ಸಿಇಟಿ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: ನೀವು ತಿಳಿದಿರಬೇಕಾದ ಮಹತ್ವದ ವಿವರ ಇಲ್ಲಿದೆ

ಕರ್ನಾಟಕದ ಪಿಯು ವಿದ್ಯಾರ್ಥಿಗಳಿಗೆ ನಡೆಯುವ  ಸಾಮಾನ್ಯ ಪ್ರವೇಶ ಪ ರೀಕ್ಷೆ (ಸಿಇಟಿ) 2020 ರ ಆನ್‌ಲೈನ್ ಅರ್ಜಿಯನ್ನು ಫೆಬ್ರವರಿ 5 ರಂದು ಬೆಳಿಗ್ಗೆ 11 ರಿಂದ  ಸಲ್ಲಿಕೆ ಮಾಡಬಹುದಾಗಿದ್ದು ಇದಕ್ಕಾಗಿ  3 ರಂದು ಸಂಜೆ 5:30 ರವರೆಗೆ ಕಾಲಾವಕಾಶವಿರಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತಪ್ರಕಟಣೆ ಈ ಮಾಹಿತಿ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕದ ಪಿಯು ವಿದ್ಯಾರ್ಥಿಗಳಿಗೆ ನಡೆಯುವ  ಸಾಮಾನ್ಯ ಪ್ರವೇಶ ಪ ರೀಕ್ಷೆ (ಸಿಇಟಿ) 2020 ರ ಆನ್‌ಲೈನ್ ಅರ್ಜಿಯನ್ನು ಫೆಬ್ರವರಿ 5 ರಂದು ಬೆಳಿಗ್ಗೆ 11 ರಿಂದ  ಸಲ್ಲಿಕೆ ಮಾಡಬಹುದಾಗಿದ್ದು ಇದಕ್ಕಾಗಿ  3 ರಂದು ಸಂಜೆ 5:30 ರವರೆಗೆ ಕಾಲಾವಕಾಶವಿರಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತಪ್ರಕಟಣೆ ಈ ಮಾಹಿತಿ ತಿಳಿಸಿದೆ.

ಅರ್ಜಿದಾರರು ತಮ್ಮ ಆನ್‌ಲೈನ್ ಶುಲ್ಕವನ್ನು ಮಾರ್ಚ್ 6 ರೊಳಗೆ ಪಾವತಿಸಬೇಕು. ತಮ್ಮ ಶುಲ್ಕವನ್ನು ಪಾವತಿಸಿದ ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಯಲ್ಲಿ ಏನಾದರೂ ತಿದ್ದುಪಡಿಗಳಿದ್ದಲ್ಲಿ ಮಾರ್ಚ್ 19 ರಂದು ಬೆಳಿಗ್ಗೆ 11 ರಿಂದ ಮಾರ್ಚ್ 25 ರಂದು ಸಂಜೆ 5:30 ರವರೆಗೆ ಮಾಡಬಹುದಾಗಿದೆ.

ಏಪ್ರಿಲ್ 10 ರಂದು ಬೆಳಿಗ್ಗೆ 11 ಗಂಟೆಯಿಂದ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ(ಹಾಲ್ ಟಿಕೆಟ್) ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸಿಇಟಿ ಪರೀಕ್ಷೆಗಳು ಏಪ್ರಿಲ್ 22 ರಿಂದ 24 ರವರೆಗೆ ನಡೆಯಲಿದೆ.

ಏಪ್ರಿಲ್ 22 ರಂದು ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆಗಳು ಕ್ರಮವಾಗಿ ಬೆಳಿಗ್ಗೆ 10:30 ಮತ್ತು ಮಧ್ಯಾಹ್ನ 2: 30 ಕ್ಕೆ ನಡೆಯಲಿದೆ. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಯು ಏಪ್ರಿಲ್ 23 ರಂದು ಕ್ರಮವಾಗಿ ಬೆಳಿಗ್ಗೆ 10:30 ಮತ್ತು ಮಧ್ಯಾಹ್ನ 2: 30 ಕ್ಕೆ ನಡೆಯಲಿದೆ ಎಲ್ಲಾ ನಾಲ್ಕು ಕೋರ್ ವಿಷಯಗಳು ತಲಾ 60 ಅಂಕಗಳನ್ನು ಹೊಂದಿರುತ್ತವೆ ಮತ್ತು ಪ್ರತಿ ಪೇಪರ್ ಗೆ 80 ನಿಮಿಷಗಳ ಕಾಲಾವಕಾಶವಿದೆ.

ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ  60 ನಿಮಿಷಗಳ ಅವಧಿಯ ಕನ್ನಡ ಭಾಷಾ ಪರೀಕ್ಷೆ ಏಪ್ರಿಲ್ 24 ರಂದು ಬೆಳಿಗ್ಗೆ 11: 30 ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ. .

ಅಗ್ರಿಕಲ್ಚರಿಸ್ಟ್ ಕೋಟಾ ಅಡಿಯಲ್ಲಿರುವ ಅರ್ಜಿದಾರರು ತಮ್ಮ ದಾಖಲೆಗಳನ್ನು ಆಯಾ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿ ಮೇ 11 ರಿಂದ 14 ರವರೆಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3: 30 ರ ನಡುವೆ ಪರಿಶೀಲಿಸಬೇಕು (ಸಾಮಾನ್ಯ ರಜಾದಿನಗಳನ್ನು ಹೊರತುಪಡಿಸಿ). ಅವರ ಪ್ರಾಯೋಗಿಕ ಪರೀಕ್ಷೆಯು ಮೇ 16 ರಂದು ಬೆಳಿಗ್ಗೆ 9 ರಿಂದ ನಡೆಯಲಿದೆ.

ಪರೀಕ್ಷೆಯ ಫಲಿತಾಂಶಗಳು ಅರ್ಹತೆಯ ಆಧಾರದಲ್ಲಿರಲಿದ್ದು ಎಂಜಿನಿಯರಿಂಗ್, ತಂತ್ರಜ್ಞಾನ, ಪ್ರಕೃತಿಚಿಕಿತ್ಸೆ ಮತ್ತು ಯೋಗ, ಬಿ.ಫಾರ್ಮಾ, 2 ನೇ ವರ್ಷದ ಬಿ.ಫಾರ್ಮಾ, ಫಾರ್ಮಾ-ಡಿ, ಕೃಷಿ ಶಿಕ್ಷಣ (ಕೃಷಿ ವಿಜ್ಞಾನ) ಮತ್ತು ಪಶುವೈದ್ಯಕೀಯ ಕೋರ್ಸ್‌ಗಳಿಗೆ ಸೇರಲಿಚ್ಚಿಸುವವರು ಈ ಪರೀಕ್ಷೆಗಳನ್ನು ತೆಗೆದುಕೊಳ್ಲಬೇಕು.

2020-21ರ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕದ ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನ್-ಏಡೆಡ್ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳು ಇರಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com