ಶ್ರೀರಂಗಪಟ್ಟಣ ಸಮೀಪ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಬಂಗಾರ 'ಲೀಥಿಯಂ' ನಿಕ್ಷೇಪ ಪತ್ತೆ!

ಇದುವರೆಗೂ ಸಕ್ಕರೆಯ ಜಿಲ್ಲೆ ಎಂಬ ಖ್ಯಾತಿ ಪಡೆದಿದ್ದ ಮಂಡ್ಯ ಇದೀಗ ವಿಶ್ವಮಟ್ಟದಲ್ಲಿಯೂ . ಅಮೂಲ್ಯ ನಿಕ್ಷೇಪವನ್ನೂ ಹೊಂದಿರುವ ಪ್ರದೇಶವೆಂಬ ಖ್ಯಾತಿಯನ್ನು ಪಡೆಯುವ ಕಾಲವೀಗ ಸನ್ನಹಿತವಾಗಿದೆ.!
ಶ್ರೀರಂಗಪಟ್ಟಣ ಸಮೀಪ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಬಂಗಾರ 'ಲೀಥಿಯಂ' ನಿಕ್ಷೇಪ ಪತ್ತೆ!
ಶ್ರೀರಂಗಪಟ್ಟಣ ಸಮೀಪ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಬಂಗಾರ 'ಲೀಥಿಯಂ' ನಿಕ್ಷೇಪ ಪತ್ತೆ!

ಮಂಡ್ಯ: ಇದುವರೆಗೂ ಸಕ್ಕರೆಯ ಜಿಲ್ಲೆ ಎಂಬ ಖ್ಯಾತಿ ಪಡೆದಿದ್ದ ಮಂಡ್ಯ ಇದೀಗ ವಿಶ್ವಮಟ್ಟದಲ್ಲಿಯೂ . ಅಮೂಲ್ಯ ನಿಕ್ಷೇಪವನ್ನೂ ಹೊಂದಿರುವ ಪ್ರದೇಶವೆಂಬ ಖ್ಯಾತಿಯನ್ನು ಪಡೆಯುವ ಕಾಲವೀಗ ಸನ್ನಹಿತವಾಗಿದೆ.!

ಜಗತ್ತಿನ ಕೆಲವೇ ದೇಶಗಳಲ್ಲಿ ಸಿಗುತ್ತಿರುವ ಲೀಥಿಯಂ ನಿಕ್ಷೇಪ ಮಂಡ್ಯಜಿಲ್ಲೆಯಲ್ಲಿಯೂ ಸಿಗಲಿದೆ ಎಂದು ಕೇಂದ್ರ ಗಣಿ ಮತ್ತು ಪರಿಸರ ಇಲಾಖೆ ಬಿಡುಗಡೆ ಮಾಡಿರುವ ವರದಿ ಇದಕ್ಕೆ ಕಾರಣವಾಗಿದೆ.

ಇಡೀ ವಿಶ್ವವೇ ಸಾಂಪ್ರದಾಯಿಕ ಇಂಧನಗಳಿಗೆ ಪರ್ಯಾಯವಾದ ಸಂಪನ್ಮೂಲಗಳನ್ನು ಹುಡುಕುತ್ತಿದೆ. ಇತ್ತೀಚೆಗಂತು ಪೆಟ್ರೋಲ್, ಡೀಸೆಲ್ ವಾಹನಗಳ ಬದಲಾಗಿ ಇಲೆಕ್ಟ್ರಿಕ್ ವಾಹನಗಳಿಗೆ ಭಾರತ ಹೆಚ್ಚು ಒತ್ತು ನೀಡುತ್ತಿದೆ.ಇಂತಹ ಸಂದರ್ಭದಲ್ಲಿಯೇ ಇಲೆಕ್ಟ್ರಿಕ್ ವಾಹನಗಳ ಬ್ಯಾಟರಿಗೆ ಬೇಕಾಗುವಂತಹ ಲೀಥಿಯಂ ಲೋಹದ ನಿಕ್ಷೇಪ ಮಂಡ್ಯದ ಬಳಿ ಸಿಗಲಿದೆ ಎಂಬ ವರದಿ ಹೊರ ಬಿದ್ದಿರುವುದು ದೇಶದ ಇಡೀ ಬ್ಯಾಟರಿ ಉದ್ಯಮವೂ ಸಹ  ಮಂಡ್ಯದತ್ತ ಕಣ್ಣುಬಿಟ್ಟು ನೋಡುವಂತೆ ಮಾಡಿದೆ. ಕೇಂದ್ರದ ಅಟಾಮಿಕ್ ಮಿನರಲ್ಸ್ ಡೈರೆಕ್ಟರ್ಸ್ ತಂಡ ಬಿಡುಗಡೆ ಮಾಡಿರುವ ವರದಿಯು ಮಂಡ್ಯಜಿಲ್ಲೆ ಅತ್ಯಮೂಲ್ಯ ನಿಕ್ಷೇಪದ ಕಣಜ ಎಂಬ ಹಣೆಪಟ್ಟಿ ಪಡೆದುಕೊಳ್ಳಲು ಕಾರಣವಾಗಿದೆ. 

