ರಾಜ್ಯ ಬಜೆಟ್-2021: ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ- ಸಚಿವ ಸುಧಾಕರ್ ವಿಶ್ವಾಸ

2020 ಆರೋಗ್ಯ ಕ್ಷೇತ್ರದ ಮೇಲೆ ಅತಿ ಹೆಚ್ಚು ಒತ್ತಡ ಉಂಟಾದ ವರ್ಷ, ನೋಡ ನೋಡುತ್ತಿದ್ದಂತೆಯೇ 2020 ನೇ ಸಾಲು ಮುಕ್ತಾಯಗೊಂಡು 2021 ರ ಆಗಮನಕ್ಕೂ ವೇದಿಕೆ ಸಜ್ಜುಗೊಂಡಿದ್ದು, ಬಜೆಟ್ ತಯಾರಿಯೂ ನಡೆದಿದೆ. 
ರಾಜ್ಯ ಬಜೆಟ್-2021: ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ- ಸಚಿವ ಸುಧಾಕರ್ ವಿಶ್ವಾಸ
ರಾಜ್ಯ ಬಜೆಟ್-2021: ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ- ಸಚಿವ ಸುಧಾಕರ್ ವಿಶ್ವಾಸ

2020 ಆರೋಗ್ಯ ಕ್ಷೇತ್ರದ ಮೇಲೆ ಅತಿ ಹೆಚ್ಚು ಒತ್ತಡ ಉಂಟಾದ ವರ್ಷ, ನೋಡ ನೋಡುತ್ತಿದ್ದಂತೆಯೇ 2020 ನೇ ಸಾಲು ಮುಕ್ತಾಯಗೊಂಡು 2021 ರ ಆಗಮನಕ್ಕೂ ವೇದಿಕೆ ಸಜ್ಜುಗೊಂಡಿದ್ದು, ಬಜೆಟ್ ತಯಾರಿಯೂ ನಡೆದಿದೆ. 

ಬಜೆಟ್ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗಿನ ಸಂದರ್ಶನದಲ್ಲಿ ಈ ಬಾರಿಯ ಬಜೆಟ್ ನಲ್ಲಿ ತಮ್ಮ ಬೇಡಿಕೆ ಬಗ್ಗೆ ಮಾತನಾಡಿದ್ದು, ಯಡಿಯೂರಪ್ಪ ಅವರ 2021 ನೇ ಸಾಲಿನ ಬಜೆಟ್ ಮಂಡನೆ ಕ್ರಾಂತಿಕಾರಿಯಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿದ್ದಾರೆ. 

ಕೋವಿಡ್-19 ವೈದ್ಯಕೀಯ ಸಮುದಾಯವನ್ನು ಇನ್ನಿಲ್ಲದಂತೆ ಪರೀಕ್ಷೆಗೊಳಪಡಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಶೇ.4 ಕ್ಕಿಂತ ಏರಿಲ್ಲ. 2020-21 ರಲ್ಲಿ 10,296 ಕೋಟಿ ರೂಪಾಯಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕ್ಷೇತ್ರಕ್ಕೆ ನೀಡಲಾಗಿತ್ತು. ಈ ಬಾರಿ ಹೆಚ್ಚಿನ ಅನುದಾನ ಸಿಗಲಿದೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ರಕ್ಷಣೆ ಮಾನವಶಕ್ತಿ

ಕೋವಿಡ್-19 ಎರಡನೇ ಅಲೆ ಒಂದು ವೇಳೆ ಬಂದಿದ್ದೇ ಆದಲ್ಲಿ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನವ ಸಂಪನ್ಮೂಲವನ್ನು ಹೆಚ್ಚಿಸುವುದಾಗಿ ಸುಧಾಕರ್ ಹೇಳಿದ್ದಾರೆ. 

ಕಳೆದ 6 ತಿಂಗಳುಗಳಲ್ಲಿ, 1,000 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳನ್ನು ಕಡ್ಡಾಯ ಸರ್ಕಾರಿ ಆರೋಗ್ಯ ಸೇವೆಗಳಿಗೆ ನೋಂದಣಿ ಮಾಡಿಕೊಂಡಿದ್ದಾರೆ. 1,500 ಕ್ಕೂ ಹೆಚ್ಚು ಆರೋಗ್ಯ ರಕ್ಷಾ ಕಾರ್ಯಕರ್ತರು, 2,500 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ ನಿರ್ವಹಣೆಗೆ ಮಾನವ ಸಂಪನ್ಮೂಲದ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದ್ದಾರೆ. 

ಲಸಿಕೆ

ಕೋವಿಡ್-19 ಗೆ ಲಸಿಕೆ ನೀಡುವುದಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ, ಕೊರೋನಾ ಲಸಿಕೆಯನ್ನು ಸಂಗ್ರಹ ಮಾಡುವುದಕ್ಕೆ 30,000 ಫೆಸಿಲಿಟಿಗಳನ್ನು  ಗುರುತಿಸಲಾಗಿದೆ, ನಮಗೆ 205-30 ವಾಕ್ ಇನ್ ರೆಫ್ರಿಡ್ಜರೇಟರ್ ಗಳು ಹಾಗೂ ವಾಕ್-ಇನ್ ಫ್ರೀಜರ್ ಗಳ ಅಗತ್ಯವಿದೆ ಈಗ ನಮ್ಮ ಬಳಿ 10-12 ಇವೆ.  ಉಳಿದದ್ದನ್ನು ರಾಜ್ಯವೇ ವ್ಯವಸ್ಥೆ ಮಾಡಿಕೊಳ್ಳಲಿದೆ ಅಥವಾ ಕೇಂದ್ರ ಕಳಿಸಿಕೊಡಲಿದೆ.

ಲಸಿಕೆಯ ಪರಿಣಾಮಕಾರಿತ್ವ 

ಲಸಿಕೆ ಯಾವುದೇ ರೂಪಾಂತರಗೊಂಡ ವೈರಾಣು ವಿರುದ್ಧ ಹೋರಾಡುವುದಕ್ಕೂ ಉಪಯುಕ್ತವಾಗಲಿದೆ, ಇತ್ತೀಚಿನ ದಿನಗಳಲ್ಲಿ ಬ್ರಿಟನ್ ನಲ್ಲಿ ಕಂಡುಬಂದ ವೈರಾಣುವಿಗೂ ಇದು ಪರಿಣಾಮಕಾರಿಯಾಗಿರಲಿದೆ. ಎರಡು ಡೋಸ್ ಗಳ ಲಸಿಕೆಯನ್ನು ನೀಡಬೇಕಾಗುತ್ತದೆ. ಮೊದಲನೇ ಡೋಸ್ ಬಳಿಕ 21-28 ದಿನಗಳವರೆಗೆ ಬೂಸ್ಟರ್ ಡೋಸ್ ನ್ನು ನೀಡಬೇಕಾಗುತ್ತದೆ. ಸರ್ಕಾರ ಯಾರಿಗೂ ಲಸಿಕೆಯನ್ನು ನಿರಾಕರಿಸುವುದಿಲ್ಲ ಅಥವಾ ತೆಗೆದುಕೊಳ್ಳುವಂತೆ ಒತ್ತಾಯಿಸುವುದಿಲ್ಲ, ಲಸಿಕೆ ನೀಡುವುದಕ್ಕೆ ಶುಲ್ಕ ವಿಧಿಸಬೇಕೆ ಬೇಡವೇ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಸುಧಾಕರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com