ಜೈರಾಮ್ ರಮೇಶ್ ಅವರ ಹುಲಿ ವಿಡಿಯೋ ಕೊಡಗು ಅಥವಾ ಭಾರತದ್ದಲ್ಲ: ಅರಣ್ಯಾಧಿಕಾರಿಗಳು

ಮಾಜಿ ಪರಿಸರ ಸಚಿವ ಹಾಗೂ ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ಪೋಸ್ಟ್ ಮಾಡಿದ್ದ ವಿಡಿಯೋದಿಂದ ತೊಂದರೆಗೆ ಸಿಲುಕಿದ್ದಾರೆ.
ಜೈರಾಮ್ ರಮೇಶ್
ಜೈರಾಮ್ ರಮೇಶ್

ಹುಬ್ಬಳ್ಳಿ: ಮಾಜಿ ಪರಿಸರ ಸಚಿವ ಹಾಗೂ ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ಪೋಸ್ಟ್ ಮಾಡಿದ್ದ ವಿಡಿಯೋದಿಂದ ತೊಂದರೆಗೆ ಸಿಲುಕಿದ್ದಾರೆ.

ಹುಲಿಯೊಂದು ಬಾತ್ ಟಬ್ ನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದರು, ಜೊತೆಗೆ ಇದು ಕರ್ನಾಟಕದ ಕೊಡಗಿನದ್ದು ಎಂದು ಪೋಸ್ಟ್ ಮಾಡಿದ್ದರು, ವಿಡಿಯೋ ಸುದ್ದಿ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ವಿಡಿಯೋ ಕರ್ನಾಟಕದ್ದೂ ಅಲ್ಲ, ಹಾಗೂ ಭಾರತದ ಯಾವುದೇ ಭಾಗದ್ದೂ ಅಲ್ಲ ಎಂದು ಹೇಳಿದ್ದಾರೆ.

ಹುಲಿ ಮತ್ತು ಅದರ ಹಿನ್ನೆಲೆಯಲ್ಲಿರುವ ಸಸ್ಯವರ್ಗ ನೋಡಿ ಅದು ಕರ್ನಾಟಕದಲ್ಲ, ಭಾರತದ ಹೊರಗೆ ಶೂಟಿಂಗ್ ಮಾಡಿರುವ ವಿಡಿಯೋ ಇದಾಗಿದೆ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿರುವ ಹುಲಿ ನೋಡಿದರೇ ಅಮೆರಿಕಾದಲ್ಲಿ ಮಾಡಿರುವ ಹುಲಿ ಸಾಕಾಣಿಕಾ ಕೇಂದ್ರ ರೀತಿ ಕಾಣುತ್ತದೆ.  ಹುಲಿಯ ನಯವಾದ ದೇಹ, ಲಾಗ್ ಶೆಡ್,  ರಬ್ಬರ್ ಸ್ನಾನದತೊಟ್ಟಿಯು ವೀಡಿಯೊ ಹುಲಿ ಫಾರ್ಮ್‌ಗಳಲ್ಲಿ ಒಂದಾಗಿದೆ ಎಂದು ಸಾಬೀತುಪಡಿಸುತ್ತದೆ. ರಬ್ಬರ್ ತೊಟ್ಟಿ ಮತ್ತು ಹುಲಿಯ ಹಿಂದೆ ಇರುವ ಮರ ನೋಡಿದರೇ ಇದು ಕೊಡಗಿನದ್ದಲ್ಲ ಎಂದು ತಿಳಿದು ಬರುತ್ತದೆ ಎಂದು ಹೇಳಿದ್ದಾರೆ.

ನಾಗರಾಹೊಳೆ ಹೊರಗೆ ಹುಲಿಗಳು ಸಂಚರಿಸುವುದರಿಂದ ಈ ವಿಡಿಯೋ ಸುತ್ತಮುತ್ತಲಿನ ಯಾವುದೇ ಖಾಸಗಿ ಜಮೀನಿನಿಂದ ಬಂದಿದೆಯೇ ಎಂದು ಪರಿಶೀಲಿಸುವಂತೆ ನಾಗರಹೊಳೆ ಟೈಗರ್ ರಿಸರ್ವ್‌ನ ಅಧಿಕಾರಿಗಳಿಗೆ ಅರಣ್ಯ ಇಲಾಖೆ ನಿರ್ದೇಶನ ನೀಡಿತು.

ಇನ್ನೂ ತಮ್ಮ ಟ್ಟೀಟ್ ಬಗ್ಗೆ ಜೈರಾಮ್ ರಮೇಶ್ ಯಾವುದೇ ಸ್ಪಷ್ಟನೆ ನೀಡಿಲ್ಲ, ಆದರೆ ವಿಡಿಯೋವನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಶೇರ್ ಮಾಡಿದ್ದಾರೆ, ಮಹಿಂದ್ರಾ ಅವರು ಕೊಡಗು ಜಿಲ್ಲೆಯ ಜೊತೆ ಸುದೀರ್ಘ ಸಂಬಂಧ ಹೊಂದಿದ್ದಾರೆ.  ಅವರು ತಮ್ಮ ಬಾಲ್ಯವನ್ನು ಇಲ್ಲಿಯೇ ಕಳೆದಿದ್ದಾರೆ,  ಮಹೀಂದ್ರಾ ಗ್ರೂಪ್ ನಾಗರಹೊಳೆ ಸಮೀಪ ದೊಡ್ಡ ಎಸ್ಟೇಟ್ ಹೊಂದಿದೆ, ಹೀಗಾಗಿ ಇದು ಮಹೀಂದ್ರಾ ಎಸ್ಟೇಟ್ ನಿಂದ ಬಂದಿರುವುದು ಎಂಬ ವದಂತಿ ಹಬ್ಬಿದೆ.

ಆದರೆ, ವಿಡಿಯೋ ಭಾರತದಿಂದ ಬಂದದ್ದಲ್ಲ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ ನಂತರ ಊಹಾಪೋಹಾಗಳಿಗೆ ಕಡಿವಾಣ ಹಾಕಲಾಯಿತು. ಈ ರೀತಿ ವಿಡಿಯೋಗಳನ್ನು ಶೇರ್ ಮಾಡುವುದನ್ನು ನಿಯಂತ್ರಿಸಬೇಕು, ಹೀಗಾಗಿ ವಿಡಿಯೋಗ್ರಾಫರ್ ಮತ್ತು ಛಾಯಾಗ್ರಾಹಕರು ವಾಟರ್ ಮಾರ್ಕ್ ಹಾಕಬೇಕು ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com