ಕೋವಿಡ್-19: ಸಕ್ಕರೆ ಕಾರ್ಖಾನೆಗಳಿಂದ ಉಚಿತವಾಗಿ ಹ್ಯಾಂಡ್ ಸ್ಯಾನಿಟೈಸರ್ ನೀಡುವಂತೆ ರೈತರ ಒತ್ತಾಯ

ಕೋವಿಡ್ -19 ವ್ಯಾಪಕವಾಗಿ ಹರಡುತ್ತಿದ್ದರೂ ಅನೇಕ ಹಳ್ಳಿಗಳು ಹಾಗೂ ಪಟ್ಣಣಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಸಿಗುತ್ತಿಲ್ಲ. ಆದ್ದರಿಂದ ಸ್ಥಳೀಯ ಬೇಡಿಕೆಯನ್ನು ಪೂರೈಸಲು ಡಿಸ್ಟಿಲರೀಸ್ ಗಳೊಂದಿಗೆ ಸಕ್ಕರೆ ಕಾರ್ಖಾನೆಗಳನ್ನು ಸರ್ಕಾರ ಬಳಸಿಕೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಪೊಲೀಸರಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕುತ್ತಿರುವ ಆರೋಗ್ಯ ಸಿಬ್ಬಂದಿ
ಪೊಲೀಸರಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕುತ್ತಿರುವ ಆರೋಗ್ಯ ಸಿಬ್ಬಂದಿ

ಮೈಸೂರು: ಕೋವಿಡ್ -19 ವ್ಯಾಪಕವಾಗಿ ಹರಡುತ್ತಿದ್ದರೂ ಅನೇಕ ಹಳ್ಳಿಗಳು ಹಾಗೂ ಪಟ್ಣಣಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಸಿಗುತ್ತಿಲ್ಲ. ಆದ್ದರಿಂದ ಸ್ಥಳೀಯ ಬೇಡಿಕೆಯನ್ನು ಪೂರೈಸಲು ಡಿಸ್ಟಿಲರೀಸ್ ಗಳೊಂದಿಗೆ ಸಕ್ಕರೆ ಕಾರ್ಖಾನೆಗಳನ್ನು ಸರ್ಕಾರ ಬಳಸಿಕೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಸ್ಯಾನಿಟೈಸರ್  ನೀಡುವುದರಿಂದ ಕೊರೋನಾ ವೈರಸ್ ಹರಡದಂತೆ ಆರೋಗ್ಯ ಮತ್ತು ನೈರ್ಮಲ್ಯದ ಅಗತ್ಯತೆ ಬಗ್ಗೆ ಜನ ಸಮುದಾಯದಲ್ಲಿ ಅರಿವು ಮೂಡಿಸಬಹುದಾಗಿದೆ ಎಂದು ಕೃಷಿಕ ಸಮುದಾಯ ಅಭಿಪ್ರಾಯ ವ್ಯಕ್ತಪಡಿಸಿದೆ. 

ನಗರ ಪ್ರದೇಶಗಳಲ್ಲಿಯೂ ಸ್ಯಾನಿಟೈಸರ್ಸ್ ಕೊರತೆಯಾಗುತ್ತಿದೆ. ಕಲಬೆರಕೆ ಸ್ಯಾನಿಟೈಸರ್  ವರದಿಗಳು ಕೇಳಿಬಂದಿದ್ದು, ಸಂಬಂಧಿತ ಇಲಾಖೆಗಳನ್ನು ಆಂತಕ್ಕೊಳಗಾಗಿವೆ. ಒಬ್ಬರಿಂದ ಒಂದು ಬಾಟಲಿನಂತೆ ಕೆಲವರು ಸ್ಯಾನಿಟೈಸರ್  ಮಾರಾಟ ಮಾಡುತ್ತಿದ್ದಾರೆ. 

