ಭಾರತ ಲಾಕ್‌ಡೌನ್: ಮೊಟ್ಟೆ, ಮ್ಯಾಗಿ ಕಳಿಸಿ ಎಂದು ಪಿಎಂಒ ಕಚೇರಿಗೆ ಟ್ವೀಟ್ ಮಾಡಿದ ಮಂಗಳೂರು ವೈದ್ಯಕೀಯ ವಿದ್ಯಾರ್ಥಿನಿ!

ಲಾಕ್‌ಡೌನ್ ಅವಧಿಯಲ್ಲಿ ಜನರು ಅಗತ್ಯ ವಸ್ತುಗಳ ಕೊರತೆ ನಡುವೆಯೂ ಧಾವಂತವಿಲ್ಲದ  ಜೀವನವನ್ನು ಮುಂದುವರಿಸಲು ಜನರು ಒಗ್ಗಿದ್ದಾರೆ. ಆದರೆ ಮಂಗಳುರಿನ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ತನಗೆ ಮೊಟ್ಟೆ ಹಾಗೂ ಮ್ಯಾಗಿಯು ಅಗತ್ಯವಿದೆ, ಕಳಿಸಿಕೊಡಿ ಎಂದು ಪ್ರಧಾನಮಂತ್ರಿ ಕಚೇರಿಗೆ (ಪಿಎಂಒ) ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾಳೆ.
ಭಾರತ ಲಾಕ್‌ಡೌನ್: ಮೊಟ್ಟೆ, ಮ್ಯಾಗಿ ಕಳಿಸಿ ಎಂದು ಪಿಎಂಒ ಕಚೇರಿಗೆ ಟ್ವೀಟ್ ಮಾಡಿದ ಮಂಗಳೂರು ವೈದ್ಯಕೀಯ ವಿದ್ಯಾರ್ಥಿನಿ
ಭಾರತ ಲಾಕ್‌ಡೌನ್: ಮೊಟ್ಟೆ, ಮ್ಯಾಗಿ ಕಳಿಸಿ ಎಂದು ಪಿಎಂಒ ಕಚೇರಿಗೆ ಟ್ವೀಟ್ ಮಾಡಿದ ಮಂಗಳೂರು ವೈದ್ಯಕೀಯ ವಿದ್ಯಾರ್ಥಿನಿ

ಮಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಜನರು ಅಗತ್ಯ ವಸ್ತುಗಳ ಕೊರತೆ ನಡುವೆಯೂ ಧಾವಂತವಿಲ್ಲದ  ಜೀವನವನ್ನು ಮುಂದುವರಿಸಲು ಜನರು ಒಗ್ಗಿದ್ದಾರೆ. ಆದರೆ ಮಂಗಳುರಿನ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ತನಗೆ ಮೊಟ್ಟೆ ಹಾಗೂ ಮ್ಯಾಗಿಯು ಅಗತ್ಯವಿದೆ, ಕಳಿಸಿಕೊಡಿ ಎಂದು ಪ್ರಧಾನಮಂತ್ರಿ ಕಚೇರಿಗೆ (ಪಿಎಂಒ) ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾಳೆ.

ಇದಕ್ಕೂ ಅಚ್ಚರಿ ಎಂದರೆ ಆಕೆ ಬೇಡಿಕೆ ಇಟ್ಟ ಕೇವಲ ಅರ್ಧ ಗಂಟೆಯಲ್ಲಿ ಅವಳಿಗೆ ಮ್ಯಾಗಿ ಹಾಗೂ ಮೊಟ್ಟೆಯನ್ನು ಪಊರೈಸಲಾಗಿದೆ. 

ಉತ್ತರ ಭಾರತ ರಾಜ್ಯದ ಮೂಲದವಳಾದ ವೈದ್ಯಕೀಯ ವಿದ್ಯಾರ್ಥಿನಿ ಸೌಮ್ಯಾ ಸಿಂಗ್ ಮಂಗಳೂರುಲೇಡೀಸ್ ಹಾಸ್ಟೆಲ್‌ನಲ್ಲಿ ನೆಲೆಸಿದ್ದಾಳೆ.ಮಾರ್ಚ್ 31 ರಂದು ಎಲ್ಲಾ ಅಂಗಡಿಗಳನ್ನು ಮುಚ್ಚಿದ ನಂತರ ಸೌಮ್ಯಾ ಪಿಎಂಒಗೆ ಮೊಟ್ಟೆ ಮತ್ತು ಮ್ಯಾಗಿ ಸರಬರಾಜು ಮಾಡುವಂತೆ ಟ್ವೀಟ್ ಮಾಡಿದ್ದಾಳೆ.  . ಈ ಟ್ವೀಟ್ ಅನ್ನು ಕರ್ನಾಟಕ ನಗರಾಭಿವೃದ್ಧಿ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಗಮನಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್  ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದ್ದ ಇಲ್ಲಿನ ವಾರ್ ರೂಮಿಗೆ ಅವರು ಮಾಹಿತಿ ಕೊಟ್ಟಿದ್ದಾರೆ.

ಪ್ರದ್ಯುಮ್ನಾ ರಾವ್ ನೇತೃತ್ವದ ತಂಡವು ವಿದ್ಯಾರ್ಥಿನಿಯ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಆಕ್ಗೆ ನಿಖರವಾಗಿ ಏನು ಬೇಕಾಗಿದೆ ಎಂದು ತಿಳಿದುಕೊಂಡಿದೆ. ವಿದ್ಯಾರ್ಥಿನಿ ತನಗೆ ಒಂದು ಡಜನ್ ಮೊಟ್ಟೆ ಹಾಗೂ ಆರು ಪ್ಯಾಕೆಟ್ ಮ್ಯಾಗಿ ಬೇಕೆಂದು ಬೇಡಿಕೆ ಇಟ್ಟಿದ್ದಾಳೆ.ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ವಿದ್ಯಾರ್ಥಿನಿಗೆ ಅಗತ್ಯವಾಗಿರುವ ಮೊಟ್ಟೆ ಹಾಗೂ ಮ್ಯಾಗಿಯನ್ನು ಉಚಿತವಾಗಿ ಒದಗಿಸಿಕೊಡುತ್ತಾರೆ.. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com