ಬೆಂಗಳೂರು: ಹೊಸ ಅಟೋಗಳು ರಸ್ತೆಗಿಳಿಯಲು ಸಾರಿಗೆ ಇಲಾಖೆ ಪರವಾನಗಿ ಇಲ್ಲ!

ಸಾರಿಗೆ ಇಲಾಖೆಯು ಹೊಸ ಆಟೋಗಳಿಗೆ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಿದೆ, ಬದಲಿಗೆ ಇರುವ ಆಟೋಗಳಿಗೆ ಇ- ಪರ್ಮಿಟ್ ನೀಡುವತ್ತ ಗಮನ ಹರಿಸಿದೆ, ಇತ್ತೀಚೆಗೆ ಡಿಸಿಎಂ ಲಕ್ಷ್ಮಣ ಸವದಿ ಸಾರಿಗೆ ಇಲಾಖೆಗೆ ನೋಟಿಸ್ ನೀಡಿದ್ದು, ವಾಹನಗಳ ಇ-ಪರ್ಮಿಟ್ ನೀಡುವತ್ತ ಗಮನ ಕೇಂದ್ರೀಕರಿಸಬೇಕೆಂದು ಸೂಚಿಸಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾರಿಗೆ ಇಲಾಖೆಯು ಹೊಸ ಆಟೋಗಳಿಗೆ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಿದೆ, ಬದಲಿಗೆ ಇರುವ ಆಟೋಗಳಿಗೆ ಇ- ಪರ್ಮಿಟ್ ನೀಡುವತ್ತ ಗಮನ ಹರಿಸಿದೆ, ಇತ್ತೀಚೆಗೆ ಡಿಸಿಎಂ ಲಕ್ಷ್ಮಣ ಸವದಿ ಸಾರಿಗೆ ಇಲಾಖೆಗೆ ನೋಟಿಸ್ ನೀಡಿದ್ದು, ವಾಹನಗಳ ಇ-ಪರ್ಮಿಟ್ ನೀಡುವತ್ತ ಗಮನ ಕೇಂದ್ರೀಕರಿಸಬೇಕೆಂದು ಸೂಚಿಸಿದ್ದಾರೆ.

ನಿಯಮಗಳ ಪ್ರಕಾರ ಪ್ರತಿ ವರ್ಷ ರಾಜ್ಯ ಸರ್ಕಾರ 5 ಸಾವಿರ ಹೊಸ ಆಟೋಗಳಿಗೆ  ಪರವಾನಗಿ ನೀಡಬೇಕು, ಆದರೆ ಈ ವರ್ಷ ಕೇವಲ 2 ಸಾವಿರ ಆಟೋಗಳಿಗೆ ಮಾತ್ರ ಪರವಾನಗಿ ನೀಡಲಾಗಿದೆ.

ಆಟೋರಿಕ್ಷಾಗಳಿಗಾಗಿ ನಮ್ಮ ಆರ್‌ಟಿಒ ಕಚೇರಿಯಲ್ಲಿ ನಾವು ಕಡಿಮೆ ಸಿಬ್ಬಂದಿ ಹೊಂದಿದ್ದೇವೆ. ಸಚಿವರು ಅನುಮತಿ ನೀಡಿದ ಮೇಲೆ ನಾವು ಈ ವಿಭಾಗಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳುತ್ತೇವೆ ಸಾರಿಗೆ ಆಯುಕ್ತ ಎನ್ ಶಿವಕುಮಾರ್ ತಿಳಿಸಿದ್ದಾರೆ. ಕರ್ನಾಟಕದಲ್ಲಿ 2.30 ಲಕ್ಷ ಆಟೋ ರಿಕ್ಷಾಗಳಿವೆ.

ಆಟೋಗಳಿಗೆ ಇ ಪರ್ಮಿಟ್ ನೀಡಲು 5 ವೆಬ್ ಕ್ಯಾಮೆರಾ  ಮತ್ತು ಒಂದು ಅಲ್ಟ್ರಾ ಮಾಡೆಲ್ ಪ್ರಿಂಟರ್ ಅಳವಡಿಸಿಕೊಂಡು ಇ ಪರ್ಮಿಟ್ ನೀಡಲು ಬಳಸಿಕೊಳ್ಳುತ್ತಿದ್ದೇವೆ ಎಂದು ಹೆಚ್ಚುವರಿ ಆಯುಕ್ತ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.

ನನ್ನ ಪರವಾನಗಿ ಅವಧಿ ಮುಗಿದಿದ್ದು, ಅದನ್ನು ಇ ಪರ್ಮಿಟ್ ಆಗಿ ಬದಲಾಯಿಸಿಕೊಳ್ಳಲು 500  ರು ಕೇಳುತ್ತಿದ್ದಾರೆ,  ಆದರೆ ಸರ್ಕಾರದಿಂದ ಇನ್ನು 5ಸಾವಿರ ರು ಪರಿಹಾರ ಹಣ ಬಂದಿಲ್ಲ, ಆದರೆ ಮಧ್ಯವರ್ತಿಗಳು ಇದರ ದರವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ ಎಂದು  ಆಟೋ ರಿಕ್ಷಾ ಚಾಲಕ ರಮೇಶ್ ಕುಮಾರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com