ಮೇಕೆದಾಟು ಯೋಜನೆಗೆ ಸರ್ಕಾರ ಬದ್ಧವಾಗಿದೆ:ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಮೇಕೆದಾಟು ಜಲಾಶಯ ಮತ್ತು ಕೃಷ್ಣ ರಾಜ ಸಾಗರ ಮತ್ತು ಮೆಟ್ಟೂರು ಜಲಾಶಯಗಳ ನಡುವೆ ಕುಡಿಯುವ ನೀರಿನ ಯೋಜನೆಗಳಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುನರುಚ್ಛರಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಮೇಕೆದಾಟು ಜಲಾಶಯ ಮತ್ತು ಕೃಷ್ಣ ರಾಜ ಸಾಗರ ಮತ್ತು ಮೆಟ್ಟೂರು ಜಲಾಶಯಗಳ ನಡುವೆ ಕುಡಿಯುವ ನೀರಿನ ಯೋಜನೆಗಳಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುನರುಚ್ಛರಿಸಿದ್ದಾರೆ.

ತಮಿಳು ನಾಡು ಸರ್ಕಾರ ವಿರೋಧಿಸುತ್ತಿರುವ ಯೋಜನೆಯನ್ನು ರಾಜ್ಯದ ರೈತರ ಹಿತದೃಷ್ಟಿಯಿಂದ ಮಾಡಿಯೇ ತೀರುತ್ತೇವೆ. ಯೋಜನೆಗೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಪಡೆಯಲಿದ್ದೇವೆ. ಈ ಯೋಜನೆ ಮೂಲಕ ರಾಜ್ಯದ ದಕ್ಷಿಣ ಜಿಲ್ಲೆಗಳಿಗೆ ಕುಡಿಯುವ ನೀರು ದೊರಕಲಿದೆ ಎಂದು ಸಿಎಂ ಯಡಿಯೂರಪ್ಪ ಮೊನ್ನೆ ಶುಕ್ರವಾರ ಕೆಆರ್ ಎಸ್ ಗೆ ಸತತ 5ನೇ ಬಾರಿ ಬಾಗಿನ ಅರ್ಪಿಸಿದ ನಂತರ ಹೇಳಿದ್ದಾರೆ.

ರಾಜ್ಯದಲ್ಲಿ ನೀರಾವರಿ ಯೋಜನೆಗಳ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಹಿಂದಿನ ವರ್ಷದಲ್ಲಿ 28 ಯೋಜನೆಗಳಿಗೆ ನಮ್ಮ ಸರ್ಕಾರ 84 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದರು. ಆಗ ಹಿರಿಯ ರೈತ ಮುಖಂಡ,ಯಡಿಯೂರಪ್ಪನವರ ನೇತೃತ್ವದ ಸರ್ಕಾರ 8.4 ಕೋಟಿ ರೂಪಾಯಿ ವೆಚ್ಚದಲ್ಲಿ 80 ವರ್ಷಗಳ ಹಳೆಯ ಕೆಆರ್ ಎಸ್ ಜಲಾಶಯದ 18 ಗೇಟ್ ಗಳನ್ನು ತೆಗೆದು ಬೇರೆ ಹಾಕಿಸಿತ್ತು. ವಿಶ್ವೇಶ್ವರಯ್ಯ ಕಾಲುವೆಯನ್ನು ಆಧುನೀಕರಣಗೊಳಿಸಿತು ಎಂದು ಹೇಳಿದರು.

ಈ ಕಾರ್ಯಕ್ರಮದ ವೇಳೆ ರೈತರು, ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿ ಮುಖ್ಯಮಂತ್ರಿಗಳ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದರು. ಈ ಸಮಯದಲ್ಲಿ ಶ್ರೀರಂಗಪಟ್ಟಣ ಮತ್ತು ಹೆಚ್ ಡಿ ಕೋಟೆಗಳಲ್ಲಿ ಹಲವು ರೈತರನ್ನು ಬಂಧಿಸಲಾಯಿತು.

ತೀವ್ರ ಪೊಲೀಸ್ ಭದ್ರತೆ ನಡುವೆ ಸಿಎಂ ಯಡಿಯೂರಪ್ಪ ಕೆಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com