ಲಾಕ್ ಡೌನ್ ನಿಂದ ಮಾನಸಿಕ ಒತ್ತಡ ಆರೋಗ್ಯದ ಮೇಲೆ ಪರಿಣಾಮ: ಐ.ಪಿ.ಎಸ್ ನಿಂದ 24/7 ಆಪ್ತಸಲಹೆ 

ಕೋವಿಡ್-19 ಲಾಕ್ ಡೌನ್ ನಿಂದ ಉಂಟಾಗಿರುವ ಪರಿಣಾಮಗಳು ಕೇವಲ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗಳಿಗಷ್ಟೇ ಸೀಮಿತವಾಗಿಲ್ಲ. ಅದು ಮಾನಸಿಕ ಒತ್ತಡ, ಆರೋಗ್ಯದ ಮೇಲೆಯೂ ಹೆಚ್ಚಿನ ಪರಿಣಾಮ ಬೀರಿದೆ. 
ಲಾಕ್ ಡೌನ್ ನಿಂದ ಮಾನಸಿಕ ಒತ್ತಡ ಆರೋಗ್ಯದ ಮೇಲೆ ಪರಿಣಾಮ
ಲಾಕ್ ಡೌನ್ ನಿಂದ ಮಾನಸಿಕ ಒತ್ತಡ ಆರೋಗ್ಯದ ಮೇಲೆ ಪರಿಣಾಮ

ಕೋವಿಡ್-19 ಲಾಕ್ ಡೌನ್ ನಿಂದ ಉಂಟಾಗಿರುವ ಪರಿಣಾಮಗಳು ಕೇವಲ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗಳಿಗಷ್ಟೇ ಸೀಮಿತವಾಗಿಲ್ಲ. ಅದು ಮಾನಸಿಕ ಒತ್ತಡ, ಆರೋಗ್ಯದ ಮೇಲೆಯೂ ಹೆಚ್ಚಿನ ಪರಿಣಾಮ ಬೀರಿದೆ. 

ವಾರಗಟ್ಟಲೆ ಮನೆಯಲ್ಲಿಯೇ ಇರುವುದರಿಂದ ಈಗಾಗಲೇ ಮಾನಸಿಕ ಒತ್ತಡ, ಆರೋಗ್ಯದ ಸವಾಲುಗಳನ್ನು ಎದುರಿಸುತ್ತಿರುವವರಿಗೆ  ಆತಂಕ, ಭಯ, ಚಡಪಡಿಕೆ, ಒತ್ತಡ, ನಿದ್ರೆಯ ತೊಂದರೆಗಳು ಹೆಚ್ಚಾಗುತ್ತಿವೆ. ಇವುಗಳನ್ನು ಸರಿಪಡಿಸುವತ್ತ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ (ಐಪಿಎಸ್) ಮಹತ್ವದ ಹೆಜ್ಜೆ ಇಟ್ಟಿದ್ದು, ದಿನದ 24/7 ಉಚಿತ ಟೆಲಿ ಆಪ್ತಸಲಹೆ (ಟೆಲಿಕೌನ್ಸಿಲಿಂಗ್) ನೀಡುತ್ತಿದೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ, ಐಪಿಎಸ್ ನ ಗೌರವಾಧ್ಯಕ್ಷ ಡಾ.ಟಿಎಸ್ ಸತ್ಯನಾರಾಯಣ್ ರಾವ್, ಲಾಕ್ ಡೌನ್ ಪರಿಣಾಮ ದೇಶ ವಿಲಕ್ಷಣ ಸನ್ನಿವೇಶವನ್ನು ಎದುರಿಸುತ್ತಿದೆ. ಸಾರ್ವಜನಿಕರು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದ್ದು, ಮಾನಸಿಕ ಒತ್ತಡವನ್ನು ನಿಭಾಯಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಐಪಿಎಸ್ ದಿನದ 24 ಗಂಟೆ ಹಾಗೂ ವಾರದ 7 ದಿನಗಳು ಉಚಿತ ಟೆಲಿ ಆಪ್ತಸಲಹೆ (ಟೆಲಿಕೌನ್ಸಿಲಿಂಗ್) ನೀಡಲು ಮುಂದಾಗಿದೆ ಎಂದು ಹೇಳಿದ್ದಾರೆ. 

