ನನಸಾಯಿತು ದಶಕಗಳ ಕನಸು: ಮದಲೂರು ಕೆರೆಗೆ ನೀರು ಹರಿಸಿ ಭರವಸೆ ಈಡೇರಿಸಿದ ಸಿಎಂ ಯಡಿಯೂರಪ್ಪ

ಶಿರಾ ಉಪಚುನಾವಣೆ ವೇಳೆ ರಾಜ್ಯ ಬಿಜೆಪಿ ಸರ್ಕಾರ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಆರು ತಿಂಗಳಲ್ಲಿ ಹೇಮಾವತಿ ನೀರನ್ನು ಮದಲೂರು ಕೆರೆಗೆ ಬಿಡುತ್ತೇವೆ ಎಂದು ಶಿರಾ ಉಪಚುನಾವಣೆ ವೇಳೆ ಸಿಎಂ ವಾಗ್ದಾನ ಮಾಡಿದ್ದರು.
ಗೊರೂರು ಜಲಾಶಯದಿಂದ ಮದಲೂರು ಕೆರೆಗೆ ನೀರು
ಗೊರೂರು ಜಲಾಶಯದಿಂದ ಮದಲೂರು ಕೆರೆಗೆ ನೀರು

ತುಮಕೂರು: ಶಿರಾ ಉಪಚುನಾವಣೆ ವೇಳೆ ರಾಜ್ಯ ಬಿಜೆಪಿ ಸರ್ಕಾರ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಆರು ತಿಂಗಳಲ್ಲಿ ಹೇಮಾವತಿ ನೀರನ್ನು ಮದಲೂರು ಕೆರೆಗೆ ಬಿಡುತ್ತೇವೆ ಎಂದು ಶಿರಾ ಉಪಚುನಾವಣೆ ವೇಳೆ ಸಿಎಂ ವಾಗ್ದಾನ ಮಾಡಿದ್ದರು. ಆದರಂತೆ ಸೋಮವಾರದಿಂದ ಕಳ್ಳಂಬೆಳ್ಳ ಕೆರೆಯಿಂದ ಹೇಮಾವತಿ ನೀರನ್ನು ಮದಲೂರು ಕೆರೆಗೆ ಬಿಡಲಾಗಿದ್ದು 40 ವರ್ಷದ ಕನಸು ನನಸಾಗಿದೆ.

ಉಪ ಚುನಾವಣೆ ಮುಗಿದ ಬಳಿಕ ಶಾಸಕ ರಾಜೇಶ್ ಗೌಡ ಮದಲೂರಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದರು. 40ಕ್ಕೂ ಹೆಚ್ಚು ಜೆಸಿಬಿ ಮೂಲಕ 34 ಕೀಮೀ ಕಾಲುವೆಯಲ್ಲಿದ್ದ ಕಳೆ ತೆಗೆಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದರು.

ಶಾಸಕ ರಾಜೇಶ್ ಗೌಡ, ಸಂಸದ ಆನೇಕಲ್ ನಾರಾಯಣ ಸ್ವಾಮಿ, ಎಂಎಲ್ ಸಿ ಚಿದಾನಂದಗೌಡ, ಕುಂಚಟಿಗ ಒಕ್ಕಲಿಗ ಸಮುದಾಯದ ಶ್ರೀನಂಜಾವಧೂತ ಸ್ವಾಮೀಜಿ ಸೋಮವಾರ ಗಂಗಾಪೂಜೆ ನೆರೆವೇರಿಸಿದರು.

ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಕಾಂಗ್ರೆಸ್ ಶಾಸಕ ಟಿಬಿ ಜಯಚಂದ್ರ ಹೇಮಾವತಿ ಮತ್ತು ಕಾವೇರಿ ನೀರನ್ನು ಕಳ್ಳಂಬೆಳ್ಳ ಮತ್ತು ಶಾರಿ ಕೆರೆಗಳಿಗೆ ತರಲು ಯಶಸ್ವಿಯಾಗಿದ್ದರು.

2009 ರಲ್ಲಿ ಬಿಜೆಪಿ ಮುಖಂಡರಾದ ಸೊಗಡು ಶಿವಣ್ಣ ಮತ್ತು ಬಿ ಸುರೇಶ್ ಗೌಡ ಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮೊದಲೂರು ಕೆರೆಗೆ ಅನುದಾನ ನೀಡದಂತೆ ಆಗ್ರಹಿಸಿದ್ದರು.  ಆದರೆ ಬದಲಾದ ಕಾಲಘಟ್ಟದಲ್ಲಿ ಬಿಜೆಪಿ ಮುಖಂಡರೇ ಮದಲೂಕು ಕೆರೆಗೆ ನೀರು ಹರಿಸುವ ಭರವಸೆ ನೀಡಿದ್ದರು, ಸಿಎಂ ಯಡಿಯೂರಪ್ಪ ಕೂಡ ಚುನಾವಣೆಗೆ ಪ್ರಮುಖ ಅಸ್ತ್ರವನ್ನಾಗಿ ಬಳಸಿದ್ದರು. ಇದು ಕೂಡ ಬಿಜೆಪಿ ಗೆಲುವಿಗೆ ಕಾರಣವಾಗಿತ್ತು.

2012 ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಎಸ್ ಎಂ ಕೃಷ್ಣ ಕಾಲುವೆ ನಿರ್ಮಾಣಕ್ಕಾಗಿ ಶಂಕು ಸ್ಥಾಪನೆ ಮಾಡಿದ್ದರು, 2016 ರಲ್ಲಿ ಈ ಕಾಮಗಾರಿ ಸಂಪೂರ್ಣವಾಗಿತ್ತು, 2017 ರಲ್ಲಿ ಜಯಚಂದ್ರ ಸಚಿವರಾಗಿದ್ದಾಗ ಪ್ರಯೋಕಗಾತ್ಮಕವಾಗಿ 10 ದಿನಗಳ ಕಾಲ ನೀರು ಹರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com