ಆರೋಗ್ಯ ಸಚಿವ ಶ್ರೀರಾಮುಲು
ರಾಜ್ಯ
ಶ್ರೀರಾಮನಂತೆ ಸರ್ಕಾರದ ಆದೇಶ ಪಾಲಿಸಿ: ಆರೋಗ್ಯ ಸಚಿವ ಶ್ರೀರಾಮುಲು
ಪಿತೃವಾಕ್ಯ ಪರಿಪಾಲಕ ಶ್ರೀರಾಮನಂತೆ ನೀವು ಸರ್ಕಾರದ ವಾಕ್ಯವನ್ನು ಪಾಲಿಸಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳಿದ್ದಾರೆ.
ಬೆಂಗಳೂರು: ಪಿತೃವಾಕ್ಯ ಪರಿಪಾಲಕ ಶ್ರೀರಾಮನಂತೆ ನೀವು ಸರ್ಕಾರದ ವಾಕ್ಯವನ್ನು ಪಾಲಿಸಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಶ್ರೀರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಶ್ರೀರಾಮ 14 ವರ್ಷ ‘ವನವಾಸ’ ಮಾಡಿದಂತೆ ನೀವು 21 ದಿನಗಳ ‘ಗೃಹವಾಸ’ ಮಾಡಿರಿ. ಮನೆಯ ಲಕ್ಮಣ ರೇಖೆಯನ್ನು ದಾಟದಿರಿ. ಮನೆ ಮಂದಿಗೆ ಮಜ್ಜಿಗೆ-ಪಾನಕ-ಕೊಸಂಬರಿ ಹಂಚಿ ರಾಮನವಮಿಯನ್ನು ಸಂಭ್ರಮಿಸಿ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