ಗಂಗಾವತಿ: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಾವಿರ ಜನರಿಗೆ ಬಿಸಿಬಿಸಿ ಫಲಾವ್ ತಯಾರಿಸಿದ ಯುವಕ!

ಆ ಯುವಕ ಹೆಸರಾಂತ ಕಂಪನಿಗಳಲ್ಲಿ ಅಡುಗೆ ಮಾಡುವ ಶಫ್, ಮೂಲತಃ ಗಂಗಾವತಿಯವರು. ಹೈದ್ರಾಬಾದ್ ತಾಜ್ ಗ್ರುಪ್ ಹೊಟೇಲ್ ಗಳಲ್ಲಿ ಸಾಕಷ್ಟು ಕೆಲಸ ಮಾಡಿ, ಈಗ ಬೆಂಗಳೂರಿನ ಶಫ್ ಟಾಕ್ ಸಂಸ್ಥೆಯಲ್ಲಿ ಅಡುಗೆ ಮುಖ್ಯಸ್ಥ.
ಸಂದೇಶ್ ಪೂಜಾರಿ
ಸಂದೇಶ್ ಪೂಜಾರಿ

ಗಂಗಾವತಿ: ಆ ಯುವಕ ಹೆಸರಾಂತ ಕಂಪನಿಗಳಲ್ಲಿ ಅಡುಗೆ ಮಾಡುವ ಶಫ್, ಮೂಲತಃ ಗಂಗಾವತಿಯವರು. ಹೈದ್ರಾಬಾದ್ ತಾಜ್ ಗ್ರುಪ್ ಹೊಟೇಲ್ ಗಳಲ್ಲಿ ಸಾಕಷ್ಟು ಕೆಲಸ ಮಾಡಿ, ಈಗ ಬೆಂಗಳೂರಿನ ಶಫ್ ಟಾಕ್ ಸಂಸ್ಥೆಯಲ್ಲಿ ಅಡುಗೆ ಮುಖ್ಯಸ್ಥ.

ಕೊರೋನಾದಿಂದಾಗಿ ಗಂಗಾವತಿಗೆ ಬಂದಿದ್ದ ಯುವಕ ಕಣ್ಣುಕಟ್ಟಿಕೊಂಡು ಸಾವಿರ ಜನರಿಗೆ ಅಡುಗೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ಹೈದ್ರಾಬಾದಿನ ತಾಜ್ ಗ್ರುಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸದ್ಯ ಬೆಂಗಳೂರಿನ ಶಫ್ ಟಾಕ್ ಎಂಬ ಆಹಾರ ಸಿದ್ಧಪಡಿಸುವ ಸಂಸ್ಥೆಯ ಮುಖ್ಯ ಅಡುಗೆಯ ಮುಖ್ಯಸ್ಥ ಸಂದೇಶ್ ಪೂಜಾರಿ ಈ ಸಹಾಸ ಮಾಡಿದ್ದಾರೆ.

ಕೊರೋನಾ ಹಿನ್ನೆಲೆ ಕಳೆದ ಒಂದು ತಿಂಗಳಿಂದ ಇಲ್ಲಿನ ನಗರೇಶ್ವರ ದೇವಸ್ಥಾನಲ್ಲಿ ನಾನಾ ಇಲಾಖೆಯ ಸಿಬ್ಬಂದಿಗೆ ಹಾಗೂ ಬಡವರಿಗೆ ಆಹಾರ ಸಿದ್ಧಪಡಿಸಿ ಕೊಡುವ ಕೆಲಸ ಮಾಡಲಾಗುತ್ತಿದೆ. ಕೊರೋನಾ ಹಿನ್ನೆಲೆ ಊರಿಗೆ ಬಂದಿದ್ದ ಸಂದೇಶ, ಕಣ್ಣಿಗೆ ಕಾಣದ ವೈರಸ್ ವಿರುದ್ಧ ಕಣ್ಣಿದ್ದವರು ಹೆದರುವ ಅಗತ್ಯವಿಲ್ಲ ಎಂದು ಸಂದೇಶ ಸಾರುವ ಉದ್ದೇಶಕ್ಕೆ ಸಂದೇಶ, ಒಂದು ಸಾವಿರ ಜನರಿಗೆ ಕಣ್ಣುಕಟ್ಟಿಕೊಂಡು ಮೂರುವರೆ ಗಂಟೆಯಲ್ಲಿ ಬಿಸಿಬಿಸಿಯಾದ ಫಲಾವ್ ಸಿದ್ಧಪಡಿಸಿದರು.

ಬೆಳಗ್ಗೆ ಏಳು ಗಂಟೆಗೆ ಆರಂಭವಾದ ಆಡುಗೆ ಮಾಡುವ ಕಾರ್ಯ‌ ಮೂರುವರೆ ಗಂಟೆಯಲ್ಲಿ‌ಮುಗಿದಿದೆ. ಮಧ್ಯ ಅರ್ಧ ಗಂಟೆ ಮಾತ್ರ ವಿಶ್ರಾಂತಿ ತೆಗೆದುಕೊಂಡ ಯುವಕ, ಇಡೀ ಅಡುಗೆಯನ್ನು ಕಣ್ಣುಕಟ್ಟಿಕೊಂಡು ಮಾಡಿದ್ದಾರೆ.
- ಶ್ರೀನಿವಾಸ .ಎಂ.ಜೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com