ಎಲ್ಲಿದೆ ನಿಕ್ಷೇಪ?;
ಶ್ರೀರಂಗಪಟ್ಟಣ ತಾಲ್ಲೂಕಿನ ಕರೀಘಟ್ಟ ಅರಣ್ಯ ಪ್ರದೇಶದಲ್ಲಿ ಅಮೂಲ್ಯವಾದ ಲೀಥಿಯಂ ನಿಕ್ಷೇಪ ದೊರಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಕೇಂದ್ರದ ವಿಜ್ಞಾನಿಗಳ ತಂಡ ಕಳೆದ ಒಂದು ದಶಕದಿಂದ ಸಂಶೋಧನೆ ನಡೆಸುತ್ತಿದ್ದಾರೆ. ಶ್ರೀ ರಂಗಪಟ್ಟಣ ತಾಲ್ಲೂಕಿನ ಕರೀಘಟ್ಟಪ್ರದೇಶಕ್ಕೆ ಹೊಂದಿಕೊAಡAತೆಯೇ ಇರುವ ಅಲ್ಲಾಪಟ್ಟಣ ಹಾಗೂ ಮರಳಗಾಲ ಗ್ರಾಮಗಳ ನಡುವೆ ನಿಕ್ಷೇಪಕ್ಕಾಗಿ ಪರಿಶೀಲನೆ 

ಮಾಡಲಾಗುತ್ತಿದೆ.ಸುಮಾರು ೧೫ ಎಕರೆ ಪ್ರದೇಶದಲ್ಲಿ ಈ ನಿಕ್ಷೇಪ ದೊರೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ವಿಜ್ಞಾನಿಗಳ ತಂಡ ಈ ಸ್ಥಳದಲ್ಲಿ ಬೀಡು ಬಿಟ್ಟಿದೆ. ಕಳೆದ ೧೦ ವರ್ಷಗಳಿಂದ ವಿಜ್ಞಾನಿಗಳು ಭೂಮಿ ಅಗೆದು ನಿಕ್ಷೇಪಕ್ಕಾಗಿ ತಪಾಸಣೆ ಮಾಡುತ್ತಿದ್ದಾರೆ. ವಿಜ್ಞಾನಿಗಳ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಪರಿಸರ ಪ್ರೇಮಿಗಳು ನಿಕ್ಷೇಪ ತೆಗೆಯುವುದಕ್ಕೂ ಮೊದಲು ಎಷ್ಟು ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲಾಗುತ್ತದೋ ಅಷ್ಟೇ ಪ್ರಮಾಣದಲ್ಲಿ ಅರಣ್ಯ ಬೆಳೆಸುವಂತೆ ಪರಿಸರ ಪ್ರೇಮಿ ರವೀಂದ್ರ ಮನವಿ ಮಾಡಿದ್ದಾರೆ.

ಈ ಹಿಂದೆ ಈ ಸ್ಥಳದಲ್ಲಿ ಯುರೆನಿಯಂ ನಿಕ್ಷೇಪ ಇದೆ ಎಂದು ದಶಕಗಳ ಹಿಂದೆ ಸುದ್ದಿಯಾಗಿತ್ತು. ಈಗ ಅದು ಯುರೋನಿಯಂ ಅಲ್ಲ ಲೀಥಿಯಂ ಎಂಬ ವರದಿ ಲಭ್ಯವಾಗಿದೆ. ಲೀಥಿಯಂ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಬಂಗಾರವಾಗಿದೆ. ಲೀಥಿಯಂ ನಿಕ್ಷೇಪ ಲಭ್ಯತೆಯಿಂದಾಗಿ ಮಂಡ್ಯ ಇಡೀ ವಿಶ್ವದಲ್ಲಿಯೇ ಮತ್ತೊಮ್ಮೆ ಹೆಸರು ಪಡೆದುಕೊಳ್ಳುವ ಕಾಲಘಟ್ಟದಲ್ಲಿದೆ.

