ಚಿಂಚಲಿ ಮಾಯಾಕ್ಕಾ ದೇವಿ ಜಾತ್ರೆ: ಮಹಾನೈವೈದೈ ದಿನ ಹರಿದು ಬಂದ ಭಕ್ತ ಸಾಗರ

ಉತ್ತರ ಕರ್ನಾಟಕ ಹಾಗೂ ಪೂರ್ವ ಮಹಾರಾಷ್ಟ್ರ ಭಾಗಗಳ ಆರಾಧ್ಯ ದೈವ ಚಿಂಚಲಿಯ ಮಾಯಕ್ಕಾದೇವಿ ಜಾತ್ರೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಸಿಂಗಾರಗೊಂಡಿದೆ. 
ಚಿಂಚಲಿಯ ಮಾಯಕ್ಕಾದೇವಿ ಜಾತ್ರೆ
ಚಿಂಚಲಿಯ ಮಾಯಕ್ಕಾದೇವಿ ಜಾತ್ರೆ

ರಾಯಬಾಗ: ಉತ್ತರ ಕರ್ನಾಟಕ ಹಾಗೂ ಪೂರ್ವ ಮಹಾರಾಷ್ಟ್ರ ಭಾಗಗಳ ಆರಾಧ್ಯ ದೈವ ಚಿಂಚಲಿಯ ಮಾಯಕ್ಕಾದೇವಿ ಜಾತ್ರೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಸಿಂಗಾರಗೊಂಡಿದೆ. 

ಒಂದು ತಿಂಗಳ ಕಾಲ ನಡೆಯೋ ಈ ಜಾತ್ರೆಯು ಮುತೈದೆ ಹುಣ್ಣಿಮೆ ಬಡವರ ಭಾರತ ಹುಣ್ಣಿಮೆ ಎಂದು ಹೇಳಲಾಗೋ ಈ ಹುಣ್ಣಿಮೆಯಿಂದ ಬರುವ ಹುಣ್ಣಿಮೆವರೆಗೆ ನಡೆಯೋ ಈ ಜಾತ್ರೆಗೆ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಮಹಾ ನೈವೈದೈ ದಿನ ಆಗಮಿಸಿ ದೇವಿಯ ದರ್ಶನ ಪಡೆದುಕೊಂಡರು. 

ದಕ್ಷಿಣ ಭಾರತದ ಜಾಗೃತ ದೇವಿ ಶ್ರೀ ಮಾಯಾಕ್ಕಾ ದೇವಿಯ ಭಕ್ತರು ಕೃಷ್ಣಾ ನದಿಯಲ್ಲಿ ಸ್ನಾನವನ್ನು ಮಾಡಿ ಅಲ್ಲಿದ ನೀರನ್ನು ತಂದು, ದೇವಿಯ ಶಕ್ತಿಯ ಮಹ್ವತದ ಬಗ್ಗೆ ಹಾಡುತ್ತಾ ನೈವೈದೈ ತಯಾರಿಸುತ್ತಾರೆ. ಕಪ್ಪು ಬಟ್ಟೆಯನ್ನು ಧರಿಸಿ ದೇವಿಯ ದರ್ಶನಕ್ಕೆ ತಂಡ ತಂಡವಾಗಿ ಕುಣಿಯುತ, ವಾದ್ಯಗಳು ಹಾಗೂ ಡೋಳ್ಳು ಬಾರಿಸುತ್ತ ಆಗಮಿಸಿ ದೇವಿಗೆ ನೈವೈದೈ ಅರ್ಪಿಸುತ್ತಾರೆ.

ಈ ಜಾತ್ರೆಯ ಸಮಯದಲ್ಲಿ ದೂರದ ಊರಿನಿಂದ ಬಂದ ಭಕ್ತರಿಗೆ ಪಟ್ಟಣದ ಸಾರ್ವಜನಿಕರು ಪ್ರೀತಿಯಿಂದ ಪ್ರತಿಯೊಂದು ಮನೆಯಲ್ಲಿ ಮಾಯಾಕ್ಕಾ ದೇವಿಯ ಭಕ್ತರನ್ನು ಬರಮಾಡಿಕೊಳ್ಳುತ್ತಾರೆ. ಜಾತ್ರೆಯ ವೇಳೆಯಲ್ಲಿ ಪಟ್ಟಣದ ಆಕಾರವೇ ಬದಲಾಗೂತ್ತದೆ. ದೇವಿ ಮಾಯಾಕ್ಕಾನನ್ನು ಮಾಕುಬಾಯಿ, ಮಾಯಾಕ್ಕಾ, ಮಾಯಮ್ಮಾ, ಮಹಾಕಾಲಿ, ಪಾರ್ವತಿ ಅವತಾರ ಎಂದು ಹೀಗೆ ಅನೇಕ ಹೆಸರುಗಳಿಂದ ಭಕ್ತಸಾಗರವೆ ಕರೆಯುತ್ತದೆ. 

ಶ್ರೀಮಾಯಾಕ್ಕಾ ದೇವಿಯ ಜಾತ್ರೆಯು ಅತ್ತಿಡೊಡ್ಡ ಜಾತ್ರೆ ಎಂಬ ಮಹತ್ವವಿದೆ. ಈ ಜಾತ್ರೆಯ ಮಹತ್ವ ಐದ ದಿನ ಶಾಸ್ತ್ರೋಕ್ತರವಾಗಿ ಜಾತ್ರಗೆ ಮಂಗಲವಾಗುತ್ತದೆ. ಬರೋಬ್ಬರಿ ಒಂದು ತಿಂಗಳು ನಡೆಯುವ ಈ ಜಾತ್ರೆಯನ್ನು ಯಾವುದೆ ಕಷ್ಟ ಬಂದರು ಜೀವನದಲ್ಲಿ ಒಮ್ಮೆ ನೋಡಲೆಬೇಕು ಎಂದು ಭಕ್ತರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com