ಬಂಗಾಳದ ವ್ಯಕ್ತಿಗೆ ತುಮಕೂರಿನಲ್ಲಿ ಸ್ಥಳೀಯರಿಂದ ಅಂತ್ಯಸಂಸ್ಕಾರ, ವಿಡಿಯೋ ಕರೆ ಮೂಲಕ ರಕ್ತ ಸಂಬಂಧಿಗಳ ವೀಕ್ಷಣೆ!

ಕೊರೋನಾ ಮಹಾಮಾರಿ ಹರಡದಂತೆ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಪಶ್ಚಿಮ ಬಂಗಾಳದ ವ್ಯಕ್ತಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದ್ದು ರಕ್ತ ಸಂಬಂಧಿಕರೂ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಸಂಸ್ಕಾರವನ್ನು ವೀಕ್ಷಿಸಿದರು.
ಅಂತ್ಯ ಸಂಸ್ಕಾರದ ದೃಶ್ಯ
ಅಂತ್ಯ ಸಂಸ್ಕಾರದ ದೃಶ್ಯ

ತುಮಕುರು: ಕೊರೋನಾ ಮಹಾಮಾರಿ ಹರಡದಂತೆ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಪಶ್ಚಿಮ ಬಂಗಾಳದ ವ್ಯಕ್ತಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದ್ದು ರಕ್ತ ಸಂಬಂಧಿಕರೂ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಸಂಸ್ಕಾರವನ್ನು ವೀಕ್ಷಿಸಿದರು.

ಪಶ್ಚಿಮ ಬಂಗಾಳದ 67 ವರ್ಷದ ಕನೈ ದಾಸ್, ಕರ್ಚೀಫ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಹೃದಯಾಘಾತದಿಂದ ಮೃತಪಟ್ಟಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ಆತನ ಶವವನ್ನು ತವರಿಗೆ ಕಳುಹಿಸಲು ಸಾಧ್ಯವಾಗದಿದ್ದರಿಂದ ತುಮಕೂರಿನಲ್ಲೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ರಕ್ತ ಸಂಬಂಧಿಗಳು ವಾಟ್ಸಾಪ್ ವಿಡಿಯೋ ಕರೆಯಲ್ಲಿ ನೇರ ಪ್ರಸಾರವಾಗಿದ್ದರಿಂದ ಶವ ಸಂಸ್ಕಾರಕ್ಕೆ ಸಾಕ್ಷಿಯಾಗಬೇಕೆಂಬ ಆಸೆ ಕೂಡ ಈಡೇರಿತು.

ಮೃತ ಕನೈದಾಸ್ ಎರಡು ದಶಕಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಎಂಜಿ ರಸ್ತೆಯಲ್ಲಿನ ಕೃಷ್ಣ ಚಿತ್ರರಂಗದ ಬಳಿ ಕೆರ್ಚೀಫ್‌ಗಳನ್ನು ಮಾರಾಟ ಮಾಡುವ ಮೂಲಕ ಅವರು ಜೀವನ ಸಾಗಿಸಿದರು.

"ಅವರು ಕನ್ನಡಿಗರಲ್ಲದಿದ್ದರೂ ನಮ್ಮೊಂದಿಗೆ ಸ್ನೇಹ ಬೆಳೆಸಿದರು ಮತ್ತು ಅದಕ್ಕಾಗಿಯೇ ನಾವು ಅಂತಿಮ ವಿಧಿಗಳನ್ನು ನೆರವೇರಿಸಿದ್ದೇವೆ ಎಂದು ಸ್ನೇಹಿತ ರಾಮಣ್ಣ ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com