ಎಷ್ಟಿದೆ ಲೋಹ?:
ಅಂದಾಜು ೧೪೧೦೦ ಟನ್ನಷ್ಟು ಲೋಹ ತೆಗೆಯಬಹುದು  ಎಂದು  ಪರಮಾಣು ಶಕ್ತಿ ಆಯೋಗದ ಅಂಗ ಸಂಸ್ಥೆಯಾಗಿರುವ  ಪರಮಾಣು ಖನಿಜ ನಿರ್ದೇಶನಾಲಯದ ಸಂಶೋಧಕರು ಅಂದಾಜಿಸಿದ್ದಾರೆ ಎನ್ನಲಾಗಿದೆ. ಕರೆಂಟ್ ಸೈನ್ಸ್' ಜರ್ನಲ್ನಲ್ಲಿ ಈ ವಿಷಯದ ಬಗ್ಗೆ ಪ್ರಬಂಧ ಪ್ರಕಟವಾಗಲಿದೆ, ಎಂದು ವರದಿಯು ಹೇಳಿದೆ. ಅಧ್ಯಯನದ ಪ್ರಕಾರ ಮಂಡ್ಯದಲ್ಲಿ ೦.೫ ಚದರ ಕಿ.ಮೀ ಜಾಗದಲ್ಲಿ ೩೦೩೦೦ ಟನ್ ಲೀಥಿಯಂ ಅದಿರು  ಪತ್ತೆಯಾಗಿದೆ. ಅದರಲ್ಲಿ ೧೪೧೦೦ ಟನ್ ಲೀಥಿಯಂ ಲೋಹ ತೆಗೆಯಬಹುದಾಗಿದೆ ಎನ್ನಲಾಗಿದೆ.

ಆದರೆ ಜಗತ್ತಿನ ಬೇರೆಡೆಗೆ ಹೋಲಿಸಿದಾಗ ಈ ಪ್ರಮಾಣ ಕಡಿಮೆ. ಚಿಲಿಯಲ್ಲಿ ೮.೬ ಮಿಲಿಯನ್, ಆಸ್ಟ್ರೇಲಿಯಾದಲ್ಲಿ ೨.೮ ಮಿಲಿಯನ್, ಅರ್ಜೇಂಟೀನಾದಲ್ಲಿ ೧.೭ ಮಿಲಿಯನ್ ಮತ್ತು ಪೋರ್ಚುಗಲ್ನಲ್ಲಿ ೬೦ ಸಾವಿರ ಟನ್ನಷ್ಟು ಲೀಥಿಯಂ ಲೋಹ ಲಭ್ಯವಿದೆ. ತನ್ನ ಅವಶ್ಯಕತೆಗಳನ್ನು ಪೂರೈಸಲು ಭಾರತ ವಿದೇಶದಿಂದ ಲೀಥಿಯಂನ್ನು ಆಮದು ಮಾಡಿಕೊಳ್ಳುತ್ತಿದೆ.

೨೦೧೭ರಲ್ಲಿ ೩೮೪ ಮಿಲಿಯನ್ ಡಾಲರ್ ಮೌಲ್ಯದ ಲೀಥಿಯಂನ್ನು ಆಮದು ಮಾಡಿಕೊಂಡಿದ್ದ ಭಾರತ ೨೦೧೯ರಲ್ಲಿ ೧.೨ ಬಿಲಿಯನ್ ಡಾಲರ್  ಮೌಲ್ಯದ  ಲೋಹವನ್ನು ತರಿಸಿತ್ತು. ಅಂದರೆ ಎರಡೇ ವರ್ಷದಲ್ಲಿ ಆಮದಿನ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಆದರೂ ಭಾರತದಲ್ಲಿ ಲೀಥಿಯಂ ಶೋಧಕ್ಕೆ ಸಂಬAಧಪಟ್ಟAತೆ ನಿರೀಕ್ಷಿತ ಮಟ್ಟದಲ್ಲಿ ಪ್ರಯತ್ನಗಳು ನಡೆದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ವರದಿ: ನಾಗಯ್ಯ ಲಾಳನಕೆರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com