ಹೊಸಪೇಟೆಯಲ್ಲಿ ಆಡಿ ಕಾರು ಭೀಕರ ಅಪಘಾತ, ಪಾದಚಾರಿ ಸೇರಿ ಇಬ್ಬರ ದುರ್ಮರಣ!

ಚಾಲಕನ ನಿಯಂತ್ರಣ ತಪ್ಪಿ ಆಡಿ ಕಾರು ರಸ್ತೆ ಬದಿಗೆ ಉರುಳಿದ್ದ ಪರಿಣಾಮ ಕಾರಿನಲ್ಲಿದ್ದ ಓರ್ವ ಹಾಗೂ ರಸ್ತೆ ಬದಿ ನಿಂತಿದ್ದ ಮತ್ತೋರ್ವ ಪಾದಚಾರಿ ಮೃತಪಟ್ಟಿರುವ ದಾರುಣ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

Published: 10th February 2020 07:48 PM  |   Last Updated: 10th February 2020 07:48 PM   |  A+A-


Accident Photo

ಅಪಘಾತದ ಚಿತ್ರ

Posted By : vishwanath
Source : RC Network

ಹೊಸಪೇಟೆ: ಚಾಲಕನ ನಿಯಂತ್ರಣ ತಪ್ಪಿ ಆಡಿ ಕಾರು ರಸ್ತೆ ಬದಿಗೆ ಉರುಳಿದ್ದ ಪರಿಣಾಮ ಕಾರಿನಲ್ಲಿದ್ದ ಓರ್ವ ಹಾಗೂ ರಸ್ತೆ ಬದಿ ನಿಂತಿದ್ದ ಮತ್ತೋರ್ವ ಪಾದಚಾರಿ ಮೃತಪಟ್ಟಿರುವ ದಾರುಣ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಬೆಂಗಳೂರು ಮೂಲದ 27 ವರ್ಷದ ಸಚಿನ್ ಹಾಗೂ ಪಾದಚಾರಿ 18 ವರ್ಷದ ರವಿನಾಯ್ಕ್ ಸಾವಿಗೀಡಾದ ದುರ್ದೈವಿಗಳು. ಇನ್ನು ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಆಡಿ ಕಾರಿನಲ್ಲಿ ಹಂಪಿಯ ಪ್ರವಾಸಕ್ಕೆಂದು ಬೆಂಗಳೂರಿನಿಂದ ಐವರು ತೆರಳಿದ್ದರು. ಪ್ರವಾಸ ಮುಗಿಸಿ ಮರಳುವಾಗ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿಯ ರಾಷ್ಷ್ರೀಯ ಹೆದ್ದಾರಿ 50ರಲ್ಲಿ ಅಪಘಾತ ಸಂಭವಿಸಿದೆ.

ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸೀಲನೆ ನಡೆಸಿದರು.

Stay up to date on all the latest ರಾಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp