ಸಹಾನುಭೂತಿಯ ನೆಲೆಯಲ್ಲಿ ವಿವಾಹಿತ ಮಗಳಿಗೆ ನೇಮಕಾತಿ ನಿರಾಕರಿಸುವುದು ಸಂವಿಧಾನ ವಿರೋಧಿ: ಹೈಕೋರ್ಟ್

ಸಹಾನುಭೂತಿಯ ನೆಲೆಯಲ್ಲಿ ನೇಮಕಾತಿ ನೀಡುವಾಗ ವಿವಾಹಿತ ಹೆಣ್ಣುಮಗಳನ್ನು ಕುಟುಂಬದ ಅಭಿವ್ಯಕ್ತಿಯ ಪರಿಧಿಯಿಂದ ಹೊರಗಿಡುವುದು ಅಕ್ರಮ ಹಾಗೂ ಅಸಾಂವಿಧಾನಿಕ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಸಹಾನುಭೂತಿಯ ನೆಲೆಯಲ್ಲಿ ನೇಮಕಾತಿ ನೀಡುವಾಗ ವಿವಾಹಿತ ಹೆಣ್ಣುಮಗಳನ್ನು ಕುಟುಂಬದ ಅಭಿವ್ಯಕ್ತಿಯ ಪರಿಧಿಯಿಂದ ಹೊರಗಿಡುವುದು ಅಕ್ರಮ ಹಾಗೂ ಅಸಾಂವಿಧಾನಿಕ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಆದ್ದರಿಂದ ವಿವಾಹಿತ ಹೆಣ್ಣುಮಗಳಿಗೆ ಸಹಾನುಭೂತಿಯ ನೆಲೆಯಲ್ಲಿ ನೇಮಕಾತಿಯನ್ನು ನಿರಾಕರಿಸುವುದು ಆರ್ಟಿಕಲ್ 15 ರ ಉಲ್ಲಂಘನೆಯಾಗಲಿದೆ ಎಂದು ಹೈಕೋರ್ಟ್ ಮಹತ್ವದ ಹೇಳಿಕೆಯನ್ನು ನೀಡಿದೆ

ಭುವನೇಶ್ವರಿ ವಿ ಪುರಾಣಿಕ್ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಒಪ್ಪಿರುವ ಹೈಕೋರ್ಟ್ ನ ನ್ಯಾ.ಎಂ ನಾಗಪ್ರಸನ್ನ 1996 ರ ರೂಲ್ 2(1)(a)(i) ನಲ್ಲಿರುವ ವಿವಾಹ ಏತರ ಎಂಬ ಶಬ್ದವನ್ನು ಅನೂರ್ಜಿತಗೊಳಿಸಿದ್ದು, ಅರ್ಜಿದಾರರ ಹಕ್ಕು ಪ್ರತಿಪಾದನೆಯನ್ನು ಪರಿಗಣಿ ಒಂದು ತಿಂಗಳಲ್ಲಿ ನೇಮಕಾತಿ ಆದೇಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮಾರತಹಳ್ಳಿಯ ನಿವಾಸಿಯಾಗಿರುವ ಭುವನೇಶ್ವರಿ ವಿ ಪುರಾಣಿಕ್, ಬೆಳಗಾಂ ನ ಎಪಿಎಂಸಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಅಶೋಕ್ ಅಸೋಕ್ ಆದಿವೆಪ್ಪ ಮಡಿವಾಳರ್ ಅವರ ಮಗಳಾಗಿದ್ದು, ಅವರು ಸೇವೆಯಲ್ಲಿರುವಾಗಲೇ ಮೃತಪಟ್ಟ ಕಾರಣ ಸಹಾಭೂತಿಯ ಆಧಾರದಲ್ಲಿ ಅವರ ಕೆಲಸವನ್ನು ಮಗನಿಗೆ ನೀಡಲು ಸರ್ಕಾರ ಮುಂದಾಗಿತ್ತು. ಆದರೆ ಮಗ ಅದನ್ನು ತನಗೆ ಇಷ್ಟವಿಲ್ಲವೆಂದು ನಿರಾಕರಿಸಿದ್ದರು. ಮಗಳಿಗೆ ವಿವಾಹವಾಗಿದ್ದ ಕಾರಣ ಆ ಕೆಲಸವನ್ನು ಆಕೆಗೆ ನೀಡಲು ಸಾಧ್ಯವಾಗುವುದಿಲ್ಲ ಎಂದು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಭುವನೇಶ್ವರಿ ಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕರಣದ ಸಂಬಂಧ ಹೈಕೋರ್ಟ್ ಸಹಾನುಭೂತಿಯ ನೆಲೆಯಲ್ಲಿ ವಿವಾಹಿತ ಮಗಳಿಗೆ ನೇಮಕಾತಿ ನಿರಾಕರಿಸುವುದು ಸಂವಿಧಾನ ವಿರೋಧಿ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com