ಇಂದು ಮಹತ್ವದ ಕ್ಯಾಬಿನೆಟ್ ಸಭೆ: ಗೋಹತ್ಯೆ ಮಸೂದೆ ಸೇರಿ ಹಲವು ವಿಷಯಕ್ಕೆ ಅನುಮೋದನೆ ನಿರೀಕ್ಷೆ

ಗೋಹತ್ಯೆ ನಿಷೇಧ ಮಸೂದೆ 2020 ಹಾಗೂ ಗೋ ಸಂರಕ್ಷಣೆ ಕುರಿತಂತೆ ಇಂದು ನಡೆಯುವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆಯಿದೆ.
ಇಂದು ಮಹತ್ವದ ಕ್ಯಾಬಿನೆಟ್ ಸಭೆ: ಗೋಹತ್ಯೆ ಮಸೂದೆ ಸೇರಿ ಹಲವು ವಿಷಯಕ್ಕೆ ಅನುಮೋದನೆ ನಿರೀಕ್ಷೆ

ಬೆಂಗಳೂರು: ಗೋಹತ್ಯೆ ನಿಷೇಧ ಮಸೂದೆ 2020 ಹಾಗೂ ಗೋ ಸಂರಕ್ಷಣೆ ಕುರಿತಂತೆ ಇಂದು ನಡೆಯುವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆಯಿದೆ. ಬೆಂಗಳುರು ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ಸಲುವಾಗಿ, ಜಪಾನ್ ಸರ್ಕಾರ ಅನುದಾನವನ್ನು ಬಳಸಿಕೊಂಡುಸುಧಾರಿತ ಸಂಚಾರ ಮಾಹಿತಿ ಮತ್ತು ನಿರ್ವಹಣಾ ವ್ಯವಸ್ಥೆ ಜಾರಿಗೆ ಸಹ ಸಂಪುಟ ಸಮ್ಮತಿಸಲಿದೆ ಎನ್ನಲಾಗಿದೆ.

ಪಟ್ಟಿಯಲ್ಲಿರುವ ಇತರ ಕಾರ್ಯಸೂಚಿಯಲ್ಲಿ 35 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವ ಹೊಚ್ಚ ಹೊಸ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗೆ ಅನುಮೋದನೆ ಮತ್ತು ಶಿಕ್ಷಣ ತಜ್ಞರ ಕಳವಳ ಹೆಚ್ಚಳಕ್ಕೆ ಕಾರಣವಾಹಿರುವ ಪ್ರಧಾನ ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ ವಿಳಂಬ ಸಹ ಇದೆ, ಅಲ್ಲದೆ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಸ್ಥಾಪನೆ ಕುರಿತ ಚರ್ಚೆ ಸಹ ನಡೆಯಲಿದೆ.

ಬೆಂಗಳೂರಿನ ಹೊರವಲಯದ ಹೊಸಕೋಟೆಯಲ್ಲಿ 38 ಟ್ಯಾಂಕ್‌ಗಳನ್ನು ತುಂಬಲು ಕೆ.ಆರ್.ಪುರಂ, ಮೇಡಹಳ್ಳಿ ಮತ್ತು ಕಡುಗೋಡಿ-ವೈಟ್‌ಫೀಲ್ಡ್ ಪ್ರದೇಶಗಳಿಂದ ದಿನಕ್ಕೆ 430 ಮಿಲಿಯನ್ ಲೀಟರ್ ಸಂಸ್ಕರಿಸಿದ ಒಳಚರಂಡಿ ನೀರನ್ನು ಪಂಪ್ ಮಾಡಲು 150 ಕೋಟಿ ರೂ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಲು ನಂದಿ ಬೆಟ್ಟಗಳು ಮತ್ತು ಕೆಮ್ಮಣ್ಣುಗುಂಡಿಗಳನ್ನು ಹಸಿರೀಕರಣಗೊಳಿಸಿ ಹೆಚ್ಚು ಸುಂದರವಾಗಿಸುವ ನಿರೀಕ್ಷೆ ಇದ್ದು ಇದಕ್ಕಾಗಿ ಹೆಚ್ಚಿನ ಮರಗಳನ್ನು ಬೆಳೆಸಲು ಬೆಟ್ಟಗಳನ್ನು ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಲಾಗುವುದು.

ಕರ್ನಾಟಕ ಖಾಸಗಿ ಭದ್ರತಾ ಸಂಸ್ಥೆಗಳ ನಿಯಮಗಳು 2020 ರ ಅಡಿಯಲ್ಲಿ ನಗದು ಸಾಗಣೆಗೆ ಸಂಬಂಧಿಸಿದ ಬಿಗಿಯಾದ ಕಾನೂನು ಜಾರಿ, ಅನೇಕ ಸೈಬರ್ ಅಪರಾಧಗಳ ನಂತರ, ರಾಜ್ಯದಾದ್ಯಂತ ಅತ್ಯಾಧುನಿಕ ಸೈಬರ್-ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪನೆಗೆ ಸಹ ಅನುಮೋದನೆಯ ನಿರೀಕ್ಷೆ ಮಾಡಲಾಗಿದೆ. ಸ್ಮಾರ್ಟ್ ಪೋಲಿಸಿಂಗ್ ಯೋಜನೆಯಡಿ. ವೈದ್ಯಕೀಯ ಸರಬರಾಜುಗಳ ಬಗ್ಗೆ ಹಲವಾರು ಗಂಭೀರ ಆರೋಪಗಳ ನಂತರ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಅಧ್ಯಕ್ಷರ ನೇಮಕ ವಿಷಯ ಮುನ್ನಲೆಗೆ ಬರಲಿದೆ ಎನ್ನಲಾಗಿದೆ.

ಇನ್ನು ಪರಿಷತ್ ಕಲಾಪ ಮುಂದೂಡುವಿಕೆಯನ್ನು ಚರ್ಚಿಸುವ ಸಾಧ್ಯತೆಯಿದೆ, ಸದನದಲ್ಲಿ ಅಸಭ್ಯವರ್ತನೆಗಳಿಗೆ ಕಾರಣವಾದ ಅಧ್ಯಕ್ಷ ಪ್ರಥಾಪಚಂದ್ರ ಶೆಟ್ಟಿ ಅವರ ಪರಿಷತ್ತಿನ ಅಕಾಲಿಕ ಮುಂದೂಡಿಕೆ ಕುರಿತು ರಾಜ್ಯ ಸಚಿವ ಸಂಪುಟ ಚರ್ಚಿಸುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com