ಶಿವಮೊಗ್ಗ: ಚಲಿಸುತ್ತಿದ್ದ ವಾಹನದಿಂದ ಬಿದ್ದ ಮಗುವನ್ನು ಮತ್ತೆ ಪೋಷಕರ ಮಡಿಲು ಸೇರಿಸಿದ ಪೋಲೀಸರು

ತೀರ್ಥಹಳ್ಳಿ ತಾಲೂಕಿನ ಅಗುಂಬೆ ಘಾಟ್ ಮೂಲಕ ಪ್ರಯಾಣಿಸುತ್ತಿದ್ದಾಗ ಚಲಿಸುತ್ತಿದ್ದ ವಾಹನದಿಂದ ಆಕಸ್ಮಿಕವಾಗಿ ಬಿದ್ದು ತಾಯಿಯಿಂದ ಬೇರ್ಪಟ್ಟಿದ್ದ ಎರಡೂವರೆ ವರ್ಷದ ಬಾಲಕಿ ಕೆಲವೇ ಗಂಟೆಗಳಲ್ಲಿ ಮತ್ತೆ ಹೆತ್ತವರನ್ನು ಸೇರಿದ ಘಟನೆ ಗುರುವಾರ ನಡೆದಿದೆ. ಪೋಲೀಸರ ಸಹಕಾರದಿಂದ ಈ ಬಾಲಕಿ ಹೆತ್ತವರ ಮಡಿಲನ್ನು ಸೇರಿದ್ದು ಬಾಲಕಿಯ ಪೋಷಕರು ಪೋಲೀಸರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಶಿವಮೊಗ್ಗ: ಚಲಿಸುತ್ತಿದ್ದ ವಾಹನದಿಂದ ಬಿದ್ದ ಮಗುವನ್ನು ಮತ್ತೆ ಪೋಷಕರ ಮಡಿಲು ಸೇರಿಸಿದ ಪೋಲೀಸರು

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಅಗುಂಬೆ ಘಾಟ್ ಮೂಲಕ ಪ್ರಯಾಣಿಸುತ್ತಿದ್ದಾಗ ಚಲಿಸುತ್ತಿದ್ದ ವಾಹನದಿಂದ ಆಕಸ್ಮಿಕವಾಗಿ ಬಿದ್ದು ತಾಯಿಯಿಂದ ಬೇರ್ಪಟ್ಟಿದ್ದ ಎರಡೂವರೆ ವರ್ಷದ ಬಾಲಕಿ ಕೆಲವೇ ಗಂಟೆಗಳಲ್ಲಿ ಮತ್ತೆ ಹೆತ್ತವರನ್ನು ಸೇರಿದ ಘಟನೆ ಗುರುವಾರ ನಡೆದಿದೆ. ಪೋಲೀಸರ ಸಹಕಾರದಿಂದ ಈ ಬಾಲಕಿ ಹೆತ್ತವರ ಮಡಿಲನ್ನು ಸೇರಿದ್ದು ಬಾಲಕಿಯ ಪೋಷಕರು ಪೋಲೀಸರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

ರಾತ್ರಿ 8.30 ರ ಸುಮಾರಿಗೆ ಅಗುಂಬೆ ಘಾಟ್‌ನ ಎಂಟನೇ ಕ್ರಾಸ್ ಬಳಿ ಈ ಘಟನೆ ನಡೆದಿದೆ.ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಮೂಲದ ಬಾಲಕಿ ತನ್ನ ಪೋಷಕರೊಡನೆ  ಪ್ರಯಾಣಿಸುತ್ತಿದ್ದ ವೇಳೆ ಬಾಲಕಿ ವಾಹನದಿಂದ ಬಿದ್ದಿದ್ದಳು. "ಚಲಿಸುತ್ತಿದ್ದ ವ್ಯಾನ್ ಬಾಗಿ;ಲು ಸರಿಯಾಗಿ ಹಾಕಿರಲಿಲ್ಲ. ಆಗ ವಾಹನ ಚಲಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬಾಗಿಲು ತೆರೆದುಕೊಂಡಿದೆ, ಆ ವೇಳೆ ಮಗುವಿನ ಕುಟುಂಬ ನಿದ್ರಿಸುತ್ತಿತ್ತು. ಬಾಲಕಿ ವಾಹನದಿಂದ ಹೇಗೆ ಬಿದ್ದಳು ಎಂಬುದು ಸ್ಪಷ್ಟವಾಗಿಲ್ಲ. ವಾಹನದ ಚಾಲಕ ಅವಳು ಹೊರಗೆ ಬೀಳುವುದನ್ನು ಗಮನಿಸಿಲ್ಲ. ವ್ಯಾನ್ ಮುಂದೆ ಹೋದ ಬಳಿಕ ಬಾಲಕಿ ರಸ್ತೆಯಲ್ಲಿ ಒಬ್ಬಳೇ ಅಳುತ್ತಿದ್ದಳು."ಗುಂಬೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಾರ್ವತಿ ಪತ್ರಿಕೆಗೆ ಹೇಳಿದ್ದಾರೆ.

ಕುಟುಂಬ ಕೇರಳದಿಂದ ತಮ್ಮ ಊರಿಗೆ ವಾಪಾಸಾಗುತ್ತಿತ್ತು. "ಇನ್ನೊಂದೆಡೆ ಉಡುಪಿಯಿಂದ ವಕೀಲರಾದ ನವೀನ್ ತನ್ನ ಕಾರಿನಲ್ಲಿ ಬರುತ್ತಿದ್ದವರು ಬಾಲಕಿಯನ್ನು ಗಮನಿಸಿದ್ದಾರೆ. ಅವರು ಆಕೆಯನ್ನು  ಅಗುಂಬೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.. ಸ್ವಲ್ಪ ದೂರ ಪ್ರಯಾಣಿಸಿದ ನಂತರ ಬಾಲಕಿ ವಾಹನದೊಳಗಿಲ್ಲ ಎಂಬುದನ್ನು ಪೋಷಕರು ಗಮನಿಸಿದ್ದಾರೆ.ಆಘಾತಕ್ಕೊಳಗಾದ ಪೋಷಕರು ಹಿಂದಕ್ಕೆ ಧಾವಿಸಿದ್ದಾರೆ. ಘಾಟ್ ಪ್ರದೇಶ ಮತ್ತು ಚೆಕ್ ಪೋಸ್ಟ್ ಸಿಬ್ಬಂದಿಯೊಂದಿಗೆ ವಿಚಾರಿಸಿದ್ದಾರೆ.. ಮಗು ಪೊಲೀಸರ ಸುರಕ್ಷಿತ ಕೈಯಲ್ಲಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು "

"ಪೋಷಕರು ಪೋಲೀಸ್ ಠಾಣೆಗೆ ಆಗಮಿಸಿದಾಗ ನಾವು ಅವರಿಗೆ ಮಗುವನ್ನು ಹಸ್ತಾಂತರಿಸಿದ್ದೇವೆ. ಬಾಲಕಿಯನ್ನು ಹಸ್ತಾಂತರಿಸುವ ಮೊದಲು ನಾವು ಅವಳ ತಂದೆ ಬಿನು ವರ್ಗೀಸ್ ಅವರಿಂದ ಹೇಳಿಕೆಯನ್ನು ತೆಗೆದುಕೊಂಡಿದ್ದೇವೆ," ಪೋಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com