ಮಂಗಳೂರು: ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಪೋಸ್ಟ್  ಹಾಕಿದ್ದ ಆರೋಪಿ ಸೆರೆ

ಸೋಶಿಯಲ್ ಮೀಡಿಯಾದಲ್ಲಿ ಕೋಮು ಪ್ರಚೋದನಾಕಾರಿ ಪೋಸ್ಟ್ ಮಾಡಿದ ಆರೋಪ ಹೊತ್ತ ವ್ಯಕ್ತಿಯನ್ನು ಪೊಲೀಸರು ಆಗಸ್ಟ್ 24 ರ ಸೋಮವಾರ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ. 
ಮಂಗಳೂರು: ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಪೋಸ್ಟ್  ಹಾಕಿದ್ದ ಆರೋಪಿ ಸೆರೆ

ಮಂಗಳೂರು:  ಸೋಶಿಯಲ್ ಮೀಡಿಯಾದಲ್ಲಿ ಕೋಮು ಪ್ರಚೋದನಾಕಾರಿ ಪೋಸ್ಟ್ ಮಾಡಿದ ಆರೋಪ ಹೊತ್ತ ವ್ಯಕ್ತಿಯನ್ನು ಪೊಲೀಸರು ಆಗಸ್ಟ್ 24 ರ ಸೋಮವಾರ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ. 

ಬಂಧಿತ ಆರೋಪಿ ಬಾರ್ಯ ಪುತ್ತಿಲ ಗ್ರಾಮದ ರಘುರಾಮು ಶೆಟ್ಟಿ ಎಂದು ಗುರುತಿಸಿದ್ದು ಸಂಬಂಧಿಯೊಬ್ಬರ ನಿವಾಸದಲ್ಲಿ ಆರೋಪಿಆಶ್ರಯ ಪಡೆದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಪಡೆದ ಬೆಳ್ತಂಗಡಿ ಪೋಲೀಸರು ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ ಜಿ,  ನೇತೃತ್ವದಲ್ಲಿ ಅಲ್ಲಿಗೆ ತೆರಳೀ ಬಂದ್ಜಿಸಿದ್ದು  ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ  ಪೂಜೆಯ ಸಂದರ್ಭದಲ್ಲಿ ಆಗಸ್ಟ್ 5 ರಂದು ರಘುರಾಮು ಶೆಟ್ಟಿನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಮತ್ತು ಪಟಾಕಿಗಳನ್ನು ಸಿಡಿಸಿದ್ದಾರೆ ಎಂದು ಆರೋಪಿಸಿ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ನಂತರ, ಅವರು ವಾಟ್ಸಪ್ ನಲ್ಲಿ  ಪೋಸ್ಟ್ ಮಾಡಿದ್ದಾರೆ, ಯಾರೂ ತನಗೆ ಏನೂ ಮಾಡಲಾರರು ಎಂದು ಹೇಳಿಕೊಂಡ ಶೆಟ್ಟಿ ಬೇರೊಂದು ಸಮುದಾಯದವರನ್ನು ಬಾಂಬ್ ಸಿಡಿಸಿ ನಾಶಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಸಂದೇಶದ ಬಗ್ಗೆ ಕಾರ್ಲಪಾಡಿಯ ಜಲೀಲ್  ಎನ್ನುವವರು ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com