ಬೆಂಗಳೂರು: ಶ್ರೀ ಗುರು ರಾಘವೇಂದ್ರ ಬ್ಯಾಂಕ್'ನ ಬಹುಕೋಟಿ ವಂಚನೆ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಬ್ಯಾಂಕ್'ನ ಅಧ್ಯಕ್ಷ ಹಾಗೂ ನಿರ್ದೇಶಕ, ಸಾಲಗಾರನ ಬಗ್ಗೆ ಮಾಹಿತಿ ನೀಡಿದವರಿಗೆ ಸಿಐಡಿ ಬಹುಮಾನ ಘೋಷಿಸಿದೆ.
ನಗರದ ಬಸವನಗುಡಿಯಲ್ಲಿ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ನಡೆದಿದ್ದ ಅವ್ಯವಹಾರ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ರಾಮಕೃಷ್ಣ ಕೆ, ವೇಣುಗೋಪಾಲ್ ಕೆ ಆರ್, ರಘುನಾಥ್ ಜಿ ಮೂವರು ನಾಪತ್ತೆಯಾಗಿದ್ದಾರೆ. 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ಘೋಷಿತ ಅಪರಾಧಿಗಳು ಎಂದು ಉದ್ಘೋಷಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ತಲೆಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಯಾರಿಗಾದರೂ ಮಾಹಿತಿ ಇದಲ್ಲಿ ಪೊಲೀಸ್ ಉಪಾಧೀಕ್ಷಕರು, ಫೈನಾನ್ಷಿಯಲ್ ಇಂಟೆಲಿಜೆನ್ಸ್ ವಿಭಾಗ, ಸಿಐಡಿ ಬೆಂಗಳೂರು ಈ ವಿಳಾಸ ಅಥವಾ ಕಂಟ್ರೋಲ್ ರೂಂ.080-22094485/22094498, ಮೊಬೈಲ್: 9480800181ಗೆ ಸಂಪರ್ಕಿಸಿ ಎಂದು ಸಿಐಡಿ ಪೊಲೀಸ್ ಅಧೀಕ್ಷಕ ರಾಘವೇಂದ್ರ ಕೆ ಹೆಗಡಿ ಅವರು ಕೋರಿದ್ದಾರೆ.
Advertisement