ಹುಬ್ಬಳ್ಳಿಯಲ್ಲಿ ಯುವಕರಿಂದ ಪೊಲೀಸರತ್ತ ಕಲ್ಲುತೂರಾಟ

ದೇಶದಲ್ಲಿ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಘೋಷಿಸಲಾಗಿದ್ದು, ಜನ ಜಮಾಣೆಗೊಳ್ಳದಂತೆ ಸೂಚಿಸಿರುವುದನ್ನು ಲೆಕ್ಕಿಸಿದ ಯುವಕರು ಪೊಲೀಸರತ್ತ ಕಲ್ಲು ತೂರಾಟ ಮಾಡಿರುವ ಘಟನೆ ವರದಿಯಾಗಿದೆ.

Published: 03rd April 2020 07:27 PM  |   Last Updated: 03rd April 2020 08:09 PM   |  A+A-


Prayer goers hurl stones; four policemen injured

ಪೊಲೀಸರತ್ತ ಕಲ್ಲು ತೂರುತ್ತಿರುವ ಜನ

Posted By : Srinivasamurthy VN
Source : RC Network

ಹುಬ್ಬಳ್ಳಿ: ದೇಶದಲ್ಲಿ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಘೋಷಿಸಲಾಗಿದ್ದು, ಜನ ಜಮಾಣೆಗೊಳ್ಳದಂತೆ ಸೂಚಿಸಿರುವುದನ್ನು ಲೆಕ್ಕಿಸಿದ ಯುವಕರು ಪೊಲೀಸರತ್ತ ಕಲ್ಲು ತೂರಾಟ ಮಾಡಿರುವ ಘಟನೆ ವರದಿಯಾಗಿದೆ.

ಇಲ್ಲಿನ ಮಂಟೂರ್ ರೋಡ್ ಹತ್ತಿರದ ಅರಳಿಕಟ್ಟಿ ಕಾಲೋನಿ ಬಳಿ ನಮಾಜ್ ಮಾಡುವ ವಿಷಯಕ್ಕೆ ಸಂಬಂಧಿಸಿದ್ದಂತೆ ಗಲಾಟೆ ನಡೆದಿದೆ. ಅಲ್ಲದೇ ಪೊಲೀಸರ ಮೇಲೆ ಸ್ಥಳಿಯ ಮುಸ್ಲಿಂ ಯುವಕರು ಕಲ್ಲುತೂರಾಟ ನಡೆಸಿರುವ ಘಟನೆ ನಡೆದಿದ್ದು, ಪ್ರತಿಯೊಂದು ದೃಶ್ಯಗಳನ್ನು ಸ್ಥಳೀಯರೊಬ್ಬರು  ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಜನಜಮಾವಣೆಯಿಂದ ನಮಾಜ್ ಮಾಡುತ್ತಿರುವ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದರು. ಇದೇ ವೇಳೆ ಮಾತಿನ ಚಕಮಕಿ ನಡೆದಿದೆ. ಯುವಕರು ಏಕಾಏಕಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಪೊಲೀಸರು ಗಂಭೀರವಾಗಿ  ಗಾಯಗೊಂಡಿದ್ದು, ಕಿಮ್ಸ್ ಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp