ಧಾರವಾಡದ ಈ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಪಂಚಾಯತಿ ಚುನಾವಣೆಗೆ ಮತದಾನ!

ಜಿಲ್ಲಾಕೇಂದ್ರ ಧಾರವಾಡದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಮತ್ತು 2,500 ಜನಸಂಖ್ಯೆಯನ್ನು ಹೊಂದಿರುವ ಹಂಗರಕಿ ಎಂಬ ಚಿಕ್ಕ ಗ್ರಾಮವು  ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಕಾಣುತ್ತಿದೆ. ವಿಶೇಷವೆಂದರೆ 1980 ರ ದಶಕದ ಮಧ್ಯಭಾಗದಲ್ಲಿ ರಾಜ್ಯದಲ್ಲಿ ಪಂಚಾಯತ್ ರಾಜ್ ಪದ್ಧತಿಯನ್ನು ಪರಿಚಯಿಸಿದಾಗಿನಿಂದಲೂ, ಗ್ರಾಮದಲ್ಲಿ ಮತದಾನ ನಡೆದಿಲ್ಲ.
ಧಾರವಾಡದ ಈ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಪಂಚಾಯತಿ ಚುನಾವಣೆಗೆ ಮತದಾನ!

ಹುಬ್ಬಳ್ಳಿ: ಜಿಲ್ಲಾಕೇಂದ್ರ ಧಾರವಾಡದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಮತ್ತು 2,500 ಜನಸಂಖ್ಯೆಯನ್ನು ಹೊಂದಿರುವ ಹಂಗರಕಿ ಎಂಬ ಚಿಕ್ಕ ಗ್ರಾಮವು  ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಕಾಣುತ್ತಿದೆ. ವಿಶೇಷವೆಂದರೆ 1980 ರ ದಶಕದ ಮಧ್ಯಭಾಗದಲ್ಲಿ ರಾಜ್ಯದಲ್ಲಿ ಪಂಚಾಯತ್ ರಾಜ್ ಪದ್ಧತಿಯನ್ನು ಪರಿಚಯಿಸಿದಾಗಿನಿಂದಲೂ, ಗ್ರಾಮದಲ್ಲಿ ಮತದಾನ ನಡೆದಿಲ್ಲ.

ಹಂಗರಕಿ ಗ್ರಾಮ ಪಂಚಾಯಿತಿಯು ಹಂಗರಕಿ, ದುಬ್ಬನಮರಡಿ ಮತ್ತು ಖಾನಾಪುರ ಎಂಬ ಮೂರು ಗ್ರಾಮಗಳನ್ನು ಒಳಗೊಂಡಿದೆ. ಪಂಚಾಯತಿ 10 ಸ್ಥಾನಗಳನ್ನು ಹೊಂದಿದೆ. ಮತದಾನದಲ್ಲಿ ದುಬ್ಬನಮರಡಿ ಮತ್ತು ಖಾನಾಪುರ ಗ್ರಾಮಸ್ಥರು ನಾಲ್ಕು ಸ್ಥಾನಗಳನ್ನು (ತಲಾ ಎರಡು) ಆಯ್ಕೆ ಮಾಡುತ್ತಿದ್ದರಾದರೂ ಹಂಗರಕಿ ಗ್ರಾಮಸ್ಥರು ಇದುವರೆಗೆ ಪ್ರತೀ ಬಾರಿಯೂ ತಮ್ಮಲ್ಲಿನ ಆರು ಸ್ಥಾನಗಳಿಗೆ ಅವಿರೋಧವಾಗಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದರು. ಈ ಬಾರಿ 12 ಅಭ್ಯರ್ಥಿಗಳು ಗ್ರಾಮ ಪಂಚಾಯಿತಿಯ ಸದಸ್ಯರಾಗಲು ಆಶಿಸುತ್ತಿರುವುದರಿಂದ ಮತದಾನದ ಅವಶ್ಯಕತೆಯಿದೆ. 12 ಸ್ಪರ್ಧಿಗಳಲ್ಲಿ, ಎಂಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಉಳಿದವರು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.

ಧಾರವಾಡ ಗ್ರಾಮೀಣ ಶಾಸಕ ಅಮೃತ್ ದೇಸಾಯಿ ಈ ಗ್ರಾಮದವರಾಗಿದ್ದು ಅವರ ಕುಟುಂಬವು ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತಿತ್ತು. , “ಈ ಮೊದಲು ಗ್ರಾಮವು ತುಂಬಾ ಚಿಕ್ಕದಾಗಿತ್ತು ಮತ್ತು ಗ್ರಾಮಸ್ಥರಲ್ಲಿ ಒಮ್ಮತವಿತ್ತು. ಈಗ ಗ್ರಾಮ ಬೆಳೆದಿದೆ ಮತ್ತು ಅನೇಕ ಆಕಾಂಕ್ಷಿಗಳಿದ್ದಾರೆ. ಅನೇಕ ಯುವಕರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ ಮತ್ತು ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಾರೆ. ಆದ್ದರಿಂದ ಗ್ರಾಮಸ್ಥರು ಚುನಾವಣೆಗೆ ಹೋಗಲು ತೀರ್ಮಾನಿಸಿದ್ದಾರೆ.. , ”ಎಂದು ದೇಸಾಯಿ ಹೇಳಿದ್ದಾರೆ.

ಈ ಹಿಂದೆ ಭಾರತೀಯ ಸೇಬೆಯಲ್ಲಿದ್ದ ವ್ಯಕ್ತಿ ಬಸವರಾಜ್ ಬಡಿಗೇರ್ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಳೆದ ವರ್ಷ ಗ್ರಾಮಕ್ಕೆ ಮರಳಿದ ಅವರು ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಹೇಳಿದರು“ಗ್ರಾಮಸ್ಥರು ಬದಲಾವಣೆಯನ್ನು ನೋಡಲು ಬಯಸುತ್ತಾರೆ. ಆದ್ದರಿಂದ, ಅವರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತ ಚಲಾಯಿಸುತ್ತಾರೆ, ”ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com