ಕೊವಿಡ್-19: ಹೈಕೋರ್ಟ್ ನ್ಯಾಯಮೂರ್ತಿಗಳು, ಸಿಬ್ಬಂದಿಯಿಂದ 59.40 ಲಕ್ಷ ರೂ. ನೆರವು

ಕೊವಿಡ್-19 ವಿರುದ್ಧದ ಹೋರಾಟಕ್ಕೆ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇತರ ನ್ಯಾಯಮೂರ್ತಿಗಳು, ಅಧಿಕಾರಿಗಳು, ಸಿಬ್ಬಂದಿ ಒಟ್ಟಾಗಿ 59.40 ಲಕ್ಷ ರೂ. ನೆರವು ನೀಡಿದ್ದಾರೆ. 

Published: 07th April 2020 06:57 PM  |   Last Updated: 07th April 2020 06:57 PM   |  A+A-


High court

ಹೈಕೋರ್ಟ್

Posted By : Lingaraj Badiger
Source : UNI

ಬೆಂಗಳೂರು: ಕೊವಿಡ್-19 ವಿರುದ್ಧದ ಹೋರಾಟಕ್ಕೆ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇತರ ನ್ಯಾಯಮೂರ್ತಿಗಳು, ಅಧಿಕಾರಿಗಳು, ಸಿಬ್ಬಂದಿ ಒಟ್ಟಾಗಿ 59.40 ಲಕ್ಷ ರೂ. ನೆರವು ನೀಡಿದ್ದಾರೆ. 

ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇತರ ನ್ಯಾಯಮೂರ್ತಿಗಳು ಒಟ್ಟು 8.25 ಲಕ್ಷ ರೂ.ಗಳ ಚೆಕ್ ನೀಡಿದ್ದರೆ, ಕೆಲ ನ್ಯಾಯಮೂರ್ತಿಗಳು 2.50 ಲಕ್ಷ ರೂ. ಮೊತ್ತವನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. 

ಹೈಕೋರ್ಟ್ ನ ನ್ಯಾಯಾಂಗ ಅಧಿಕಾರಿಗಳು ಮೂರು ದಿನಗಳ ವೇತನ ಸೇರಿ 6.06 ಲಕ್ಷ ರೂ. ದೇಣಿಗೆ ನೀಡಿದ್ದರೆ, ಇತರ ಸಿಬ್ಬಂದಿಯ ಒಂದು ದಿನದ ವೇತನ ಸೇರಿ 42.58 ಲಕ್ಷ ರೂ. ನೆರವು ಒದಗಿಸಲಾಗಿದೆ. 

ಜೊತೆಗೆ, ರಾಜ್ಯಾದ್ಯಂತ ನ್ಯಾಯಾಂಗ ಅಧಿಕಾರಿಗಳು ಮೂರು ದಿನ ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿ ಒಂದು ದಿನದ ವೇತನವನ್ನು ಕೋವಿಡ್-19 ನೆರವಿನ ನಿಧಿಗೆ ನೀಡಲಿದ್ದಾರೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp