ದಾವಣಗೆರೆ: ವೆಂಟಿಲೇಟರ್ ಬೇಕೆಂದರೂ ನೀಡದ ವೈದ್ಯ ಸಿಬ್ಬಂದಿ, ಗರ್ಭಿಣಿ ಮಹಿಳೆ ಸಾವು

ವೈದ್ಯರ ನಿರ್ಲಕ್ಷದ ಕಾರಣ ಗರ್ಭಿಣಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ವರದಿಯಾಗಿದೆ..
 

Published: 04th February 2020 03:39 PM  |   Last Updated: 04th February 2020 03:39 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ದಾವಣಗೆರೆ: ವೈದ್ಯರ ನಿರ್ಲಕ್ಷದ ಕಾರಣ ಗರ್ಭಿಣಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ವರದಿಯಾಗಿದೆ..

ಮೃತಳನ್ನು  ಚಿತ್ರದುರ್ಗ ಜಿಲ್ಲೆಯ ಹುಲ್ಲೂರು ಗ್ರಾಮದ ಭವಾನಿ (24) ಎಂದು ಗುರುತಿಸಲಾಗಿದೆ. ಸಂಬಂಧಿಕರು ಹೇಳಿದಂತೆ  ವೆಂಟಿಲೇಟರ್ ಲಭ್ಯವಿಲ್ಲದಿರುವುದು ಈ ದುರಂತಕ್ಕೆ ಮುಖ್ಯ ಕಾರಣವಾಗಿದೆ."ರೋಗಿಗೆ ವೆಂಟಿಲೇಟರ್ ಅಗತ್ಯವಿದ್ದರೂ, ವೈದ್ಯಕೀಯ ಸಿಬ್ಬಂದಿ ಒದಗಿಸಲಿಲ್ಲ ಮತ್ತು ವೈದ್ಯರು ನಿರ್ಲಕ್ಷ ವಹಿಸಿದ್ದರು. ಎಂದು ಅವರು ಆರೋಪಿಸಿದರು.

ಮೃತರ ಸಂಬಂಧಿಕರು ಆಸ್ಪತ್ರೆಯ ಮುಂದೆ ತಮ್ಮ ದುಃಖ ಹಾಗೂ ಆಕ್ರೋಶವನ್ನು ಪ್ರದರ್ಶಿಸಿದ್ದಾರೆ. ಆದಾಗ್ಯೂ, ಪೊಲೀಸರು ಸ್ಥಳಕ್ಕೆ ಆಗಮಿಸಿ ಉದ್ವಿಗ್ನ ಸ್ಥಿತಿಯನ್ನು ವಾರಿಸುವಲ್ಲಿ ಯಶಸ್ವಿಯಾದರು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp