ಡಾ. ಆರತಿ ಕೃಷ್ಣ ಸಹಾಯದಿಂದ ಫಿಲಿಪ್ಪೈನ್ಸ್ ನಿಂದ ಚಿಕ್ಕಮಗಳೂರು ತಲುಪಿದ ವಿದ್ಯಾರ್ಥಿನಿ

ಅನಿವಾಸಿ ಭಾರತೀಯ ಸಚಿವಾಲಯದ ಮಾಜಿ ಸಲಹೆಗಾರ್ತಿ ಆರತಿ ಕೃಷ್ಣ ಅವರ ನೆರವಿನಿಂದಾಗಿ ಚಿಕ್ಕಮಗಳೂರಿನ ಮೆಡಿಕಲ್ ವಿದ್ಯಾರ್ಥಿನಿ ಫಿಲಿಪ್ಪೈನ್ಸ್ ನಿಂದ ಚಿಕ್ಕಮಗಳೂರಿಗೆ ವಾಪಸಾಗಿದ್ದಾರೆ.

Published: 07th August 2020 08:39 AM  |   Last Updated: 07th August 2020 08:39 AM   |  A+A-


Ishwarya And arathi krishna

ಐಶ್ವರ್ಯ ಮತ್ತು ಆರತಿ ಕೃಷ್ಣ

Posted By : Shilpa D
Source : The New Indian Express

ಚಿಕ್ಕಮಗಳೂರು: ಅನಿವಾಸಿ ಭಾರತೀಯ ಸಚಿವಾಲಯದ ಮಾಜಿ ಸಲಹೆಗಾರ್ತಿ ಆರತಿ ಕೃಷ್ಣ ಅವರ ನೆರವಿನಿಂದಾಗಿ ಚಿಕ್ಕಮಗಳೂರಿನ ಮೆಡಿಕಲ್ ವಿದ್ಯಾರ್ಥಿನಿ ಫಿಲಿಪ್ಪೈನ್ಸ್ ನಿಂದ ಚಿಕ್ಕಮಗಳೂರಿಗೆ ವಾಪಸಾಗಿದ್ದಾರೆ.

ಗಲ್ಪ್ ದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಮಗಳೂರು ಮತ್ತು ಕರಾವಳಿ ಭಾಗದ 40 ಸಾವಿರ ಮಂದಿ ತವರಿಗೆ ವಾಪಾಸಾಗಲು ಸಹಾಯ ಮಾಡಿದ್ದಾರೆ.

ಸತ್ಯಪಾಲ ಎಂಬ ಕಾಫಿ ಪ್ಲಾಂಟರ್ ಅವರ ಪುತ್ರಿ ಐಶ್ವರ್ಯ ಕೆಬುವಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು, ಆಗಸ್ಟ್ 1 ರಂದು ಚೆನ್ನೈ ಏರ್ ಪೋರ್ಟ್ ತಲುಪಿ ಮೂರು ದಿನಗಳ ಕ್ವಾರಂಟೈನ್ ನಂತರ ಚಿಕ್ಕಮಗಳೂರಿಗೆ ಮರಳಿದ್ದಾರೆ.

ಫಿಲಿಫ್ಪೀನ್ಸ್ ನಲ್ಲಿ  ಜೂನ್ ತಿಂಗಳಿನಲ್ಲಿ ಕೊರೋನಾ ಹರಡಿದಾಗ ಐಶ್ವರ್ಯ ಪೋಷಕರು ಮಗಳ ಬಗ್ಗೆ ಆತಂಕಕ್ಕೊಳಗಾಗಿದ್ದರು. ತಮ್ಮ ಮಗಳನ್ನು ವಾಪಸ್ ಕರೆ ತರಲು ಕರ್ನಾಟಕದ ಹಲವು ರಾಜಕಾರಣಿಗಳನ್ನು ಸತ್ಯಪಾಲ್ ಸಂಪರ್ಕಿಸಿದರು,  ಆದರೆ ಯಾವುದೇ ಪ್ರಯೋಜನವಾಗಿಲ್ಲ, ಅಂತಿಮವಾಗಿ  ಕಾಂಗ್ರೆಸ್ ನ ಮಾಜಿ ಸಚಿವ ಬೆಗನೆ ರಾಮಯ್ಯ ಅವರ ಪುತ್ರಿ ಆರತಿ ಕೃಷ್ಣ ಅವರನ್ನು  ಸಂಪರ್ಕಿಸಿ ತಮ್ಮ ಮಗಳನ್ನು ವಾಪಸ್ ಕರೆತರಲು ಯಶಸ್ವಿಯಾಗಿದ್ದಾರೆ.

ವಲಸಿಗರಿಗೆ ಮನೆಗೆ ಮರಳಲು ಸಹಾಯ ಮಾಡುತ್ತಿರುವ ಆರತಿ ಕೃಷ್ಣ, ಭಾರತೀಯ ರಾಯಭಾರಿಯನ್ನು ಸಂಪರ್ಕಿಸಿ ಚೆನ್ನೈಗೆ ತೆರಳುವ ವಿಮಾನದಲ್ಲಿ ಈಶ್ವರ್ಯಾಗೆ ಆಸನ ಕಲ್ಪಿಸಿದರು, ಆರತಿ ಅವರ ಸಹಾಯವಿಲ್ಲದಿದ್ದರೇ ನನ್ನ ಮಗಳನ್ನು ವಾಪಸ್ ಕರೆತರಲು ಸಾಧ್ಯವಾಗುತ್ತಿರಲಿಲ್ಲ ಎಂದು ಐಶ್ವರ್ಯಾ ತಂದೆ ಸತ್ಯಪಾಲ ಹೇಳಿದ್ದಾರೆ.

Stay up to date on all the latest ರಾಜ್ಯ news
Poll
farmers-Protest

ದೆಹಲಿಯಲ್ಲಿ ಟ್ರಾಕ್ಟರ್ ಪೆರೇಡ್ ಸಮಯದಲ್ಲಿನ ಹಿಂಸಾಚಾರವು ರೈತರ ಆಂದೋಲನದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp