ಕೋವಿಡ್-19 ಹಿನ್ನೆಲೆ ಮೋಟಾರು ವಾಹನ ದಾಖಲೆಗಳ ಸಿಂಧುತ್ವ ಡಿಸೆಂಬರ್ ವರೆಗೆ ವಿಸ್ತರಣೆ

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೋಟಾರು ವಾಹನಗಳ ದಾಖಲೆಗಳ ಸಿಂಧುತ್ವವನ್ನು ಡಿಸೆಂಬರ್ ವರೆಗೆ ವಿಸ್ತರಣೆ ಮಾಡಲು ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ. 
ಕೋವಿಡ್-19 ಹಿನ್ನೆಲೆ ಮೋಟಾರು ವಾಹನ ದಾಖಲೆಗಳ ಸಿಂಧುತ್ವ ಡಿಸೆಂಬರ್ ವರೆಗೆ ವಿಸ್ತರಣೆ
ಕೋವಿಡ್-19 ಹಿನ್ನೆಲೆ ಮೋಟಾರು ವಾಹನ ದಾಖಲೆಗಳ ಸಿಂಧುತ್ವ ಡಿಸೆಂಬರ್ ವರೆಗೆ ವಿಸ್ತರಣೆ

ನವದೆಹಲಿ: ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೋಟಾರು ವಾಹನಗಳ ದಾಖಲೆಗಳ ಸಿಂಧುತ್ವವನ್ನು ಡಿಸೆಂಬರ್ ವರೆಗೆ ವಿಸ್ತರಣೆ ಮಾಡಲು ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ. 

ಮೋಟಾರು ವಾಹನಗಳ ಕಾಯ್ದೆ 1988 ಹಾಗೂ ಕೇಂದ್ರ ಮೋಟಾರ್ ವಾಹನಗಳ ನಿಯಮಾವಳಿ, 1989 ಫಿಟ್ನೆಸ್, ಪರ್ಮಿಟ್, ಪರವಾನಗಿ, ನೋಂದಣಿ ಹಾಗೂ ಇತರ ದಾಖಲಾತಿಗಳ ಸಿಂಧುತ್ವವನ್ನು ಡಿ.31 ವರೆಗೆ ವಿಸ್ತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 

ಇದಕ್ಕೂ ಮುನ್ನ ಮಾ.30 ಹಾಗೂ ಜೂ.09 ರಂದು ದಾಖಲೆಗಳ ಸಿಂಧುತ್ವದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು. 

ಫೆ.1 ರಿಂದ ಕೊನೆಗೊಳ್ಳಲಿದ್ದ ಸಿಂಧುತ್ವಕ್ಕೆ ಈ ವಿಸ್ತರಣೆಯ ಆದೇಶ ಅನ್ವಯವಾಗಲಿದೆ, ಅಧಿಕಾರಿಗಳು ಫೆ.1 ಕ್ಕೆ ಕೊನೆಗೊಳ್ಳಲಿದ್ದ ದಾಖಲೆಗಳ ಸಿಂಧುತ್ವವನ್ನು ಡಿ.31 ವರೆಗೆ ಪರಿಗಣಿಸಬೇಕು ಎಂದು ಸಚಿವಾಲಯ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com