ಅತ್ಯಾಚಾರ ಪ್ರಕರಣ: ನಿತ್ಯಾನಂದ ಜಾಮೀನು ರದ್ದುಗೊಳಿಸಿದ ಹೈಕೋರ್ಟ್​

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿಗೆ ನೀಡಲಾಗಿದ್ದ ಜಾಮೀನನನ್ನು ಕರ್ನಾಟಕ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.
ನಿತ್ಯಾನಂದ ಸ್ವಾಮಿ
ನಿತ್ಯಾನಂದ ಸ್ವಾಮಿ

ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿಗೆ ನೀಡಲಾಗಿದ್ದ ಜಾಮೀನನನ್ನು ಕರ್ನಾಟಕ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

ಅತ್ಯಾಚಾರ ಆರೋಪಿ ನಿತ್ಯಾನಂದ ಸ್ವಾಮೀಜಿಗೆ 2010ರಲ್ಲಿ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ಪೀಠ ಇಂದು  ತೀರ್ಪು ಪ್ರಕಟಿಸಿದೆ.

ಕಳೆದ ಸೋಮವಾರ "ಅತ್ಯಾಚಾರ ಆರೋಪವೊತ್ತ ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಆತನ ಪಾಸ್‌ಪೋರ್ಟ್‌ ಅವಧಿ ಮುಗಿದಿದೆ. ಹೀಗಿದ್ದರೂ ವಿದೇಶ ಪ್ರವಾಸ ಕೈಗೊಂಡಿದ್ದಾನೆ. 2ನೇ ಆರೋಪಿಯೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ನಿತ್ಯಾನಂದನ ಜಾಮೀನು ರದ್ದುಪಡಿಸಬೇಕು" ಎಂದು ಲೆನಿನ್‌ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಇದೀಗ ಲೆನಿನ್​​​ ಪರ ವಕೀಲರ ಮನವಿ ಎತ್ತಿಹಿಡಿದ ಹೈಕೋರ್ಟ್​ ಏಕಸದಸ್ಯ ಪೀಠ​, ನಿತ್ಯಾನಂದ ಜಾಮೀನು ರದ್ದುಗೊಳಿಸಿದೆ. ಅಲ್ಲದೆ ಆರೋಪಿ ನಿತ್ಯಾನಂದನನ್ನು ವಶಕ್ಕೆ ಪಡೆಯುವಂತೆ ವಿಚಾರಣಾ ಕೋರ್ಟ್ ಗೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com