ಪ್ಲಾಸ್ಮಾವನ್ನು ನೀಡಿದ್ದೇವೆ. ಉಳಿದ 40% ಜನರು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಚೇತರಿಸಿಕೊಂಡಿಲ್ಲ ಆದರೆ ಒಟ್ಟಾರೆ ರಾಜ್ಯದಲ್ಲಿ ಸಿಸಿಟಿ ಚಿಕಿತ್ಸೆಯನ್ನು ಮುಂದುವರಿಸುತ್ತೇವೆ." ಎಂದಿದ್ದಾರೆ. 

ಅಧ್ಯಯನವು ಹಲವಾರು ನ್ಯ್ನತೆಗಳನ್ನು ಹೊಂದಿದೆ. ಈ ಬಗ್ಗೆ ಸ್ಪಷ್ಟೀಕರಣ ಮತ್ತು ಮಾರ್ಗದರ್ಶನ ಕೋರಿ ಐಸಿಎಂಆರ್‌ಗೆ ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ. “ಪಿಎಲ್‌ಸಿಐಡಿ ಪ್ರಯೋಗದಲ್ಲಿ, 54% ಕ್ಕಿಂತ ಕಡಿಮೆ ರೋಗಿಗಳು ಏಳು ದಿನಗಳ ಅವಧಿಯಲ್ಲಿ ನೆಗೆಟಿವ್ ಪಿಸಿಆರ್ ಹೊಂದಿದ್ದರು. ಇದರರ್ಥ ರೋಗಿಗಳಿಗೆ 14 ದಿನಗಳ ಮಧ್ಯದಲ್ಲಿ ಪ್ಲಾಸ್ಮಾ ನೀಡಲಾಗಿದೆ. ಇದು ಪರಿಕಲ್ಪನಾತ್ಮಕವಾಗಿ ನೋಡಿದರೆ ವಿಳಂಬವಾಗಿದೆ.  ಆದ್ದರಿಂದ ಈ ಚಿಕಿತ್ಸೆ ನೀಡಬೇಕಾದ ಸರಾಸರಿ ದಿನದ ಸ್ಪಷ್ಟೀಕರಣ ಅಗತ್ಯವಾಗಿದೆ, ” ಅವರು ಹೇಳಿದರು, “ಐಸಿಎಂಆರ್ ಅಧ್ಯಯನದಲ್ಲಿ, ಸಿಪಿಟಿ ಗುಂಪಿನ 67.9% ಜನರು 7 ನೇ ದಿನದಲ್ಲಿ ಪಿಸಿಆರ್ ನೆಗೆಟಿವ್ ಆಗಿದ್ದರೆ ಸಿಪಿಟಿ ಅಲ್ಲದ ಗುಂಪಿನ 54.6% ಗೆ ಹೋಲಿಸಿದರೆ. ಸಮುದಾಯ ಪ್ರಸರಣವನ್ನು ಕಡಿಮೆ ಮಾಡಲು ಸಹಾಯ ಮಾಡುವ ಸಿಪಿಟಿಯ ಪ್ರಯೋಜನಕಾರಿ  ಎಂದು ನಾವಿದನ್ನು ಪರಿಗಣಿಸಬಹುದು. ” 