ಮಾಧ್ಯಮಗಳು ಜನರಿಗೆ ತಿಳುವಳಿಕೆ ನೀಡುವ ಕೆಲಸ ಮಾಡುತ್ತಿವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ದೃಢಪಡಿಸದ ಮಾಹಿತಿಗಳಿಂದ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಗಳು ಹೆಚ್ಚಾಗಲಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಚಿತ ಟೆಲಿ ಆಪ್ತಸಲಹೆ (ಟೆಲಿಕೌನ್ಸಿಲಿಂಗ್) ಅಗತ್ಯವಿದೆ ಎಂದು ಹೇಳಿದ್ದಾರೆ. 

ಇನ್ನು ಮದ್ಯವ್ಯಸನಿಗಳು ವಿತ್ ಡ್ರಾಯಲ್ ಸಿಂಡ್ರೋಮ್ ನ್ನು ಎದುರಿಸುತ್ತಿದ್ದು, ನಮ್ಮ ಸ್ವಯಂಸೇವಕರು ಇವರಿಗೂ ಆಪ್ತಸಲಹೆ ನೀಡಲಿದ್ದಾರೆ ಎಂದು ಸತ್ಯನಾರಾಯಣ ರಾವ್ ತಿಳಿಸಿದ್ದಾರೆ. 

ಸಹಕಾರ ನೀಡುತ್ತಿರುವ ತಂಡದ ಸದಸ್ಯರಿಗೆ ಸತ್ಯನಾರಾಯಣ ರಾವ್ ಧನ್ಯವಾದ ತಿಳಿಸಿದ್ದು, ಸುಮಾರು 700 ಮನೋವೈದ್ಯರ ದೂರವಾಣಿ ಸಂಖ್ಯೆ ಕೆಲಸದ ಸ್ಥಳಗಳನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ

ಮಹಾರಾಷ್ಟ್ರದ ಸೋಲ್ಹಾಪುರದಲ್ಲಿ ಹಲವರು ಮನೋವೈದ್ಯರು ಕನ್ನಡದಲ್ಲಿ ಜನತೆಗೆ ಆಪ್ತಸಲಹೆ ನೀಡಲು ಮುಂದಾಗಿದ್ದಾರೆ. 

ವೈದ್ಯರ ದೂರವಾಣಿ ಸಂಖ್ಯೆ ಹೀಗಿವೆ

ಡಾ.ಸಚಿನ್ (ಧಾರವಾಡ) 9880942288 and ಡಾ.ಶ್ರೀಕಲ ಭರತ್ (ಬೆಂಗಳೂರು): 98454 08981 at 8-30 to 10 AM
ಡಾ.ಆರ್ ಎಸ್ ದೀಪಕ್ (ಚಿತ್ರದುರ್ಗ)- 9353051686 and ಡಾ.ಪ್ರೀತಿ ಪೈ (ಶಿವಮೊಗ್ಗ) 9480838072 from 10 to 11-30 AM
ಡಾ.ಗೋಪಾಲ್ ದಾಸ್ (ಚಿತ್ರದುರ್ಗ) 9008908206 and ಡಾ. ಋತ್ ಸ್ನೇಹ (ಕೋಲಾರ) 9902987140 from 11-30 AM to 1 PM
ಡಾ.ಲೋಕೇಶ್ ಬಾಬು (ತುಮಕೂರು) 9740707779 and ಡಾ.ಅಭಯ್ (ಹುಬ್ಬಳ್ಳಿ) 9448450565 1 to 2-30 PM
ಡಾ. ಅಲೋಕ್ (ಕಲಬುರ್ಗಿ)-9241177535 from 2-30 to 4 PM
ಡಾ.ಸಂಜಯ್ ರಾಜ್ (ತುಮಕೂರು) 9886979089 and ಡಾ. ಕೃಷ್ಣ ಮೈಸೂರು (ಮೈಸೂರು) 94802 92590 from 4 to 5-30 PM
ಡಾ.ಮೃತ್ಯುಂಜಯ (ದಾವಣಗೆರೆ)9739238788 and ಡಾ.ಅರವಿಂದ್ ಎಸ್ ಟಿ (ಶಿವಮೊಗ್ಗ) 9620803715 from 5-30 to 7PM

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com