ಅಂದು ವಂದೇ ಮಾತರಂ ಹಾಡಿ ಎಂದು ಪೀಡಿಸಿದ್ದ ಯುವತಿಯಿಂದಲೇ ಇಂದು ಪಾಕ್ ಪರ ಘೋಷಣೆ!

ಸಿಎಎ ವಿರೋಧಿ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಿ ಸುದ್ದಿಗೆ ಗ್ರಾಸವಾಗಿರುವ ಯುವತಿ ಅಮೂಲ್ಯ ಈ ಹಿಂದೆ ವಂದೇ ಮಾತರಂ ಹಾಡಿ ಎಂದು ಪೀಡಿಸಿದ್ದ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಯುವತಿ ಅಮೂಲ್ಯ
ಯುವತಿ ಅಮೂಲ್ಯ
Updated on

ಬೆಂಗಳೂರು: ಸಿಎಎ ವಿರೋಧಿ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಿ ಸುದ್ದಿಗೆ ಗ್ರಾಸವಾಗಿರುವ ಯುವತಿ ಅಮೂಲ್ಯ ಈ ಹಿಂದೆ ವಂದೇ ಮಾತರಂ ಹಾಡಿ ಎಂದು ಪೀಡಿಸಿದ್ದ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ.

ಹೌದು.. ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್ ಆರ್ ಸಿ ವಿರೋಧಿಸಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಹಿಂದೂ-ಮುಸ್ಲಿಂ-ಸಿಖ್- ಈಸಾಯಿ ಫೆಡರೇಷನ್ ಬೆಂಗಳೂರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಯುವತಿ ಅಮೂಲ್ಯ ಈ ಹಿಂದೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪೋಸ್ಟ್ ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್‌ ವಿಕ್ರಂ ಹೆಗ್ಡೆ ಅವರಿಗೆ ವಂದೇ ಮಾತರಂ ಹಾಡುವಂತೆ ಪೀಡಿಸಿದ್ದರು. ಅಲ್ಲದೆ ವಂದೇ ಮಾತರಂ ಗೀತೆ ಹಾಡುವ ಮೂಲಕ ನಿಮ್ಮ ದೇಶಭಕ್ತಿ ತೋರಿಸಿ ಎಂದು ಕಾಡಿದ್ದಳು.

ಈ ಹಳೆಯ ವಿಡಿಯೋ ಪಾಕ್ ಪರ ಘೋಷಣೆ ಕೂಗಿದ ಬೆನ್ನಲ್ಲೇ ಮತ್ತೆ ವೈರಲ್ ಆಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com