ಕುಂದಾಪುರ: ಡ್ರಗ್ ಪೆಡ್ಲರ್ ಗಳ ಮೇಲೆ ಪೋಲೀಸ್ ದಾಳಿ, 1.1 ಕೆಜಿ ಗಾಂಜಾ ವಶ, ಮೂವರ ಬಂಧನ

ಕುಂದಾಪುರದ ಕೋಟೇಶ್ವರದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೋಲೀಸರು ಬಂಧಿಸಿದ್ದು ಅವರಿಂದ  1.1 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕುಂದಾಪುರ: ಡ್ರಗ್ ಪೆಡ್ಲರ್ ಗಳ ಮೇಲೆ ಪೋಲೀಸ್ ದಾಳಿ, 1.1 ಕೆಜಿ ಗಾಂಜಾ ವಶ, ಮೂವರ ಬಂಧನ
Updated on

ಕುಂದಾಪುರ: ಕುಂದಾಪುರದ ಕೋಟೇಶ್ವರದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೋಲೀಸರು ಬಂಧಿಸಿದ್ದು ಅವರಿಂದ  1.1 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಮೂಡುಗೋಪಾಡಿ ಗ್ರಾಮದ ಮುಷ್ರೀಫ್ ಅಹಮದ್ (24), ವಿಟ್ಟಲ್ವಾಡಿ ಶ್ರೇಯಸ್ ದೇವಾಡಿಗ (23), ಮತ್ತು ಕೋಟೇಶ್ವರ ಮೂಲದ ಪ್ರೀತಮ್  ಅಲಿಯಾಸ್ ಪ್ರೀತು (23) ಎಂದು ಗುರುತಿಸಲಾಗಿದೆ.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸದಾಶಿವ ಗೌರೋಜಿ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು ಈ ಮೂವರು ಕೋಟೇಶ್ವರದಲ್ಲಿ ದ್ವಿಚಕ್ರ ವಾಹನ ಮಾರಾಟ ಮಳಿಗೆ ಸಮೀಪ ಎರಡು ಮೋಟಾರು ಬೈಕ್‌ಗಳಲ್ಲಿ ಆಗಮಿಸಿದ್ದರು, ಅಲ್ಲಿ ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿಗಳು ಗ್ರಾಹಕರ ತಲಾಶ್ ನಲ್ಲಿದ್ದದ್ದಾಗಿ ಮೂಲಗಳು ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com