ದಕ್ಷಿಣ ಕನ್ನಡದಲ್ಲಿ ಕೋವಿಡ್ ಹೆಚ್ಚಳ: ಗ್ರಾಮ ಪಂಚಾಯತಿ ಮಟ್ಟದ ತಂಡಗಳಿಗೆ ತರಬೇತಿ ನೀಡಲು ವೈದ್ಯರ ಕಾರ್ಯಪಡೆ ರಚನೆ

 ದಕ್ಷಿಣ ಕನ್ನಡದಲ್ಲಿ ಕೋವಿಡ್ ಸಾವಿನ ಪ್ರಮಾಣ ದಿನದಿನಕ್ಕೆ ಹೆಚ್ಚಾಗಿತ್ತಿದ್ದು ಇದಕ್ಕೆ  ಸಂಬಂಧಿಸಿದಂತೆ, ವಾರ್ಡ್ ಮತ್ತು ಗ್ರಾಮ ಪಂಚಾಯತ್ ಕಾರ್ಯಪಡೆ ಸದಸ್ಯರಿಗೆ ಆನ್‌ಲೈನ್ ತರಬೇತಿ ನೀಡಲು ವೈದ್ಯರನ್ನು ಒಳಗೊಂಡ ಕಾರ್ಯಪಡೆ ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

Published: 01st August 2020 12:58 PM  |   Last Updated: 01st August 2020 01:18 PM   |  A+A-


ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ

Posted By : Raghavendra Adiga
Source : The New Indian Express

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕೋವಿಡ್ ಸಾವಿನ ಪ್ರಮಾಣ ದಿನದಿನಕ್ಕೆ ಹೆಚ್ಚಾಗಿತ್ತಿದ್ದು ಇದಕ್ಕೆ  ಸಂಬಂಧಿಸಿದಂತೆ, ವಾರ್ಡ್ ಮತ್ತು ಗ್ರಾಮ ಪಂಚಾಯತ್ ಕಾರ್ಯಪಡೆ ಸದಸ್ಯರಿಗೆ ಆನ್‌ಲೈನ್ ತರಬೇತಿ ನೀಡಲು ವೈದ್ಯರನ್ನು ಒಳಗೊಂಡ ಕಾರ್ಯಪಡೆ ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಸೋಂಕಿತರನ್ನು ತ್ವರಿತವಾಗಿ ಗುರುತಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತ ಈ  ಕ್ರಮಕ್ಕೆ ಮುಂದಾಗುತ್ತಲಿದೆ. 

ವಿವಿಧ  ಕಾರಣಗಳಿಂದಾಗಿ ಕೋವಿಡ್ ಕರ್ತವ್ಯಕ್ಕೆ ಹಾಜರಾಗದ  ವೈದ್ಯರನ್ನು ಕಾರ್ಯಪಡೆ ಒಳಗೊಂಡಿರುತ್ತದೆ.. ಸೋಂಕು ಲಕ್ಷಣಗಳುಳ್ಳ ಜನರ ಆರೋಗ್ಯವನ್ನು ಹೇಗೆ ಮೇಲ್ವಿಚಾರಣೆ ಮಾಡುವುದು, ಸೋಂಕಿತರನ್ನು ತ್ವರಿತವಾಗಿ ಗುರುತಿಸುವುದು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಅವರು ವಾರ್ಡ್ ಮತ್ತು ಗ್ರಾಮ ಮಟ್ಟದ ಕಾರ್ಯಪಡೆಯ ಸದಸ್ಯರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ತರಬೇತಿ ನೀಡಲಿದ್ದಾರೆ. ಹಳ್ಳಿಗಳ ಶಿಕ್ಷಕರು ಮತ್ತು ಇತರ ಆಸಕ್ತ ಸಾರ್ವಜನಿಕರು ಸಹ ಇದಕ್ಕಾಗಿ ಸ್ವಯಂಸೇವಕರಾಗಬಹುದು ಮತ್ತು ರೋಗಿಗಳ ಪರೀಕ್ಷೆ ನಡೆಸಬಹುದು.

ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ಈಗಾಗಲೇ ಸಮೀಕ್ಷೆಗಳನ್ನು ನಡೆಸಿದ್ದು ಸೋಂಕು ಲಕ್ಷಣವುಳ್ಳ ಜನರ ಪಟ್ಟಿಯನ್ನು ಹೊಂದಿದ್ದಾರೆ ಮತ್ತು ಈಗ ಹೆಚ್ಚಿನ ಕಣ್ಗಾವಲು  ಸಹ ಇರಲಿದೆ, . ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳನ್ನು  ನಡೆಸಲಾಗುತ್ತದೆ,ಜಿಲ್ಲೆಯ ಕೋವಿಡ್ ಲ್ಯಾಬ್‌ಗಳನ್ನು ಅವುಗಳ ಸಂಪೂರ್ಣ ಸಾಮರ್ಥ್ಯದೊಂದಿಗೆ ಬಳಸಿಕೊಳ್ಳಲಾಗುವುದು ಎಂದು ರಾಜೇಂದ್ರ ಹೇಳಿದರು

ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸುತ್ತಿವೆ ಎಂಬ ಆರೋಪದ ಮೇಲೆ, ಚಿಕಿತ್ಸೆಯ ಶುಲ್ಕದ ಮೇಲಿನ ನಿಯಂತ್ರಣದ ಬಗ್ಗೆ ಖಚಿತಪಡಿಸಿಕೊಳ್ಲಲು  ಖಾಸಗಿ ಆಸ್ಪತ್ರೆ ಸಂಘದ ಸದಸ್ಯರೊಂದಿಗೆ ಸಭೆ ನಡೆಸುವುದಾಗಿ ಡಿಸಿ ಹೇಳಿದರು. ಆಸ್ಪತ್ರೆಗಳು ಮಾರ್ಗಸೂಚಿಗಳನ್ನು ಮೀರಿದರೆ, ಕ್ರಮವನ್ನು ಎದುರಿಸಬೇಕಾಗುವುದು. ವಿವಿಧ ಆಸ್ಪತ್ರೆಗಳಿಂದ ರೋಗಿಗಳು ತದ್ವಿರುದ್ಧ  ವರದಿಗಳನ್ನು ಪಡೆಯುವ ವಿಷಯದ ಬಗ್ಗೆಯೂ ಅವರು ಗಮನಹರಿಸಿದ್ದು ಇವು ಜನರನ್ನು ‘ದಾರಿತಪ್ಪಿಸುವ  ಘಟನೆಗಳು’ ಎಂದು ಪರಿಗಣಿಸಿ ಅದನ್ನು ಸಹ ಪರಿಹರಿಸಲಾಗುವುದು ಎಂದರು.

ಮೈಸೂರು ವಿಮಾನ ನಿಲ್ದಾಣದ ಮೂವರು ಸಿಬ್ಬಂದಿಗೆ ಸೋಂಕು

ಮೈಸೂರು: ಮೈಸೂರಿನ ಮಂಡಕಳ್ಳಿಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಮೂವರು ಸಿಬ್ಬಂದಿಗಳಿಗೆ ಕೋವಿಡ್ ಸೋಂಕಿರುವುದು ದೃಢವಾಗಿದೆ. 

ಮೂಲಗಳ ಪ್ರಕಾರ ಎಟಿಸಿಯಿಂದ ಒಬ್ಬ ವ್ಯಕ್ತಿ, ವಿಮಾನ ನಿಲ್ದಾಣವನ್ನು ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಮತ್ತು ಗುತ್ತಿಗೆ ನೌಕರರೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ.

ಆದರೆ, ಈ ಪ್ರಕರಣಗಳು ಒಂದೆರಡು ದಿನಗಳ ಹಿಂದೆ ವರದಿಯಾಗಿದ್ದು, ವಿಮಾನ ನಿಲ್ದಾಣವನ್ನು ಸ್ವಚ್ಚಗೊಳಿಸಲಾಗಿದೆ. ಅದರ ನಂತರ ನೌಕರರನ್ನು ತಪಾಸಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp