ತಲಕಾವೇರಿ: ನಾಪತ್ತೆಯಾಗಿರುವ ಅರ್ಚಕರ ಪುತ್ರಿಯರು ವಿದೇಶದಿಂದ ಆಗಮನ, ಕ್ವಾರಂಟೈನ್‌

ನಾಪತ್ತೆಯಾಗಿರುವ ಕೊಡಗು ಜಿಲ್ಲೆಯ ತಲಕಾವೇರಿ ದೇಗುಲದ ಅರ್ಚಕರು ಇಬ್ಬರು ಪುತ್ರಿಯರು ಆಸ್ಟ್ರೇಲಿಯಾಮತ್ತು ನ್ಯೂಜಿಲೆಂಡ್‌ನಿಂದ ಮಡಿಕೇರಿಗೆ ಆಗಮಿಸಿದ್ದು, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಭಾಗಮಂಡಲದಲ್ಲಿನ ಭೂ ಕುಸಿತ  ಪ್ರದೇಶದಲ್ಲಿ ಶೋಧ ಕಾರ್ಯ
ಭಾಗಮಂಡಲದಲ್ಲಿನ ಭೂ ಕುಸಿತ ಪ್ರದೇಶದಲ್ಲಿ ಶೋಧ ಕಾರ್ಯ

ಮಡಿಕೇರಿ: ನಾಪತ್ತೆಯಾಗಿರುವ ಕೊಡಗು ಜಿಲ್ಲೆಯ ತಲಕಾವೇರಿ ದೇಗುಲದ ಅರ್ಚಕರು ಇಬ್ಬರು ಪುತ್ರಿಯರು ಆಸ್ಟ್ರೇಲಿಯಾ
ಮತ್ತು ನ್ಯೂಜಿಲೆಂಡ್‌ನಿಂದ ಮಡಿಕೇರಿಗೆ ಆಗಮಿಸಿದ್ದು, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಈ ಇಬ್ಬರು ಯುವತಿಯರನ್ನು ವಿಮಾನ ನಿಲ್ದಾಣದಿಂದ ಕೊಡಗಿಗೆ ಕೊಂಡೊಯ್ದ ವಾಹನದ ಚಾಲಕನಿಗೆ ಸೋಂಕು ದೃಢಪಟ್ಟ 
ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ. 

ಅವರ ತಂದೆ ಹಾಗೂ ತಲಕಾವೇರಿ ದೇಗುಲದ ಮುಖ್ಯ ಅರ್ಚಕ ನಾರಾಯಣ ಆಚಾರ್‌ ಅವರು ಕಳೆದ ವಾರ ಸಂಭವಿಸಿದ
 ಭೂಕುಸಿತದಲ್ಲಿ ನಾಪತ್ತೆಯಾಗಿದ್ದಾರೆ.

ಈ ಭೂಕುಸಿತದಲ್ಲಿ ಐವರು ನಾಪತ್ತೆಯಾಗಿದ್ದು, ದೇಗುಲದ ಆಡಳಿತಕಾರ ಹಾಗೂ ನಾರಾಯಣ ಅವರ ಸಹೋದರ  ಆನಂದ ತೀರ್ಥ ಸ್ವಾಮಿಯ ಮೃತ ದೇಹ ಪತ್ತೆಯಾಗಿತ್ತು.  ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ನಲ್ಲಿರುವ ನಾರಾಯಣ ಅವರ ಇಬ್ಬರು ಪುತ್ರಿಯರು ಸೋಮವಾರ ಭಾರತಕ್ಕೆ ಆಗಮಿಸಿದ್ದರು. 

ಕೊಡಗು ಜಿಲ್ಲೆಯಲ್ಲಿ ಇಲ್ಲಿಯವರೆಗೆ 701 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 262 ಸಕ್ರಿಯ ಪ್ರಕರಣಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com