ಬೀದರ್ ಶಾಲೆಯಲ್ಲಿ ಸಿಎಎ ವಿರೋಧಿ ನಾಟಕ ಪ್ರದರ್ಶನ: ಬಂಧಿತರ ಜಾಮೀನು ಆದೇಶ  ಫೆಬ್ರವರಿ 14ಕ್ಕೆ ಮುಂದೂಡಿಕೆ

ಬೀದರ್ ನ ಶಾಹೀನ್ ಉರ್ದು ಪ್ರಾಥಮಿಕ ಶಾಲೆಯಲ್ಲಿ ಪ್ರದರ್ಶಿಸಲಾದ ಸಿಎಎ ವಿರೋಧಿ ನಾಟಕಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಆರೋಪ ಎದುರಿಸುತ್ತಿರುವ ಏಳು ಜನರ ಭವಿಷ್ಯವು ಇನ್ನೂ ಡೋಲಾಯಮಾನವಾಗಿದೆ. ಅದರಲ್ಲಿ ಶಾಲಾ ಮುಖ್ಯೋಪಾಧ್ಯಾಯ ಹಾಗೂ ವಿದ್ಯಾರ್ಥಿನಿಯ ತಾಯಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.  ಶಾಲಾ ನಿರ್ವಹಣಾ ಮಂಡಳಿಯಲ್ಲಿರುವ ಇತರ ಐವರು ಜಾಮೀನು ಕೋರಿ ಅರ್ಜಿ ಸಲ್ಲಿ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀದರ್: ಬೀದರ್ ನ ಶಾಹೀನ್ ಉರ್ದು ಪ್ರಾಥಮಿಕ ಶಾಲೆಯಲ್ಲಿ ಪ್ರದರ್ಶಿಸಲಾದ ಸಿಎಎ ವಿರೋಧಿ ನಾಟಕಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಆರೋಪ ಎದುರಿಸುತ್ತಿರುವ ಏಳು ಜನರ ಭವಿಷ್ಯವು ಇನ್ನೂ ಡೋಲಾಯಮಾನವಾಗಿದೆ. ಅದರಲ್ಲಿ ಶಾಲಾ ಮುಖ್ಯೋಪಾಧ್ಯಾಯ ಹಾಗೂ ವಿದ್ಯಾರ್ಥಿನಿಯ ತಾಯಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.  ಶಾಲಾ ನಿರ್ವಹಣಾ ಮಂಡಳಿಯಲ್ಲಿರುವ ಇತರ ಐವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತರಾದ ಇಬ್ಬರ ಜಾಮೀನು ಅರ್ಜಿಯನ್ನಾಲಿಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮನುಗಲಿಲಿ ಪ್ರೇಮಾವತಿ ಫೆಬ್ರವರಿ 14ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದಾರೆ. ಅಲ್ಲದೆ ಇನ್ನುಳಿದ ಐವರ ಜಾಮೀನು ವಿಚಾರಣೆಯನ್ನು ನ್ಯಾಯಾಲಯವು ಫೆಬ್ರವರಿ 17 ಕ್ಕೆ ಮುಂದೂಡಿದೆ.

ಶಾಲಾ ಮುಖ್ಯೋಪಾದ್ಯಾಯಫರೀದಾ ಬೇಗಂ ಮತ್ತು ಅದೇ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ಹುಡುಗಿಯ ತಾಯಿ ನಜ್ಬುನ್ನಿಸಾ ಈ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.

ಜನವರಿ 21 ರಂದು ನಡೆದ ಶಾಲಾ ವಾರ್ಷಿಕೋತ್ಸವದಂದು  ವಿದ್ಯಾರ್ಥಿನಿವಿವಾದಾತ್ಮಕ ನಾಟಕದಲ್ಲಿ ಭಾಗವಹಿಸಿದ್ದಾಳೆ. ಶಾಹೀನ್ ಶಾಲೆಯ  ಅಧ್ಯಕ್ಷ ಅಬುದ್ಲ್ ಖಾದರ್ ಮತ್ತು ನಿರ್ವಹಣಾ ಸಮಿತಿ ಸದಸ್ಯರಾದ ಅಲ್ಲಾವುದ್ದೀನ್, ಎಂಡಿ ಬಿಲಾಲ್ ಇನಾಮ್ದಾರ್, ಯೂಸುಫ್ ರಹೀಮ್ ಮತ್ತು ಎಂಡಿ ಮೆಹತಾಬ್ ಪ್ರಕರಣದ ಇತರೆ ಆರೋಪಿಗಳಾಗಿದ್ದಾರೆ.

ಬೆಂಗಳೂರಿನ ಬಿ ಟಿ ವೆಂಕಟೇಶ್ ನೇತೃತ್ವದ ನಾಲ್ಕು ವಕೀಲರ ಸಮಿತಿಯು ಆರೋಪಿಗಳ ಪರವಾಗಿ ವಾದ ಮಂಡಿಸಿದೆ.  ವಕೀಲರಾದ ಪ್ರಸನ್ನ ಮತ್ತು ಕೇಶವ್ ಶಿರಿಮಲೆ ಮತ್ತು ಬೀದರ್ ನಾರಾಯಣ್ ಗಣೇಶ್  ವಕೀಲರ ತಂಡದ ಸದಸ್ಯರಾಗಿದ್ದಾರೆ.  ಪ್ರಾಸಿಕ್ಯೂಟರ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಾಲಾಭೀಮ್ ಮದನ್ಸೂರ್ ವಾದ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com