ಕೊರೋನಾ ಲಾಕ್‌ಡೌನ್ ನಡುವೆ ನಿರಾಶ್ರಿತ ನಾರಿಗೆ ಹುಬ್ಬಳ್ಳಿ ಪೋಲೀಸರ ನೆರವಿನ ಹಸ್ತ

ದೇಶಾದ್ಯಂತ ಕೊರೋನಾ ಲಾಕ್ ಡೌನ್ ಕಾರಣ ದಿನಗೂಲಿಗಳು, ಬಡವರು ತೊಂದರೆಗೀಡಾಗಿದ್ದಾರೆ. ಈ ಸಮಯದಲ್ಲಿ ಪೋಲೀಸರು ಇಂತಹವರ ಸಹಾಯಕ್ಕೆ ಬರುತ್ತಿದ್ದಾರೆ. ಶುಕ್ರವಾರ  ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ  ಬೀದಿಯಲ್ಲಿ ತಂಗಿದ್ದ ಮಹಿಳೆಯೊಬ್ಬರಿಗೆ ಮಹಿಳಾ ಪೊಲೀಸರು ಸ್ನಾನ  ಮಾಡಿಸಿದ್ದಾರೆ.

Published: 03rd April 2020 03:34 PM  |   Last Updated: 03rd April 2020 03:38 PM   |  A+A-


ಕರೋನಾ ಲಾಕ್‌ಡೌನ್ ನಡುವೆ ನಿರಾಶ್ರಿತ ನಾರಿಗೆ ಹುಬ್ಬಳ್ಳಿ ಪೋಲೀಸರ ನೆರವಿನ ಹಸ್ತ

Posted By : Raghavendra Adiga
Source : The New Indian Express

ಹುಬ್ಬಳ್ಳಿ: ದೇಶಾದ್ಯಂತ ಕೊರೋನಾ ಲಾಕ್ ಡೌನ್ ಕಾರಣ ದಿನಗೂಲಿಗಳು, ಬಡವರು ತೊಂದರೆಗೀಡಾಗಿದ್ದಾರೆ. ಈ ಸಮಯದಲ್ಲಿ ಪೋಲೀಸರು ಇಂತಹವರ ಸಹಾಯಕ್ಕೆ ಬರುತ್ತಿದ್ದಾರೆ. ಶುಕ್ರವಾರ  ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ  ಬೀದಿಯಲ್ಲಿ ತಂಗಿದ್ದ ಮಹಿಳೆಯೊಬ್ಬರಿಗೆ ಮಹಿಳಾ ಪೊಲೀಸರು ಸ್ನಾನ  ಮಾಡಿಸಿದ್ದಾರೆ.

ತೊಂದರೆಯಲ್ಲಿದ್ದ ಮಹಿಳೆ ಸುಮಾರು ಎರಡು ವಾರಗಳಿಂದ ಸ್ನಾನ ಮಾಡಿರಲಿಲ್ಲ. ಕೊರೋನಾ ಲಾಕ್ ಡೌನ್ ಕಾರಣ ಭಾರತೀಯ ರೈಲ್ವೆ ತನ್ನೆಲ್ಲಾ ರೈಲು ಕಾರ್ಯಾಚರಣೆಯನ್ನು ಸ್ಥಗಿತವನ್ನಾಗಿಸಿದೆ.  ಇದರ ಪರಿಣಾಮವಾಗಿ ಯಾವುದೇ ಜನರು ನಿಲ್ದಾಣಕ್ಕೆ ಭೇಟಿ ನೀಡುತ್ತಿಲ್ಲ ಮತ್ತು ಯಾರಿಂದಲೂ ಆಕೆಗೆ ಸಹಾಯ ಸಿಗುತ್ತಿಲ್ಲ.

ಮಹಿಳೆ ರೈಲ್ವೆ ನಿಲ್ದಾಣದ ಬಳಿ ಹಲವು ದಿನಗಳಿಂದ ತಂಗಿದ್ದು ಊಟಕ್ಕಾಗಿ ಗೋಗೆರೆಯುತ್ತಿದ್ದಳು. ರೈಲು ಸೇವೆಗಳು ಸ್ಥಗಿತಗೊಂಡ ನಂತರ ಮತ್ತು ಹೋಟೆಲ್‌ಗಳು ಮುಚ್ಚಿದ ನಂತರ, ಅವಳು ಸರಿಯಾಗಿ ಆಹಾರವನ್ನು ಸೇವಿಸಿರಲಿಲ್ಲ. ಇದನ್ನು ಗಮನಿಸಿದಪೋಲೀಸ್ ಅಧಿಕಾರಿಗಳು ಈ ವಿಷಯವನ್ನು ತಮ್ಮ ಠಾನಾಧಿಕಾರಿಗಳಿಗೆ ಹೇಳಿದ್ದಾರೆ.ಆ ನಂತರ ಕೆಲ ಮಹಿಳಾ ಅಪೋಲೀಸರು ಸಂತ್ರಸ್ಥೆಯಿದ್ದ ಸ್ಥಳಕ್ಕೆ ಆಗಮಿಸಿದ್ದಾರೆ.

ಸಹಾಯಕ ಸಬ್ ಇನ್ಸ್‌ಪೆಕ್ಟರ್ ಎಲಿಜಬೆತ್ಪೊತಗೋಳಿಹೋಮ್ ಗಾರ್ಡ್ ಕಾನ್‌ಸ್ಟೆಬಲ್ ಎಸ್‌.ಎಚ್. ​​ಕಲ್ಲಿ ಜತೆಯಾಗಿ ಸ್ಥಳಕ್ಕೆ ಭೇಟಿ ನೀಡಿ ನೆಲೆಯಿಲ್ಲದ ಮಹಿಳೆಯೊಂದಿಗೆ ಮಾತನಾಡಿದ್ದಾರೆ "ಅವಳು ಮಾನಸಿಕವಾಗಿ ಸ್ಥಿರವಾಗಿದ್ದಳು ಆದರೆ ಕಾಲು ನೋವಿನ ಕಾರಣ ನಡೆಯಲು ಸಾಧ್ಯವಾಗುತ್ತಿರಲಿಲ್ಲ. . ನಾವು ಅವಳಿಗೆ ಸ್ನಾನ ಮಾಡಿಸಿ ಬಟ್ಟೆ, ಔಷಧಿ  ಆಹಾರ ಮತ್ತು ಮಾಸ್ಕ್ ನೀಡಿದ್ದೇವೆ. ನಾವು ಅದನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಿದ್ದೇವೆ ಇದೀಗ ಆಕೆಯನ್ನು ನಗರದ  ಪುನರ್ವಸತಿ ಕೇಂದ್ರ,ಕ್ಕೆ ಸ್ಥಳಾಂತರಿಸಲಾಗುತ್ತದೆ" "ಅವರು ಹೇಳಿದರು.

ನಗರದಲ್ಲಿ ಕೊರೋನಾವೈರಸ್  ಭಯದ ಸಮಯದಲ್ಲಿ ಪೊಲೀಸರ ಕೃತ್ಯವನ್ನು ಜನರು ಮೆಚ್ಚಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp