ಪ್ರತಿಭಟನೆ ಇರಲಿ, ಹಿಂಸಾಚಾರ ಬೇಡ -ವೆಂಕಯ್ಯ ನಾಯ್ಡು

ಭಾರತ  ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುವ ಎಲ್ಲಾ ಅವಕಾಶಗಳಿದ್ದು, ಇಂದಹ ದೇಶದಲ್ಲಿ ವಿರೋಧಿಸುವ ನೆಪದಲ್ಲಿ ಯಾರೂ ಹಿಂಸಾತ್ಮಕ ಕೃತ್ಯಗಳಿಗೆ ಇಳಿಯಬಾರದು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕಿವಿ ಮಾತು ಹೇಳಿದ್ದಾರೆ
ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು
ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು

ಹುಬ್ಬಳ್ಳಿ: ಭಾರತ  ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುವ ಎಲ್ಲಾ ಅವಕಾಶಗಳಿದ್ದು, ಇಂದಹ ದೇಶದಲ್ಲಿ ವಿರೋಧಿಸುವ ನೆಪದಲ್ಲಿ ಯಾರೂ ಹಿಂಸಾತ್ಮಕ ಕೃತ್ಯಗಳಿಗೆ ಇಳಿಯಬಾರದು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕಿವಿ ಮಾತು ಹೇಳಿದ್ದಾರೆ

ನಗರದಲ್ಲಿಂದು ದೇಶಪಾಂಡೆ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಏಕ ಕಾಲಕ್ಕೆ 1500 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಸೌಲಭ್ಯದೊಂದಿಗೆ ಔದ್ಯೋಗಿಕ ತರಬೇತಿ ನೀಡುವ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ದೇಶವೆಂದರೆ ಕೇವಲ ನರೇಂದ್ರ ಮೋದಿ, ರಾಜ್ಯವೆಂದರೆ ಕೇವಲ ಯಡಿಯೂರಪ್ಪ ಅಲ್ಲ. ಯಾವುದೇ ಸರ್ಕಾರವಾದರೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ವಿರೋಧವಿರಲಿ, ಹೋರಾಟಗಳಿರಲಿ. ಆದರೆ ಹಿಂಸೆ ಬೇಡ ಎಂದರು. 

ಶಿಕ್ಷಣ ಕೇವಲ ಪದವಿ ಪಡೆಯಲು, ಉದ್ಯೋಗಕ್ಕೆ ಸೇರಲು ಅಲ್ಲ. ಶಿಕ್ಷಣದಿಂದ ಜ್ಞಾನಾಭಿವೃದ್ಧಿಯಾಗಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ವಿಷಯಗಳನ್ನು ಅಳವಡಿಸಬೇಕು. ಬ್ರಿಟಿಷ್ ಪ್ರಭಾವಿತ ಇತಿಹಾಸವನ್ನು ನಾವು ಕಲಿಯುತ್ತಿದ್ದೇವೆ. ಬ್ರಿಟೀಷರು ನಮ್ಮನ್ನು ಆಳಿ ಮೋಸ ಮಾಡಿದರು. ಇಂಗ್ಲೀಷ್ ಕಲಿಯಿರಿ. ಆದರೆ ಇಂಗ್ಲೀಷರಂತೆ ವರ್ತಿಸಬೇಡಿ. ಯಾವುದೇ ದೇಶದಲ್ಲಿ ಕೆಲಸ ಮಾಡಿ, ಆದರೆ ಮಾತೃಭೂಮಿಯ ಬಗ್ಗೆ ಗೌರವ ಬೆಳೆಸಿಕೊಳ್ಳಿ ಎಂದು ಹೇಳಿದರು. 

ನಂತರ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದ ಎಂ. ವೆಂಕಯ್ಯ ನಾಯ್ಡು, 21 ನೇ ಶತಮಾನದಲ್ಲಿ ಯುವ ಜನಾಂಗದಲ್ಲಿ ಕೌಶಲ್ಯಾಭಿವೃದ್ಧಿ ಪಡಿಸುವಲ್ಲಿ ಖಾಸಗಿ ವಲಯದ ಪಾತ್ರ ಮಹತ್ವದ್ದಾಗಿದೆ ಎಂದರು. ಬಳಿಕ ಮಹಾದಾಯಿ ವಿವಾದ ಬಗ್ಗೆ  ರೈತ ನಿಯೋಗದೊಂದಿಗೆ ಮಾತುಕತೆ ನಡೆಸಿದ ಬಳಿಕ ಹುಬ್ಬಳ್ಳಿ- ಧಾರವಾಡ ಕ್ಷಿಪ್ರ ಬಸ್ ಸೇವೆ- ಬಿಆರ್ ಟಿ ಯೋಜನೆಗೆ ಚಾಲನೆ ನೀಡಿದರು.

ಹುಬ್ಬಳ್ಳಿಯಿಂದ ಧಾರವಾಡದವರೆಗೂ ಬಸ್ ನಲ್ಲಿಯೇ ತೆರಳಿದ ಎಂ. ವೆಂಕಯ್ಯ ನಾಯ್ಡು , ದೇಶವಾಸಿಗಳು ಪ್ರಯಾಣಕ್ಕಾಗಿ ಸಾರ್ವಜನಿಕ ಬಸ್ ಗಳನ್ನು ಬಳಸುವಂತೆ ಕರೆ ನೀಡಿದರು.ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಸಚಿವರಾದ ಪ್ರಹ್ಲಾದ್ ಜೋಷಿ, ಲಕ್ಷ್ಮಣ್ ಸವದಿ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com