ಹುಬ್ಬಳ್ಳಿ ದೇಶದ್ರೋಹ ಪ್ರಕರಣ: 3 ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪೋಲೀಸ್ ಕಸ್ಟಡಿ

ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿದ್ದ ವೀಡಿಯೋದಲ್ಲಿ  ಪಾಕಿಸ್ತಾನ ಪರ ಘೋಷಣೆ ಕೂಗಿದ್ದ  ಜಮ್ಮು ಮತ್ತು ಕಾಶ್ಮೀರದ ಮೂವರು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದ್ದು ಅವರುಗಳನ್ನು ಫೆಬ್ರವರಿ 28 ರವರೆಗೆ ಪೋಲೀಸ್ ಕಸ್ಟಡಿಗೆ ಒಪ್ಪಿಸಿ ಹುಬ್ಬಳ್ಳಿ ನ್ಯಾಯಾಲಯ ಆದೇಶಿಸಿದೆ.
ಹುಬ್ಬಳ್ಳಿ ದೇಶದ್ರೋಹ ಪ್ರಕರಣ: 3 ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪೋಲೀಸ್ ಕಸ್ಟಡಿ
ಹುಬ್ಬಳ್ಳಿ ದೇಶದ್ರೋಹ ಪ್ರಕರಣ: 3 ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪೋಲೀಸ್ ಕಸ್ಟಡಿ

ಹುಬ್ಬಳ್ಳಿ: ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿದ್ದ ವೀಡಿಯೋದಲ್ಲಿ  ಪಾಕಿಸ್ತಾನ ಪರ ಘೋಷಣೆ ಕೂಗಿದ್ದ  ಜಮ್ಮು ಮತ್ತು ಕಾಶ್ಮೀರದ ಮೂವರು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದ್ದು ಅವರುಗಳನ್ನು ಫೆಬ್ರವರಿ 28 ರವರೆಗೆ ಪೋಲೀಸ್ ಕಸ್ಟಡಿಗೆ ಒಪ್ಪಿಸಿ ಹುಬ್ಬಳ್ಳಿ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಜಂಟಿ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (ಜೆಎಂಎಫ್‌ಸಿ) ನ್ಯಾಯಾಲಯವು ಸೋಮವಾರ ಮೂವರು ವಿದ್ಯಾರ್ಥಿಗಳಾದ ಬಸಿತ್ ಆಶಿಕ್ ಸೋಫಿ (19), ತಾಲಿಬ್ ಮಜೀದ್ (19) ಮತ್ತು ಅಮೀರ್ ಮೊಹಿಯುದ್ದೀನ್ (23) ಅವರನ್ನು ಫೆಬ್ರವರಿ 28 ರವರೆಗೆ ಪೊಲೀಸ್ ಕಸ್ಟಡಿಗೆಒಪ್ಪಿಸಿದೆ.

ವಿಚಾರಣೆಗೆ ಮುನ್ನ ಆರೋಪಿಗಳನ್ನು ವೈದ್ಯಕೀಯ ಪಈಕ್ಷೆಗೆ ಳಪಡಿಸುವಂತೆ ಮತ್ತು ಮುಂದಿನ ವಿಚಾರಣೆಗೆ ಮುನ್ನ ನ್ಯಾಯಾಲಯದಲ್ಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿತು.

ಮೂವರು ವಿದ್ಯಾರ್ಥಿಗಳನ್ನು ಕಳೆದ ವಾರ ಹುಬ್ಬಳ್ಳಿ ಉಪ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾಯಿಸಲಾಯಿತು ಮತ್ತು ಗೋಕುಲ್ ರಸ್ತೆ ಪೊಲೀಸ್ ಠಾಣೆಯಲ್ಲಿ ನೋಂದಾಯಿಸಲ್ಪಟ್ಟ ಪ್ರಕರಣವನ್ನು ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು ಪಾಕ್ ಪರ ಘೋಷಣೆ ಕೂಗಿ ಮಾಡಿದ್ದ ವೀಡಿಯೋವನ್ನು ಕಾಲೇಜು ಹಾಸ್ಟೆಲ್ ಕೋಣೆಯಲ್ಲಿ ತಯಾರಿಸಲಾಗಿದ್ದು ಈ ಹಾಸ್ಟೆಲ್ ವ್ಯಾಪ್ತಿಯು ಗ್ರಾಂಈಣ ಠಾಣೆಗೆ ಬರಲಿದೆ.

ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಫೆಬ್ರವರಿ 17 ರಿಂದ ನ್ಯಾಯಾಂಗ ಬಂಧನದಲ್ಲಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com