ಇದಲ್ಲದೆ “ಇನ್ಫ್ಯೂಸ್ಡ್ ಸಿಪಿಯಲ್ಲಿನ ಎನ್ಎಬಿ (ತಟಸ್ಥಗೊಳಿಸುವ ಪ್ರತಿಕಾಯ) ಟೈಟ್ರೆಸ್ ಮತ್ತು ಐಜಿಜಿ (ಇಮ್ಯುನೊಗ್ಲಾಬ್ಯುಲಿನ್) ಬಗ್ಗೆ ಹೆಚ್ಚಿನ ವಿವರಗಳನ್ನು ಸ್ಪಷ್ಟಪಡಿಸಬೇಕಾಗಿದೆ. ಸಿಪಿಟಿಯ ಯಶಸ್ಸಿಗೆ ಅಧ್ಯಯನದಲ್ಲಿ ಅವರು ಟೈಟ್ರೆಸ್ ಅನ್ನು ಪತ್ತೆಹಚ್ಚಬಹುದೆಂದು ಮಾತ್ರ ಉಲ್ಲೇಖಿಸಲಾಗಿದೆ.  . ಆದ್ದರಿಂದ, ಸಿಪಿಟಿಯ ನೈಜ ಪರಿಣಾಮಕಾರಿತ್ವವನ್ನು ಹೆಚ್ಚು ವಿವರವಾಗಿ ಮೌಲ್ಯಮಾಪನ ಮಾಡಲು ದೊಡ್ಡ ಮಾದರಿಮತ್ತು ದತ್ತಾಂಶದ ಏಕರೂಪತೆ ಮತ್ತು ಪ್ರಮಾಣಿತ ರೋಗನಿರ್ಣಯ ಸಾಧನಗಳೊಂದಿಗೆ ಮತ್ತಷ್ಟು ಪ್ರೇರಣಾತ್ಮಕ ನಿಯಂತ್ರಿತ ಪ್ರಯೋಗಗಳನ್ನು ನಡೆಸುವುದು ಇಂದಿನ ಅಗತ್ಯವಾಗಿದೆ.  ” ಮಣಿಪಾಲ್ ಆಸ್ಪತ್ರೆಯ ಮುಖ್ಯ ವೈಜ್ಞಾನಿಕ ಮಂಡಳಿ ಮತ್ತು ಜೆರಿಯಾಟ್ರಿಕ್ ಮೆಡಿಸಿನ್ ಮತ್ತು ರಾಜ್ಯ ಕ್ರಿಟಿಕಲ್ ಕೇರ್ ಸಪೋರ್ಟ್ ತಂಡದ ಸದಸ್ಯ ಡಾ.ಅನೂಪ್ ಅಮರನಾಥ್ ಹೇಳಿದ್ದಾರೆ.

“ಅಧ್ಯಯನವು ಇನ್ನಷ್ಟು ಆಳವಾದ ಸಂಶೋಧನೆಯ ಅಗತ್ಯವನ್ನು ಹೇಳುತ್ತಿದೆ. ಸಿಪಿಯ ಒಟ್ಟಾರೆ ಆರೈಕೆಯ ದೃಷ್ಟಿಯಿಂದ, ಇದು ಪ್ರಮಾಣಿತ ಚಿಕಿತ್ಸೆಗಿಂತ ಕೇಸ್-ಟು-ಕೇಸ್ ಆಧಾರದ ಮೇಲೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಮತ್ತೊಂದು ವ್ಯಾಖ್ಯಾನವೆಂದರೆ ಸಾಮಾನ್ಯವಾಗಿ ಒಂದು ತೀರ್ಮಾನಕ್ಕೆ ಬರಲು ನಮಗೆ ದೊಡ್ಡ ಪ್ರಮಾಣದ ಪ್ರಯೋಗಗಳ ಅಗತ್ಯವಿದೆ. ” ಭಾರತದ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಲೈಫ್‌ಕೋರ್ಸ್ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಕೊಕೊವಿಡ್ ಕಾರ್ಯಪಡೆಯ ಕರ್ನಾಟಕ ತಜ್ಞರ ಸಮಿತಿಯ ಸದಸ್ಯ ಡಾ.ಗಿರಿಧರ್ ಆರ್ ಬಾಬು ಹೇಳಿದ್ದಾರೆ.

 "ಐಸಿಎಂಆರ್ ಅಧ್ಯಯನವು ಅನೇಕ ಅಂಶಗಳನ್ನು ಒಳಗೊಂಡಿದೆ ಮತ್ತು ಅದು ಒಳ್ಳೆಯ ಅದ್ಯಯನವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ ಇಲ್ಲಿಯವರೆಗೆ ಕರ್ನಾಟಕದಿಂದ ಯಾವುದೇ ಅಧ್ಯಯನ ನಡೆದಿಲ್ಲ. ಹಾಗಾಗಿ ಇದೀಗ ಅದರ ಆಧಾರಗಳನ್ನು ಪ್ರಶ್ನಿಸಲಾಗುತ್ತದೆ" ಅವರು ವಿವರಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com