ರೈಲಿಗೆ ತಲೆಕೊಟ್ಟು ಪೊಲೀಸ್ ಪೇದೆ ಆತ್ಮಹತ್ಯೆ

ರೈಲಿಗೆ ತಲೆಕೊಟ್ಟು ಪೇದೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕುಣಿಗಲ್ ರೈಲ್ವೆ ನಿಲ್ದಾಣ ಬಳಿ ಶನಿವಾರ ಬೆಳಿಗ್ಗೆ ವರದಿಯಾಗಿದೆ.
ಆತ್ಮಹತ್ಯೆ
ಆತ್ಮಹತ್ಯೆ

ತುಮಕೂರು: ರೈಲಿಗೆ ತಲೆಕೊಟ್ಟು ಪೇದೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕುಣಿಗಲ್ ರೈಲ್ವೆ ನಿಲ್ದಾಣ ಬಳಿ ಶನಿವಾರ ಬೆಳಿಗ್ಗೆ ವರದಿಯಾಗಿದೆ.
 
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಅಡವಿ ಗ್ರಾಮದ ಯಲ್ಲಾಲಿಂಗ ಮೇಟಿ (26) ಮೃತ ಪೇದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ‌.
 
ಯಲ್ಲಾಲಿಂಗ ಮೇಟಿ ಅವರು ಕುಣಿಗಲ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com