ಹಾರ್ಡ್ ವರ್ಕಿಂಗ್ ಸಿಎಂ ಯಡಿಯೂರಪ್ಪಗೆ ಜನ್ಮದಿನದ ಶುಭಾಶಯ: ಪ್ರಧಾನಿ ಮೋದಿ ಟ್ವೀಟ್

ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಇಂದು 78ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ದೇಶದ ನಾನಾ ಗಣ್ಯರು ಯಡಿಯೂರಪ್ಪ ಅವರಿಗೆ ಶುಭಾಶಯಗಳನ್ನು ಹೇಳಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಸಹ "ಹಾರ್ಡ್ ವರ್ಕಿಂಗ್" ಸಿಎಂ ಗೆ ಹುಟ್ಟುಹಬ್ಬದ ಶುಭ ಕೋರಿರುವುದು ಗಮನಾರ್ಹ.

Published: 27th February 2020 12:12 PM  |   Last Updated: 27th February 2020 12:12 PM   |  A+A-


Posted By : raghavendra
Source : Online Desk

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಇಂದು 78ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ದೇಶದ ನಾನಾ ಗಣ್ಯರು ಯಡಿಯೂರಪ್ಪ ಅವರಿಗೆ ಶುಭಾಶಯಗಳನ್ನು ಹೇಳಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಸಹ "ಹಾರ್ಡ್ ವರ್ಕಿಂಗ್" ಸಿಎಂ ಗೆ ಹುಟ್ಟುಹಬ್ಬದ ಶುಭ ಕೋರಿರುವುದು ಗಮನಾರ್ಹ.

ಟ್ವಿಟ್ಟರ್ ಮೂಲಕ ಶುಭಾಶಯ ಹೇಳಿರುವ ಪಿಎಂ ಮೋದಿ "ಕರ್ನಾಟಕದ ಹಾರ್ಡ್ ವರ್ಕಿಂಗ್ ಮುಖ್ಯಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು.ರಾಜ್ಯದ ಅಭಿವೃದ್ದಿಗಾಗಿ ಸದಾ ಕೆಲಸ ಮಾಡುತ್ತಿರುವ, ರೈತರ, ಗ್ರಾಂಈಣಾಭಿವೃದ್ದಿಯ ಬಗೆಗೆ ಸದಾ ಗಮನ ನೀಡುವ ಸಿಎಂ  ಅವರಿಗೆ ಆಯುಷ್ಯ, ಆರೋಗ್ಯ ವೃದ್ಧಿಸಲಿ ಎಂದು ನಾನು ಪ್ರಾರ್ಥಿಸುವೆ" ಎಂದು ಹೇಳಿದ್ದಾರೆ.

ಇನ್ನು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಸಹ ಯಡಿಯೂರಪ್ಪ ಅವರಿಗೆ ಶುಭಹಾರಿಸಿದ್ದಾರೆ."ಕರ್ನಾಟಕ ಸಿಎಂ ಅವರಿಗೆ ಜನ್ಮದಿನದ ಶುಭಾಶಯಗಳುಬಿ.ಎಸ್.ಯಡಿಯೂರಪ್ಪ ಶ್ರೀಮಂತ ಕರ್ನಾಟಕಕ್ಕಾಗಿ ದುಡಿಯುತ್ತಿರುವ ಪರಿಶ್ರಮಿ ಆಡಳಿತಗಾರರೆಂದು ಗುರುತಿಸಿಕೊಂಡಿದ್ದಾರೆ. ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಅವರ ಸನ್ಮಾನಕ್ಕೆ ಹಾಜರಾಗಲು ಎದುರು ನೋಡುತ್ತಿದ್ದೇನೆ." ಎಂದು ಟ್ವೀಟ್ ಮಾಡಿದ್ದಾರೆ.

 

 

ಇಂದು ಬೆಂಗಳೂರು ನಗರದ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಸಂಜೆ 5 ಗಂಟೆಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ  ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

 

 


Stay up to date on all the latest ರಾಜ್ಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp