ಬರ್ತ್'ಡೇ ಆಚರಿಸಿಕೊಂಡು ಮೋದಿ, ಯಡಿಯೂರಪ್ಪ ಆದೇಶ ಉಲ್ಲಂಘಿಸಿದ ಮಸಾಲ ಜಯರಾಂ ವಿರುದ್ಧ ಎಫ್ಐಆರ್ ದಾಖಲು

ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನೂರಾರು ಜನರ ಸಮ್ಮುಖದಲ್ಲಿ ತುರುವೇಕೆರೆ ಶಾಸಕ ಮಸಾಲ ಜಯರಾಂ ಅವರು ಹುಟ್ಟುಹಬ್ಬ ಆಚರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಶನಿವಾರ ಎಫ್ಐಆರ್ ದಾಖಲಾಗಿದೆ. 
ಬರ್ತ್'ಡೇ ಆಚರಿಸಿಕೊಂಡು ಮೋದಿ, ಯಡಿಯೂರಪ್ಪ ಆದೇಶ ಉಲ್ಲಂಘಿಸಿದ ಮಸಾಲ ಜಯರಾಂ
ಬರ್ತ್'ಡೇ ಆಚರಿಸಿಕೊಂಡು ಮೋದಿ, ಯಡಿಯೂರಪ್ಪ ಆದೇಶ ಉಲ್ಲಂಘಿಸಿದ ಮಸಾಲ ಜಯರಾಂ
Updated on

ತುಮಕೂರು: ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನೂರಾರು ಜನರ ಸಮ್ಮುಖದಲ್ಲಿ ತುರುವೇಕೆರೆ ಶಾಸಕ ಮಸಾಲ ಜಯರಾಂ ಅವರು ಹುಟ್ಟುಹಬ್ಬ ಆಚರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಶನಿವಾರ ಎಫ್ಐಆರ್ ದಾಖಲಾಗಿದೆ. 

ಗುಬ್ಬಿ ತಾಲೂಕು ಇಡಗೂರಿನಲ್ಲಿ ಶುಕ್ರವಾರ ತುರುವೇಕೆರೆ ಬಿಜೆಪಿ ಶಾಸಕ ಮಸಾಲ ಜಯರಾಂ ಅವರು ತಮ್ಮ ಬೆಂಬಲಿಗರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈವೇಳೆ ಅಭಿಮಾನಿಗಳಿಗೆಲ್ಲಾ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. 

ಸಾಮಾಜಿಕ ಅಂತರ ಕಾಯ್ದುಕೊಳ್ಲದೇ ನೂರಾರು ಜನರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ವ್ಯಾಪರ ಟೀಕೆಗಳಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಸ್ ಪುರ ಪೊಲೀಸ್ ಟಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದ್ದು, ಇಡಗೂರಿನಲ್ಲಿ ರವಿ, ರಾಜೇನಹಳ್ಳಿಯ ವಸಂತಕುಮಾರ ಹಾಗೂ ಹೊನ್ನೇಗೌಡ ಎಂಬುವರ ಮೇಲೆ ಎಫ್ಐಆರ್ ದಾಖಲಾಗಿದೆ. ಸಿಎಸ್ಪುರ ಠಾಣೆಯ ಮುಖ್ಯಪೇದೆ ನವೀನ್ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com