ಲಾಕ್ ಡೌನ್ ನಡುವೆ ಶಿವಮೊಗ್ಗದಿಂದ ತಮಿಳು ನಾಡಿಗೆ ಔಷಧಿ ತಲುಪಿಸಿದ ಕೊರೋನಾ ಸೈನಿಕರು!

ಕೊರೋನಾ ಲಾಕ್ ಡೌನ್ ನಡುವೆ ತಮಿಳುನಾಡಿನ ಶ್ರೀರಂಗಂನಲ್ಲಿರುವ ಕ್ಯಾನ್ಸರ್ ರೋಗಿಯೊಬ್ಬರಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕುಗ್ರಾಮವೊಂದರಿಂದ ಔಷಧಿ ತರಿಸಲಾಯಿತು.

Published: 27th April 2020 03:30 PM  |   Last Updated: 27th April 2020 03:30 PM   |  A+A-


Posted By : Sumana Upadhyaya
Source : The New Indian Express

ಬೆಂಗಳೂರು: ಕೊರೋನಾ ಲಾಕ್ ಡೌನ್ ನಡುವೆ ತಮಿಳುನಾಡಿನ ಶ್ರೀರಂಗಂನಲ್ಲಿರುವ ಕ್ಯಾನ್ಸರ್ ರೋಗಿಯೊಬ್ಬರಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕುಗ್ರಾಮವೊಂದರಿಂದ ಔಷಧಿ ತರಿಸಲಾಯಿತು.

ಈ ಲಾಕ್ ಡೌನ್ ಮಧ್ಯೆ ಹೇಗಪ್ಪಾ ಆಯ್ತು ಅಂದುಕೊಳ್ಳುತ್ತೀರಾ, ಕುತೂಹಲಕಾರಿ ವಿಷಯ ಇಲ್ಲಿದೆ ನೋಡಿ, ಅದು ಸಾಧ್ಯವಾಗಿದ್ದು ಮೂವರು ಕೊರೋನಾ ಸೈನಿಕರಾದ ಎಂಜಿನಿಯರ್ ಕಾರ್ಯಕರ್ತರಿಂದ.

ಈ ಮೂವರು ಎಂಜಿನಿಯರ್ ಗಳು ಬೇರೆ ಬೇರೆ ಕಡೆ ನೆಲೆಸಿದ್ದರೂ ಮೂಲತಃ ಕರ್ನಾಟಕದವರು. ರಾಜ್ಯಸರ್ಕಾರದ ಸಹಾಯವಾಣಿ ತಂಡದ ಜೊತೆ ಸಮನ್ವಯ ಮಾಡಿಕೊಂಡು ಅಗತ್ಯವಿರುವವರಿಗೆ ಸಮಯಕ್ಕೆ ಸರಿಯಾಗಿ ಔಷಧಿ ತಲುಪಿಸುತ್ತಾರೆ.

ಇತ್ತೀಚೆಗೆ ಶ್ರೀರಂಗಂನ ವ್ಯಕ್ತಿಯೊಬ್ಬರು ತಮ್ಮ ಮಾವನಿಗೆ ಶಿವಮೊಗ್ಗ ಜಿಲ್ಲೆಯ ನರಸೀಪುರದ ಡಾ ನಾರಾಯಣ ಮೂರ್ತಿಯವರ ಬಳಿಯಿಂದ ಕ್ಯಾನ್ಸರ್ ಗೆ ಔಷಧಿ ತರಿಸಬೇಕಾಗಿತ್ತು. ಲಾಕ್ ಡೌನ್ ಕಾರಣದಿಂದಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಯಾರಾದರೂ ಸಹಕರಿಸಿ ಎಂದು ಟ್ವೀಟ್ ಮಾಡಿ ಕಾರ್ಮಿಕ ಸಹಾಯವಾಣಿಗೆ ಟ್ಯಾಗ್ ಮಾಡಿದ್ದರು.

ಸಹಾಯವಾಣಿ ಈ ಸಂದೇಶವನ್ನು ವಾಟ್ಸಾಪ್ ನಲ್ಲಿ ಕೊರೋನಾ ಸೈನಿಕ ಎಂಬ ಗುಂಪಿಗೆ ಕಳುಹಿಸಿತ್ತು. ಇದನ್ನು ಕಂಡ ಮೈಸೂರಿನ ಇನ್ಫೊಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವಾಟ್ಸಾಪ್ ಗ್ರೂಪ್ ನ ಅಡ್ಮಿನ್ ಆಗಿರುವ ಫತಹೀನ್ ಮಿಸ್ಬಾಹ್ ತಮ್ಮ ಸಂಪರ್ಕದಲ್ಲಿರುವ ಸಹಾಯಕ ಎಂಜಿನಿಯರ್ ತೇಜುಕುಮಾರ್ ಎಂಬುವವರಿಗೆ ತಿಳಿಸಿದರು. ಅವರ ಮೂಲಕ ಚೆನ್ನೈಯ ಟಿಸಿಎಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಶಿವಮೊಗ್ಗದ ಸಾಗರ ತಾಲ್ಲೂಕಿನವರಾದ ಕಾಂತರಾಜು ಎಂಬುವವರಿಗೆ ವಿಷಯ ಗೊತ್ತಾಯಿತು.

ಕಾಂತರಾಜು ಅವರು ಡಾ. ನಾರಾಯಣಮೂರ್ತಿಯವರನ್ನು ಕೇಳಿದರು. ಆದರೆ ಲಾಕ್ ಡೌನ್ ಕಾರಣದಿಂದ ವಸ್ತುಗಳನ್ನು ತರಲು ಸಾಧ್ಯವಾಗದೆ ಔಷಧ ತಯಾರಿಸಲು ಸಾಧ್ಯವಾಗಲಿಲ್ಲವಂತೆ. ಅವರು ಮತ್ತೊಬ್ಬ ವೈದ್ಯರನ್ನು ಸೂಚಿಸಿದರು. ಅವರನ್ನು ಸಂಪರ್ಕಿಸಿದಾಗ ಔಷಧಿ ಸಿಕ್ಕಿತು. ಕಾಂತರಾಜು ಅವರು ಅದನ್ನು ಸಂಗ್ರಹಿಸಿ ರೋಗಿಯ ಮನೆಗೆ ಶ್ರೀರಂಗಂಗೆ ಕಳುಹಿಸಿದರು.

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp