ಗ್ರಾಮ ಪಂಚಾಯಿತಿ ಸ್ಧಾನ ಹರಾಜು: ಕೆಪಿಸಿಸಿ ಅಸಮಾಧಾನ

ರಾಜ್ಯದಲ್ಲಿ ಡಿಸೆಂಬರ್ 23 ರಂದು ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ, ಕೆಲವು ಗ್ರಾಮಗಳಲ್ಲಿ ಪಂಚಾಯಿತಿ ಸದಸ್ಯರನ್ನು ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆ ಮಾಡುತ್ತಿರುವುದು ವಿಷಾದನೀಯ.
ಕಾಂಗ್ರೆಸ್ ಲೋಗೋ
ಕಾಂಗ್ರೆಸ್ ಲೋಗೋ

ದಾವಣಗೆರೆ: ರಾಜ್ಯದಲ್ಲಿ ಡಿಸೆಂಬರ್ 23 ರಂದು ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ, ಕೆಲವು ಗ್ರಾಮಗಳಲ್ಲಿ ಪಂಚಾಯಿತಿ ಸದಸ್ಯರನ್ನು ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆ ಮಾಡುತ್ತಿರುವುದು ವಿಷಾದನೀಯ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್. ಹರೀಶ್ ಬಸಾಪುರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಪ್ರಕ್ರಿಯೆಗಳಿಂದ ಕೇವಲ ಹಣ ಇದ್ದವರು ಮಾತ್ರ ಆಯ್ಕೆಯಾಗಲು ಸಾಧ್ಯವಾಗುತ್ತಿದ್ದು, ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಎಂದು ಹೇಳುವುದು ಕೇವಲ ವಾಕ್ಯವಾಗಿ ಉಳಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಸರ್ಕಾರ ಕೇವಲ ಮಾತಿನಲ್ಲಿ ಈ ತರಹದ ಆಯ್ಕೆಯನ್ನು ಅನುರ್ಜಿತಗೊಳಿಸುವುದಾಗಿ ತಿಳಿಸಿ, ಜಾಣಕಿವುಡು ತೋರದೆ ಸೂಕ್ತ ಕ್ರಮ ತೆಗೆದುಕೊಂಡು ಚುನಾವಣೆ ನಡೆಸಬೇಕು ಇಲ್ಲವೇ ಪೂರ್ಣ ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಿಷೇಧಿಸಿ ಆಡಳಿತ ಅಧಿಕಾರಿಗಳ ಮೂಲಕ ಪಂಚಾಯಿತಿಗಳನ್ನು ನಿರ್ವಹಣೆ ಮಾಡಬೇಕು.

ದೇವಸ್ಥಾನಗಳಿಗೆ ಹಣ ಸಂಗ್ರಹಿಸಲು ಹರಾಜು ಮೂಲಕ ಸದಸ್ಯರನ್ನು ಆಯ್ಕೆ ಮಾಡುವುದರಿಂದ ಮತದಾರರ ಮತದಾನದ ಹಕ್ಕು ಇಲ್ಲದಂತಾಗುತ್ತದೆ, ಮತದಾರರಿಗೆ ಆ ವ್ಯಕ್ತಿಯ ಮೇಲೆ ನಂಬಿಕೆ ಇಲ್ಲದಿದ್ದರೂ ಸಹ ಹರಾಜಿನಲ್ಲಿ ಆಯ್ಕೆಯಾದ ಎಂಬ ಒಂದೇ ಉದ್ದೇಶದಿಂದ ಸುಮ್ಮನಿರಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮತದಾರರನ್ನು ಮತಯಾಚನೆ ಮಾಡದೆ ಆಯ್ಕೆಯಾದ ಸದಸ್ಯ ಮುಂದೆ ಮತದಾರರ ಕಷ್ಟಸುಖಗಳಿಗೆ ಭಾಗಿಯಾಗುವ ಯಾವುದೇ ನಂಬಿಕೆ ಇರುವುದಿಲ್ಲ, ಆದ್ದರಿಂದ ಈ ತರಹದ   ವ್ಯವಸ್ಥೆಗೆ ಕೊನೆ ಮಾಡಬೇಕು ಜನರಿಂದಲೇ ಆಯ್ಕೆಯಾದ ಸದಸ್ಯರಿಗೆ ಮಾತ್ರ ಪಂಚಾಯಿತಿ ಸದಸ್ಯರ ಅರ್ಹತೆ ಎಂಬ ಕಾನೂನು ತರಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com