ಲಾಕ್ ಡೌನ್ ನಡುವೆ ತರಕಾರಿ ಮಾರಿ ಕುಟುಂಬಕ್ಕೆ ಆಸರೆಯಾದ ಮಹಿಳೆ

ಲಾಕ್ ಡೌನ್ ಮಾಡುವ ಮೊದಲು, ತನುಜಾ ಹೆಚ್ ತನ್ನ ಕುಟುಂದಲ್ಲಿ ದುಡಿಯುವ ಏಕೈಕ ವ್ಯಕ್ತಿ ಎನಿಸಿಕೊಳ್ಲದಿದ್ದರೂ ತನ್ನ ಕೈಲಾದಷ್ಟು ಕೆಲಸ ಮಾಡಿ ಕುಟುಂಬದ ಜವಾಬ್ದಾರಿ ಪೂರೈಸುತ್ತಿದ್ದರು. ಆಕೆ ಹುಳಿಮಾವುವಿನಲ್ಲಿ  ತನ್ನ ಮನೆಯ ಪಕ್ಕದ ಟೈಲರಿಂಗ್ ಶಾಪಿನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ಆದ ಪರಿಣಾಮ ಇದೀಗ ಟೈಲರಿಂಗ್ ಶಾಪಿಗೆ ಬೀಗ ಹಾಕಿ ಕನಿಷ್ಟ 30
ಲಾಕ್ ಡೌನ್ ನಡುವೆ ತರಕಾರಿ ಮಾರಿ ಕುಟುಂಬಕ್ಕೆ ಆಸರೆಯಾದ ಮಹಿಳೆ
ಲಾಕ್ ಡೌನ್ ನಡುವೆ ತರಕಾರಿ ಮಾರಿ ಕುಟುಂಬಕ್ಕೆ ಆಸರೆಯಾದ ಮಹಿಳೆ

ಬೆಂಗಳೂರು: ಲಾಕ್ ಡೌನ್ ಮಾಡುವ ಮೊದಲು, ತನುಜಾ ಹೆಚ್ ತನ್ನ ಕುಟುಂದಲ್ಲಿ ದುಡಿಯುವ ಏಕೈಕ ವ್ಯಕ್ತಿ ಎನಿಸಿಕೊಳ್ಲದಿದ್ದರೂ ತನ್ನ ಕೈಲಾದಷ್ಟು ಕೆಲಸ ಮಾಡಿ ಕುಟುಂಬದ ಜವಾಬ್ದಾರಿ ಪೂರೈಸುತ್ತಿದ್ದರು. ಆಕೆ ಹುಳಿಮಾವುವಿನಲ್ಲಿ  ತನ್ನ ಮನೆಯ ಪಕ್ಕದ ಟೈಲರಿಂಗ್ ಶಾಪಿನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ಆದ ಪರಿಣಾಮ ಇದೀಗ ಟೈಲರಿಂಗ್ ಶಾಪಿಗೆ ಬೀಗ ಹಾಕಿ ಕನಿಷ್ಟ 30  ದಿನಗಳು ಕಳೆದಿದೆ. ಆದರೆ ತನುಜಾ ಇದರಿಂದ ಬೇಸರವಾಗಿಲ್ಲ. ಆಕೆ ಇದೀಗ ತನ್ನ ಪತಿ ಸೋಮಶೇಖರ್ ನಡೆಸುತ್ತಿದ್ದ ತರಕಾರಿ ಅಂಗಡಿಯನ್ನು ನಿರ್ವಹಿಸುತ್ತಿದ್ದಾಳೆ. 

“ನಾನು ಐದು ಜನರ ಕುಟುಂಬದಿಂದ ಬಂದವಳು. ನಾನೇನೂ ಕೆಲಸ ಮಾಡದಿದ್ದರೆ ಮನೆ ಖರ್ಚುಗಳು ಹೇಗೆ ನಿಭಾಯಿಸಲ್ಪಡುತ್ತದೆ?"ತನುಜಾ ಪ್ರಶ್ನಿಸಿದ್ದಾರೆ.ಇದೀಗ ಆಕೆ ದಿನನಿತ್ಯ ತರಕಾರಿ ಮಾರಾಟಕ್ಕೆ ಅನುವಾಗುವಂತೆ ವಿವಿಧ ತರಕಾರಿಗಳನ್ನು ಅಂಗಡಿಯಲ್ಲಿ ಸುಂದರವಾಗಿ ಜೋಡಿಸುತ್ತಾಳೆ.ತನುಜಾ ತನ್ನ ಪತಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಅತ್ತೆಯೊಂದಿಗೆ ವಾಸಿಸುತ್ತಾಳೆ, ಅವರು ಲಾಕ್ ಡೌನ್ ಘೋಷಿಸಿದಾಗಿನಿಂದ ಮುಚ್ಚಲ್ಪಟ್ಟ ಕಾಂಡಿಮೆಂಟ್ಸ್ ಅಂಗಡಿಯನ್ನು ಸಹ ನಡೆಸುತ್ತಿದ್ದರು.

“ಸಾಮಾನ್ಯವಾಗಿ ನನ್ನ ಪತಿ ತರಕಾರಿ ಅಂಗಡಿಯನ್ನು ನೋಡಿಕೊಳ್ಳುತ್ತಾರೆ ಆದರೆ ಅವರು ಸ್ವಲ್ಪ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.ನನ್ನ ಅತ್ತೆ ಹಿರಿಯ ನಾಗರಿಕರು. ಇಂತಹಾ ಸಮಯದಲ್ಲಿ ಣಾವು ಅವರ ಜೀವನವನ್ನು ಅಪಾಯಕ್ಕೆ ಸಿಕ್ಕಿಸಲು ಬಯಸುವುದಿಲ್ಲ."ತನುಜಾ ಹೇಳಿದ್ದಾರೆ.

ಬೇಸಿಗೆಯ ಆರಂಭದಲ್ಲಿ ನುಗ್ಗೆಕಾಯಿ ಹಾಗೂ ಮಾವಿನಕಾಯಿಯ ವ್ಯಾಪಾರ ಹೆಚ್ಚಾಗಿ  ಇರುತ್ತದೆ.ಆದರೆ ತನುಜಾ ಪ್ರಕಾರ, ಕಾಲೋಚಿತ ತರಕಾರಿಗಳನ್ನು ಹೆಚ್ಚು ಖರೀದಿಸಿಡುವುದು ಸರಿಯಲ್ಲ.. “ತರಕಾರಿಗಳು ಅತ್ಯಗತ್ಯವಾಗಿದ್ದರೂ ಅವುಗಳನ್ನು ಮಾರಾಟ ಮಾಡುವುದು ಕಷ್ಟ. ಈ ಮುನ್ನ ಜನರಿಗೆ ಸಾಮಾನು ಸರಂಜಾಮುಗಳನ್ನು ಆಯ್ಕೆಮಾಡಲು  ಸಮಯವಿತ್ತು.ಆದರೆ ಈಗ ಅವರು ಸೀಮಿತ ಅವಧಿಯಲ್ಲಿ ಏನನ್ನು ಮಾಡಬಹುದೆಂದು ನೋಡುತ್ತಾರೆ."ತನ್ನ ಸ್ಟಾಲ್‌ನಲ್ಲಿ ದಿನಕ್ಕೆ 10 ಕ್ಕೂ ಹೆಚ್ಚುಗ್ರಾಹಕರನ್ನು ನಾನಿದುವರೆಗೆ ಕಂಡಿಲ್ಲ ಎಂದು ಆಕೆ ನುಡಿದರು.

ಇನ್ನು ತನುಜಾ ಸಹ ತಾವು ಜನಸಂಪರ್ಕಕ್ಕೆ ಬಂದು ಆ ಮೂಲಕ ತಮ್ಮವರ ಜೀವನ ಅಪಾಯಕ್ಕೆ ಸಿಲುಕುವಂತೆ ಮಾಡುವುದನ್ನು ಬಯಸುವುದಿಲ್ಲ.  ಅದಕ್ಕಾಗಿ ಆಕೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಿಡುವುದಿಲ್ಲ. "ಮನೆಯಲ್ಲಿ ಹಿರಿಯರಿದ್ದಾರೆ. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಾನು ಅವರ ಬಗೆಗೆ  ಕನಿಷ್ಠ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ. ನಾನು  ಮಾಸ್ಕ್ ಹಾಗೂ ಕೈಗವಸುಗಳನ್ನು ಬಳಸುತ್ತಿದ್ದೇನೆ ಆದ್ದರಿಂದ ನಾನು ಆಕಸ್ಮಿಕವಾಗಿ ಜನರೊಂದಿಗೆ ಸಂಪರ್ಕಕ್ಕೆ ಬರುವುದಿಲ್ಲ ”ಎಂದು ತನುಜಾ ಹೇಳುತ್ತಾರೆ, ಜೀವನ ಅವರ ಕುಟುಂಬದ ಪಾಲಿಗೆ ತುಸು ಕಠಿಣವಾಗಿದ್ದರೂ ಸಹ ಮುಂದೊಮ್ಮೆ ಎಲ್ಲಾ ಸರಿಯಾಗಲಿದೆ ಎಂದು ಆಕೆ ನಂಬಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com