ಎಸ್ಕಾರ್ಟ್ ವೆಬ್‌ಸೈಟ್‌ಗಳಿಗೆ ಪ್ರವೇಶಿಸುವ ಮುನ್ನ ಎಚ್ಚರ! 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ತನಿಖೆಯಿಂದ ಬಯಲಾಯ್ತು ರೋಚಕ ಸತ್ಯ

ನೀವು ಇನ್ನು ಮುಂದೆ ಎಸ್ಕಾರ್ಟ್ ಸೇವೆಗಳನ್ನು ನೀಡುವ ಸುಂದರ ಮಹಿಳೆಯ ಫೋಟೋ ಹೊಂದಿರುವ ಆನ್‌ಲೈನ್‌ನಲ್ಲಿ ಜಾಹೀರಾತನ್ನು ನೀವು ನೋಡಿದಾಗ, ಕ್ಲಿಕ್ ಮಾಡುವ ಮುನ್ನ ಯೋಚಿಸಿ!
ಎಸ್ಕಾರ್ಟ್ ವೆಬ್‌ಸೈಟ್‌ಗಳಿಗೆ ಪ್ರವೇಶಿಸುವ ಮುನ್ನ ಎಚ್ಚರ! 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ತನಿಖೆಯಿಂದ ಬಯಲಾಯ್ತು ರೋಚಕ ಸತ್ಯ

ಬೆಂಗಳೂರು: ನೀವು ಇನ್ನು ಮುಂದೆ ಎಸ್ಕಾರ್ಟ್ ಸೇವೆಗಳನ್ನು ನೀಡುವ ಸುಂದರ ಮಹಿಳೆಯ ಫೋಟೋ ಹೊಂದಿರುವ ಆನ್‌ಲೈನ್‌ನಲ್ಲಿ ಜಾಹೀರಾತನ್ನು ನೀವು ನೋಡಿದಾಗ, ಕ್ಲಿಕ್ ಮಾಡುವ ಮುನ್ನ ಯೋಚಿಸಿ! ಜಾಹೀರಾತನ್ನು ಕ್ಲಿಕ್ ಮಾಡುವ ಮೂಲಕ ನೀವು ಬಹಳಷ್ಟು ಹಣವನ್ನು ಕಳೆದುಕೊಳ್ಳಬಹುದು. ಕೋವಿಡ್ - ಪ್ರೇರಿತ ಲಾಕ್‌ಡೌನ್‌ನಿಂದ ದೇಶವು ಅನ್‌ಲಾಕ್ ಆಗಲು  ಪ್ರಾರಂಭಿಸಿದಾಗಿನಿಂದ, ಅಂತಹ ಹಲವಾರು ಎಸ್ಕಾರ್ಟ್ ವೆಬ್ ಸೈಟ್ ಗಳು ಅಂತರ್ಜಾಲದಾದ್ಯಂತ  ಕಂಡುಬರುತ್ತಿದೆ. 

ಅವರು ಬೆಂಗಳೂರು, ಮೈಸೂರು ಮತ್ತು ರಾಜ್ಯದ ಇತರ ಭಾಗಗಳಿಂದ ಗ್ರಾಹಕರಿಗೆ ಎಸ್ಕಾರ್ಟ್ ಸೇವೆ ಕಲ್ಪಿಸುವುದಾಗಿ ಹೇಳುತ್ತಾರೆ.ಗ್ರಾಹಕರು ಜಾಹೀರಾತನ್ನು ಕ್ಲಿಕ್ ಮಾಡಿದ ನಂತರ, ಸಂಖ್ಯೆಗೆ ಕರೆ ಮಾಡಿ ಮತ್ತು ಸ್ವಲ್ಪ ಹಣವನ್ನು ವರ್ಗಾಯಿಸುವ ಮೂಲಕ ಎಸ್ಕಾರ್ಟ್  ಕ್ಲಬ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ಕೇಳಲಾಗುತ್ತದೆ. ವೆಬ್‌ಸೈಟ್ ನಂತರ ಗ್ರಾಹಕರಿಗೆ ಮಹಿಳೆಯರ ಹಲವಾರು ಫೋಟೋಗಳನ್ನು ಕಳುಹಿಸುತ್ತದೆ ಮತ್ತು ಅವನು ಆರಿಸಿದ ಮಹಿಳೆಯನ್ನು ತನ್ನ ನಗರದ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗುವುದು ಎಂದು ಭರವಸೆ ನೀಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಗ್ರಾಹಕರು ಎಸ್ಕಾರ್ಟ್ ಬ್‌ನೊಂದಿಗೆ ಹೊಂದಿರುವ ಕೊನೆಯ ಸಂವಹನ ಇದಾಗಿರಲಿದೆ. ಹಾಗೂ ನೀವು ನಿಮ್ಮ ಹಣದ ಬಗ್ಗೆ ಮರೆತು ಬಿಡಬೇಕಾಗುವುದು.  ಆದರೆ ಇನ್ನೂ ಕೆಲ ವೆಬ್‌ಸೈಟ್‌ಗಳಿವೆ,  ಅವರು  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಗ್ರಾಹಕರಿಂದ ಬ್ಲ್ಯಾಕ್‌ಮೇಲ್ ಮತ್ತು ಹಣವನ್ನು ಸುಲಿಗೆ ಮಾಡಲು ಪ್ರಾರಂಭಿಸುತ್ತಾರೆ. ಪಬ್ಲಿಕ್ ಕಮ್ಯುನಿಕೇಷನ್ ಗೆ ಹೋಗದಂತೆ ಬೆದರಿಕೆ ಹಾಕಲಾಗುತ್ತದೆ.

ಈ ಕಥೆಯನ್ನು ಬೆನ್ನಟ್ಟುತ್ತಾ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಗಾರರೊಬ್ಬರು 99 ***** 301 ಸಂಖ್ಯೆಯನ್ನು ಸಂಪರ್ಕಿಸಿ,ದಾಗ ಮಹಿಳೆಯೊಬ್ಬರು ಪ್ರತಿಕ್ರಿಯಿಸಿ, ಅವಶ್ಯಕತೆಗಳನ್ನು ಪಟ್ಟಿ ಮಾಡಿ ಮತ್ತು ಸೇವಾ ಅಪಾರ್ಟ್‌ಮೆಂಟ್‌ನಲ್ಲಿ ಎಸ್ಕಾರ್ಟ್ ಸೇವೆಯನ್ನು ಒದಗಿಸುವುದಾಗಿ ಭರವಸೆ ನೀಡಿದರು, ಆದರೆ ಕೇವಲ ಸದಸ್ಯತ್ವಕ್ಕಾಗಿ ಕನಿಷ್ಠ ಮೊತ್ತವನ್ನು ಅವರ ಖಾತೆಗೆ ವರ್ಗಾಯಿಸಿದರಷ್ಟೇ ಸೇವೆ ಲಭಿಸುವುದಾಗಿ ಹೇಳಿದ್ದರು.   ಹಣವನ್ನು ವರ್ಗಾವಣೆ ಮಾಡಿದ ನಂತರ, ವರದಿಗಾರನನ್ನು ಸ್ಥಳಕ್ಕೆ ಹೋಗಲು ಕೇಳಲಾಯಿತು. ಅವರು ಅಲ್ಲಿಗೆ ತಲುಪಿದಾಗ, ಅವರು ಮೊದಲ ಬಾರಿಗೆ ಸೇವೆಯನ್ನು ಪಡೆಯಲು ಭದ್ರತಾ ಠೇವಣಿಯಾಗಿ ಇನ್ನೂ 30,000 ರೂಗಳನ್ನು ಕೊಡಬೇಕು ಎಂದು  ಕರೆ ಬಂತು. ಇದನ್ನು ಮೊದಲೇ ಏಕೆ  ತಿಳಿಸಿಲ್ಲ ಎಂದು ಅವರು ಕೇಳಿದಾಗ, ಇನ್ನೊಂದು ತುದಿಯಲ್ಲಿರುವ ಮಹಿಳೆ ಠೇವಣಿ ಇಲ್ಲದೆ ವ್ಯವಸ್ಥೆಯನ್ನು ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.

ಆರಂಭಿಕ ಠೇವಣಿ ಹಿಂತಿರುಗಿಸಬೇಕೆಂದು ವರದಿಗಾರ ಒತ್ತಾಯಿಸಿದಾಗ, ವೆಬ್‌ಸೈಟ್ ಹ್ಯಾಂಡ್ಲರ್‌ಗಳು ಅವನಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು, ಅವರು ತಮ್ಮ  ವಾಯ್ಸ್ ಡಿಟೇಲ್ ಗಳನ್ನು ತಮ್ಮ ಸ್ನೇಹಿತರೊಂದಿಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುವುದಾಗಿ ಹೇಳಿದರು.

ಈ ವರ್ಷದ ಮೊದಲ ಏಳು ತಿಂಗಳುಗಳು, ಜನವರಿಯಿಂದ ಜುಲೈ ವರೆಗೆ, ಆಫ್‌ಲೈನ್ ಅಪರಾಧ ಪ್ರಕರಣಗಳಲ್ಲಿ ಇಳಿಮುಖವಾಗಿದ್ದರೂ, ಸೈಬರ್ ಅಪರಾಧಗಳು ಹೆಚ್ಚಿವೆ ಮತ್ತು ರಾಜ್ಯಾದ್ಯಂತ 6,082 ಪ್ರಕರಣಗಳು ವರದಿಯಾಗಿವೆ ಎಂದು ಮೂಲಗಳು ತಿಳಿಸಿವೆ.

ಸೈಬರ್ ಅಪರಾಧ ಕೋಶಕ್ಕೆ ಸೇರಿದವರಾದ  ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು, ಹೆಚ್ಚಿನ ಸೈಬರ್ ಅಪರಾಧ ಪ್ರಕರಣಗಳು ಫಿಶಿಂಗ್‌ಗೆ ಸಂಬಂಧಿಸಿದ್ದರೂ, ಅಂತಹ  ಎಸ್ಕಾರ್ಟ್ ಬ್‌ಸೈಟ್‌ಗಳಿಂದ ಪುರುಷರು ಮೋಸ ಹೋಗುವುದಕ್ಕೂ ಗಮನಾರ್ಹ ಸಂಖ್ಯೆಯು ಸಂಬಂಧಿಸಿದೆ ಎಂದು ಹೇಳಿದರು. ಆದರೆ ಸಾಮಾಜಿಕ ಕಳಂಕದಿಂದಾಗಿ ಈ ಪ್ರಕರಣಗಳಲ್ಲಿ ಹೆಚ್ಚಿನವು ವರದಿಯಾಗುವುದಿಲ್ಲ ಎಂದು ಅವರು ಹೇಳಿದರು.

“ಈ ವಂಚಕರಲ್ಲಿ ಹೆಚ್ಚಿನವರು ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಂತಹ ಉತ್ತರ ಭಾರತದ ದೂರದ ಹಳ್ಳಿಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ತನಿಖೆಗಾಗಿ ನಮ್ಮ ತಂಡಗಳು ಈ ರಾಜ್ಯಗಳಿಗೆ ಭೇಟಿ ನೀಡಿವೆ, ಆದರೆ ನಾವು ಯಶಸ್ವಿಯಾಗಲಿಲ್ಲ, ”ಎಂದು ಅವರು ಹೇಳಿದರು.

ಮೈಸೂರು ಎಡಿಜಿಪಿ (ಅಪರಾಧ) ಪರಶಿವ ಮೂರ್ತಿ ಮಾತನಾಡಿ, ಪೊಲೀಸರು ಆನ್‌ಲೈನ್ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಮತ್ತು ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತನಿಖೆ ಮಾಡಲು ಸೈಬರ್ ಸೆಲ್‌ನಲ್ಲಿರುವ ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದಾರೆ. ಅಂತಹ ವೆಬ್‌ಸೈಟ್‌ಗಳ ಬಗ್ಗೆ ನಿಗಾ ಇಡುತ್ತಿದ್ದಾರೆ ಎಂದರು. ಆದರೆ ಆ ಸಂಬಂಧ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com