 ಲಿಕ್ಕರ್ ಮಾರಾಟ ನಿರ್ಬಂಧದಿಂದಾಗಿ  ರಾಜ್ಯದಲ್ಲಿನ 19 ಸಕ್ಕರೆ ಕಾರ್ಖಾನೆ ಹಾಗೂ 18ಕ್ಕೂ ಹೆಚ್ಚು  ಡಿಸ್ಟಿಲರಿ ಘಟಕಗಳಲ್ಲಿ   ಸ್ಪಿರಿಟ್ ಉತ್ಪಾದನೆ ಸ್ಥಗಿತಗೊಂಡಿದ್ದು,  ಗ್ರಾಮೀಣ ಪ್ರದೇಶದ ಜನರಿಗಾಗಿ ಸ್ಯಾನಿಟೈಸರ್ಸ್ ಉತ್ಪಾದಿಸಿ ಪೂರೈಕೆ ಮಾಡುವಂತೆ ಕಬ್ಬು ಬೆಳೆಗಾರರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಪ್ರತಿ ಟನ್ ಕಬ್ಬು ಅರೆಯುವುದರಿಂದ  40 ಕೆಜಿ ಮೊಲಾಸಸ್ ಮತ್ತು 9 ಲೀಟರ್ ಸ್ಪಿರಿಟ್ ಅನ್ನು ಉತ್ಪಾದಿಸುತ್ತದೆ. ಲೀಟರ್ ಗೆ 28 ರೂ. ನಂತೆ ಸ್ಪಿರಿಟ್ ಮಾರಾಟ ಮಾಡುವುದರಿಂದ ಸಕ್ಕರೆ ಕಾರ್ಖಾನೆಗಳಿಗೆ ಯಾವುದೇ ನಷ್ಟವಾಗುವುದಿಲ್ಲ, ಹಾಲಿನ ಘಟಕಗಳ ಮೂಲಕ ಉಚಿತವಾಗಿ ನೀಡುವುದರಿಂದ ಜನರ ಆರೋಗ್ಯ ರಕ್ಷಣೆಯಾಗಲಿದೆ ಎಂದು ಕಬ್ಬು ಬೆಳೆಗಾರ ಕೃಷ್ಣ ಎಂಬುವರು ಹೇಳುತ್ತಾರೆ. 

ಮೈಸೂರು ಹಾಗೂ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿರುವುದರಿಂದ ಅವುಗಳನ್ನು ಹೊರತುಪಡಿಸದಂತೆ ಮಂಡ್ಯ ಜಿಲ್ಲೆಯ ಎಲ್ಲಾ 2019 ಹಳ್ಳಿಗಳನ್ನು ಸಕ್ಕರೆ ಕಾರ್ಖಾನೆಗಳು ಒಳಗೊಂಡಿರಬೇಕು ಎಂದು ಕೃಷ್ಣ ತಿಳಿಸಿದ್ದಾರೆ. 

ಸಕ್ಕರೆ ಕಾರ್ಖಾನೆಗಳು ಎಲ್ಲಾ ಜಿಲ್ಲೆಗಳು, ಆಸ್ಪತ್ರೆಗಳು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಸ್ಯಾನಿಟೈಸರ್  ವಿತರಿಸುವ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಎಂಟು ಡಿಸ್ಟಿಲರಿಗಳು ಸ್ಯಾನಿಟೈಸರ್ಸ್ ಉತ್ಪಾದನೆಯನ್ನು ಆರಂಭಿಸಿದ್ದು, ಈ ಪೈಕಿ ಎಂಟು ಡಿಸ್ಟಿಲರಿಗಳು ಅಬಕಾರಿ ಇಲಾಖೆಯಿಂದ ಅನುಮತಿ ಪಡೆದಿದ್ದಾರೆ. ಶೀಘ್ರದಲ್ಲಿಯೇ ಸ್ಯಾನಿಟೈಸರ್ಸ್  ಜಿಲ್ಲಾಡಳಿತ ಹಾಗೂ ಇತರ ಸಂಸ್ಥೆಗಳಿಗೆ ತಲುಪಲಿದ್ದು, ಗ್ರಾಮೀಣ ಪ್ರದೇಶ ಹಾಗೂ ಬಡವರಿಗೂ ದೊರಕಲಿದೆ ಎಂದು ಕಬ್ಬು ಅಭಿವೃದ್ಧಿ  ಆಯುಕ್ತ ಅಕ್ರಂ ಪಾಷ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com