ಹತ್ತು ಜೋಡಿ ದೂರ ಸಂಚಾರದ ವಿಶೇಷ ರೈಲುಗಳಿಗೆ ಪ್ರಸ್ತಾವನೆ ಸಲ್ಲಿಸಿದ ನೈರುತ್ಯ ರೈಲ್ವೆ

ದೇಶದ ವಿವಿಧ ಭಾಗಗಳಿಗೆ ಉತ್ತಮ ರೈಲು ಸಂಪರ್ಕ ಕಲ್ಪಿಸಲು ನೈರುತ್ಯ ರೈಲ್ವೆ ವಲಯ 10 ಜೋಡಿ ದೂರ ಸಂಪರ್ಕ ವಿಶೇಷ ರೈಲುಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಚರಿಸುವಂತೆ ಮಾಡಲು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದೆ.ಕೆಲ ವಾರಗಳ ಹಿಂದೆ ಸಲ್ಲಿಸಿರುವ ಪ್ರಸ್ತಾವನೆಗೆ ಹಸಿರು ನಿಶಾನೆ ಸಿಗಬೇಕಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶದ ವಿವಿಧ ಭಾಗಗಳಿಗೆ ಉತ್ತಮ ರೈಲು ಸಂಪರ್ಕ ಕಲ್ಪಿಸಲು ನೈರುತ್ಯ ರೈಲ್ವೆ ವಲಯ 10 ಜೋಡಿ ದೂರ ಸಂಪರ್ಕ ವಿಶೇಷ ರೈಲುಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಚರಿಸುವಂತೆ ಮಾಡಲು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದೆ.
ಕೆಲ ವಾರಗಳ ಹಿಂದೆ ಸಲ್ಲಿಸಿರುವ ಪ್ರಸ್ತಾವನೆಗೆ ಹಸಿರು ನಿಶಾನೆ ಸಿಗಬೇಕಿದೆ.

ಖಚಿತ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಬೆಂಗಳೂರು ವಿಭಾಗದಿಂದ: ಬೆಂಗಳೂರು ಕಂಟೋನ್ಮೆಂಟ್ ನಿಂದ ಗುವಾಹಟಿಗೆ, ಯಶವಂತಪುರದಿಂದ ಹೌರಾಗೆ, ಕೆಎಸ್ಆರ್ (ಬೆಂಗಳೂರು ಸಿಟಿ) ಮತ್ತು ಸೋಲಾಪುರ, ಕೆಎಸ್ಆರ್ (ಬೆಂಗಳೂರು ಸಿಟಿ) ಮತ್ತು ಮಂಗಳೂರು, ಯಶವಂತಪುರ ಮತ್ತು ಕಾರವಾರಗಳಿಂದ ವಿಶೇಷ ರೈಲು ಸಂಪರ್ಕವನ್ನು ಕೇಳಲಾಗಿದೆ.

ಅದೇ ರೀತಿ ಪ್ರಸ್ತಾವನೆಯಲ್ಲಿ ಹುಬ್ಬಳ್ಳಿ ಮತ್ತು ಮೈಸೂರು, ಹುಬ್ಬಳ್ಳಿ ಮತ್ತು ಸಿಕಂದರಾಬಾದ್, ಹುಬ್ಬಳ್ಳಿ ಮತ್ತು ವಾರಣಾಸಿ, ಹುಬ್ಬಳ್ಳಿ ಮತ್ತು ಎಲ್ ಟಿಟಿ ಮುಂಬೈ, ವಾಸ್ಕೊ ಡ ಗಾಮ ಮತ್ತು ಹೌರಾಗಳಿಗೆ ರೈಲು ಸಂಚಾರ ಮಾಡಲು ಅವಕಾಶ ಕೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com