ರೇರಾಗೆ 3 ವರ್ಷ: ಆದರೂ 3.3 ಲಕ್ಷ ಗೃಹ ಖರೀದಿದಾರರಿಗೆ ನಷ್ಟ

ರಾಜ್ಯದಲ್ಲಿ ಗೃಹ ಖರೀದಿದಾರರ ಹಿತಾಸಕ್ತಿ ಕಾಪಾಡಲು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಅಸ್ತಿತ್ವದಲ್ಲಿದ್ದರೂ 3.3 ಲಕ್ಷ ಮಂದಿ ಗೃಹ ಖರೀದಿದಾರರು ನಷ್ಟ ಎದುರಿಸುವ ಭೀತಿಯಲ್ಲಿದ್ದಾರೆ. 
ರೇರಾಗೆ 3 ವರ್ಷ: ಆದರೂ 3.3 ಲಕ್ಷ ಗೃಹ ಖರೀದಿದಾರರಿಗೆ ನಷ್ಟ
ರೇರಾಗೆ 3 ವರ್ಷ: ಆದರೂ 3.3 ಲಕ್ಷ ಗೃಹ ಖರೀದಿದಾರರಿಗೆ ನಷ್ಟ

ಬೆಂಗಳೂರು: ರಾಜ್ಯದಲ್ಲಿ ಗೃಹ ಖರೀದಿದಾರರ ಹಿತಾಸಕ್ತಿ ಕಾಪಾಡಲು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಅಸ್ತಿತ್ವದಲ್ಲಿದ್ದರೂ 3.3 ಲಕ್ಷ ಮಂದಿ ಗೃಹ ಖರೀದಿದಾರರು ನಷ್ಟ ಎದುರಿಸುವ ಭೀತಿಯಲ್ಲಿದ್ದಾರೆ. 

1,100 ಯೋಜನೆಗಳ ಮೇಲೆ 3.3 ಲಕ್ಷ ಮಂದಿ ಹೂಡಿಕೆ ಮಾಡಿದ್ದು, ಈ ಯೋಜನೆಯಡಿ ಬರುವ ಗೃಹ ಖರೀದಿದಾರರಿಗೆ ಮನೆಗಳು ಇನ್ನಷ್ಟೇ ನೋಂದಣಿಯಾಗಬೇಕಿದೆ ಎನ್ನುತ್ತಿದೆ ಪೀಪಲ್ಸ್ ಕಲೆಕ್ಟೀವ್ ಎಫರ್ಟ್ಸ್ ನ ವೇದಿಕೆ 

ರೇರಾ ವೆಬ್ ಪೋರ್ಟಲ್ ನಲ್ಲಿ ಪಡೆದಿರುವ ಮಾಹಿತಿಯ ಪ್ರಕಾರ ಡಿ.3ವರೆಗಿನ ಅಂಕಿ-ಅಂಶಗಳ ಪ್ರಕಾರ 1,100 ಯೋಜನೆಗಳು ನೋಂದಣಿಯಾಗದೇ ಹಾಗೆಯೇ ಉಳಿದಿದೆ. ಪ್ರತಿಯೊಂದು ಮನೆಗೆ 50 ಲಕ್ಷ ರೂಪಾಯಿಯಂತೆ ಒಟ್ಟು 120 ಲಕ್ಷ ಕೋಟಿಯಷ್ಟು ಮೊತ್ತದ ಹಣ ಸಿಲುಕಿಕೊಂಡಿದೆ. ಈ ಪೈಕಿ ಕನಿಷ್ಟ ಶೇ.80 ರಷ್ಟು ಹಣವನ್ನು ಈಗಾಗಲೇ ಗೃಹ ಖರೀದಿದಾರರು ಪಾವತಿ ಮಾಡಲಾಗಿದೆ. 1,044 ಯೋಜನೆಗಳು ರೇರಾ ಅಡಿಯಲ್ಲಿ ಇನ್ನಷ್ಟೇ ನೋಂದಣಿಯಾಗಬೇಕಿದೆ. ಒಟ್ಟಾರೆ 4,410 ಯೋಜನೆಗಳ ಪೈಕಿ 3,704 ಮನೆಗಳು ನೋಂದಣಿಯಾಗಿವೆ ಎನ್ನುತ್ತಾರೆ ವೇದಿಕೆಯ ಕಾರ್ಯದರ್ಶಿ ಎಂಎಸ್ ಶಂಕರ್

ಯೋಜನೆಯ ಸಣ್ಣ ವಿವರಗಳು ಹಾಗೂ ತ್ರೈಮಾಸಿಕ ವರದಿಗಳು, ಫೈನಾನ್ಷಿಯಲ್ ಬ್ಯಾಲೆನ್ಸ್ ಶೀಟ್ ಗಳನ್ನು ಇನ್ನೂ ವೆಬ್ ಸೈಟ್ ನಲ್ಲಿ ಹಾಕಲಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com