ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ: ಇಂದ್ರಜಿತ್ ಯಾವ ಮಾಹಿತಿ ಹೇಳುತ್ತಾರೋ ನೋಡೋಣ- ಬೊಮ್ಮಾಯಿ

 ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ  ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಯಾವ ಮಾಹಿತಿ ನೀಡುತ್ತಾರೋ ನೋಡೋಣ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ‌ ತಿಳಿಸಿದ್ದಾರೆ.
ಇಂದ್ರಜಿತ್ ಲಂಕೇಶ್, ಬಸವರಾಜ್ ಬೊಮ್ಮಾಯಿ
ಇಂದ್ರಜಿತ್ ಲಂಕೇಶ್, ಬಸವರಾಜ್ ಬೊಮ್ಮಾಯಿ

ಹುಬ್ಬಳ್ಳಿ: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ  ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಯಾವ ಮಾಹಿತಿ ನೀಡುತ್ತಾರೋ ನೋಡೋಣ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ‌ ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ಗೆ ಗಾಂಜಾ ನಂಟಿದೆ ಎಂಬುದರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಬಿಗೆ ತನಿಖೆ ಮಾಡುವಂತೆ ಸೂಚಿಸಿದ್ದೇನೆ. ಶನಿವಾರ ಸ್ಯಾಂಡಲ್ ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ನೋಟಿಸ್ ನೀಡಲಾಗಿದೆ. ಯಾವ ಮಾಹಿತಿ ನೀಡುತ್ತಾರೋ ನೋಡೋಣ ಎಂದರು.

ಇಲ್ಲಿಯವರೆಗೆ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಲಾಗುತ್ತಿತ್ತು. ಈಗ ಡಾರ್ಕ್ ನೈಟ್ ಆನ್ ಲೈನ್ ವೆಬ್ ಸೈಟ್ ಭೇದಿಸುತ್ತಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಕನ್ನಡದಲ್ಲಿ ನನಗೆ ಗೊತ್ತಿರುವಂತಹ ನಟರು, ಸ್ಟಾರ್ ನಟರು ಯಾರು ಕೂಡ ಇಂಥದ್ದನ್ನು ಮಾಡಲ್ಲ. ಅಂತಹ ಉದಾಹರಣೆ ಇಲ್ಲ. ಆದರೆ, ಯುವ ನಟ-ನಟಿಯರು, ಇದ್ದಕ್ಕಿದ್ದಂತೆ  ಪ್ರಚಾರ ಗಳಿಸಿದವರು ಈ ಥರದ ರೇವ್‌ ಪಾರ್ಟಿಗಳಲ್ಲಿ ಸೇರುತ್ತಾರೆ ಎಂದು   ನಾನು ಕೂಡ ಕೇಳಿದ್ದೇನೆ. ನನಗೂ ಹಲವಾರು ಘಟನೆಗಳು ಗೊತ್ತಿವೆ. ನನಗೆ ಭದ್ರತೆ ನೀಡಿದರೆ, ಈ ಬಗ್ಗೆ ಹೇಳಬಹುದು. ಅದರಲ್ಲೂ ನಟಿಯರು ಹೆಚ್ಚಾಗಿ  ಇದರಲ್ಲಿ ಇದ್ದಾರೆ' ಎಂದು ಮಾಧ್ಯಮಗಳಿಗೆ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com