ಕೊಪ್ಪದಲ್ಲಿನ ನಕ್ಸಲ್ ಪೀಡಿತ ಹಳ್ಳಿಗೆ ಸಚಿವ ಸುರೇಶ್ ಕುಮಾರ್ ಭೇಟಿ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ನಕ್ಸಲ್ ಪೀಡಿತ ಹಳ್ಳಿಯೊಂದಕ್ಕೆ ಭೇಟಿ ನೀಡಲಿದ್ದಾರೆ.
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್

ಚಿಕ್ಕಮಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಂದು ಚಿಕ್ಕಮಗಳೂರು ಜಿಲ್ಲೆ
ಕೊಪ್ಪ ತಾಲೂಕಿನ ನಕ್ಸಲ್ ಪೀಡಿತ ಹಳ್ಳಿಯೊಂದಕ್ಕೆ ಭೇಟಿ ನೀಡಲಿದ್ದಾರೆ.

ಕೊಪ್ಪಳ ತಾಲೂಕಿನ ವೋರ್ಲಾ ಗ್ರಾಮದ ಆದರ್ಶ ಎಂಬ ಹತ್ತನೇ ತರಗತಿ ವಿದ್ಯಾರ್ಥಿ, ಸಂವಾದದ ಮೂಲಕ ಗ್ರಾಮದಲ್ಲಿನ 
ಸೌಕರ್ಯ ಕೊರತೆಗಳ ಬಗ್ಗೆ ಸಚಿವರ ಗಮನ ಸೆಳೆದಿದ್ದ.

ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ ಆನ್ ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಇಂಟರ್ ನೆಟ್ ಕನೆಕ್ಷನ್ ಕನಸಾಗಿದೆ.
5 ಕಿಲೋ ಮೀಟರ್ ಮಣ್ಣು ರಸ್ತೆಯಲ್ಲಿ ನಡೆದು ಶಾಲೆಗೆ ತೆರಳಬೇಕಾಗಿದೆ ಎಂದು ವಿದ್ಯಾರ್ಥಿ ಸಚಿವರ ಬಳಿ ಅಳಲು ತೋಡಿಕೊಂಡಿದ್ದ.
ಆ ಗ್ರಾಮಕ್ಕೆ ಶೀಘ್ರದಲ್ಲಿಯೇ ಭೇಟಿ ನೀಡುವುದಾಗಿ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದರು. 

ತಕ್ಷಣ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಕೊಪ್ಪಳ ತಾಲೂಕಿನ ಬಿಇಒ ಆದರ್ಶ ಮನೆಗೆ ಭೇಟಿ ನೀಡಿ, ಕುಟುಂಬದ ಪರಿಸ್ಥಿತಿ, ರಸ್ತೆ, ಮೊಬೈಲ್ ಸಂಪರ್ಕತೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಶೃಂಗೇರಿ ಬಿಇಒ ಕೂಡಾ ಭೇಟಿ ನೀಡಿದ್ದು, ತೊಂದರೆಯನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ.ಮಲೆನಾಡು ಭಾಗದ 102 ಗ್ರಾಮದ
ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು, ಮೊಬೈಲ್ ನೆಟ್ ವರ್ಕ್, ವಿದ್ಯುತ್ ಸಂಪರ್ಕತೆಯಲ್ಲಿ ಕೊರತೆ ಇರುವುದು
ಸರ್ವೇಯಿಂದ ತಿಳಿದುಬಂದಿದೆ ಎಂದು ಬಿಇಒ ನಾಗರಾಜ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com