ಮೇಲ್ಮನೆಯಲ್ಲಿ ಕರ್ನಾಟಕ ಭಿಕ್ಷಾಟನೆ ನಿಷೇಧ (ತಿದ್ದುಪಡಿ) ವಿಧೇಯಕ 2020 ಅಂಗೀಕಾರ

ನ್ಯಾಯಾಲಯದ ನಿರ್ದೇಶನದಂತೆ  ಭಿಕ್ಷುಕರು ಮಾನಸಿಕ ಅಸ್ವಸ್ಥರಾದರೆ, ಕುಷ್ಠರೋಗ ಹಾಗೂ ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿದ್ದರೆ, ಬಂಧನದಲ್ಲಿರುವವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ  ನೀಡುವ ಉದ್ದೇಶವನ್ನೊಳಗೊಂಡ ಕರ್ನಾಟಕ ಭಿಕ್ಷಾಟನೆ ನಿಷೇಧ (ತಿದ್ದುಪಡಿ) ವಿಧೇಯಕ 2020ಕ್ಕೆ ವಿಧಾನಪರಿಷತ್ತಿನಲ್ಲಿಂದು ಅಂಗೀಕಾರ ನೀಡಲಾಗಿದೆ.
ವಿಧಾನಸೌಧ
ವಿಧಾನಸೌಧ
Updated on

ಬೆಂಗಳೂರು: ನ್ಯಾಯಾಲಯದ ನಿರ್ದೇಶನದಂತೆ  ಭಿಕ್ಷುಕರು ಮಾನಸಿಕ ಅಸ್ವಸ್ಥರಾದರೆ, ಕುಷ್ಠರೋಗ ಹಾಗೂ ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿದ್ದರೆ, ಬಂಧನದಲ್ಲಿರುವವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ  ನೀಡುವ ಉದ್ದೇಶವನ್ನೊಳಗೊಂಡ ಕರ್ನಾಟಕ ಭಿಕ್ಷಾಟನೆ ನಿಷೇಧ (ತಿದ್ದುಪಡಿ) ವಿಧೇಯಕ 2020ಕ್ಕೆ ವಿಧಾನಪರಿಷತ್ತಿನಲ್ಲಿಂದು ಅಂಗೀಕಾರ ನೀಡಲಾಗಿದೆ.

ತಿದ್ದುಪಡಿ ಮಸೂದೆ ಕುರಿತು ಮಾಹಿತಿ ನೀಡಿದ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಚಿಕಿತ್ಸೆಯ ನಂತರ ನ್ಯಾಯಾಲಯ ಭಿಕ್ಷುಕರನ್ನು ಎಲ್ಲಿಗೆ ಸೇರಿಸಬೇಕು ಎಂದು ನಿರ್ದೇಶನ ನೀಡುತ್ತದೆಯೊ ಅಲ್ಲಿಗೆ ದಾಖಲಿಸುವ ಅಂಶಗಳನ್ನು ಈ ಮಸೂದೆ ಒಳಗೊಂಡಿದೆ ಎಂದರು. 

ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಪರವಾಗಿ ವಿಧೇಯಕ ಮಂಡಿಸಿ ಮಾತನಾಡಿದ ಅವರು, ವಿಧೇಯಕದಿಂದ ಭೀಕ್ಷಾಟನೆ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಲಿದ್ದು, ಭಿಕ್ಷುಕರನ್ನು ಸಹ ಸೂಕ್ತ ರೀತಿಯಲ್ಲಿ ಅಂದರೆ ಮಾನವೀಯತೆಯಿಂದ ನಡೆಸಿಕೊಳ್ಳಲು ಅವಕಾಶವಾಗಲಿದೆ ಎಂದರು. ಬಳಿಕ ಸದನ ಪ್ರಸ್ತಾವನೆ ಅಂಗೀಕರಿಸಿ ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com