ಡಾ. ಅಂದನೂರು ಚಿಂತನ್
ಡಾ. ಅಂದನೂರು ಚಿಂತನ್

ಬೆಂಗಳೂರು: ಚಲಿಸುತ್ತಿದ್ದ ಬಸ್ಸಿಂದ ಇಳಿಯಲು ಹೋಗಿ ಯುವ ವೈದ್ಯ ಸಾವು, ಚಾಲಕನ ಬಂಧನ

ನಗರದ ಶಾಂತಿನಗರ ಬಸ್ ನಿಲ್ದಾಣದಲ್ಲಿ ಚಲಿಸುತ್ತಿರುವ ಬಿಎಂಟಿಸಿ ಬಸ್‌ನಿಂದ ಏಕಾಏಕಿ ಇಳಿಯಲು ಮುಂದಾದ  26 ವರ್ಷದ ಎಂಬಿಬಿಎಸ್ ವೈದ್ಯ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಘಟನೆ ಸಂಬಂಧ ಬಸ್ ಚಾಲಕನನ್ನು ಪೋಲೀಸರು ಬಂಧಿಸಿದ್ದಾರೆ. 

ಬೆಂಗಳೂರು: ನಗರದ ಶಾಂತಿನಗರ ಬಸ್ ನಿಲ್ದಾಣದಲ್ಲಿ ಚಲಿಸುತ್ತಿರುವ ಬಿಎಂಟಿಸಿ ಬಸ್‌ನಿಂದ ಏಕಾಏಕಿ ಇಳಿಯಲು ಮುಂದಾದ  26 ವರ್ಷದ ಎಂಬಿಬಿಎಸ್ ವೈದ್ಯ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಘಟನೆ ಸಂಬಂಧ ಬಸ್ ಚಾಲಕನನ್ನು ಪೋಲೀಸರು ಬಂಧಿಸಿದ್ದಾರೆ.

ಮೃತ ವ್ಯಕ್ತಿ ಡಾ. ಅಂದನೂರು ಚಿಂತನ್ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಬೋಧಕರಾಗಿ ಕೆಲಸದಲ್ಲಿದ್ದರು. ಇವರು ಮೂಲತಃಅ ದಾವಣಗೆರೆಯವರಾಗಿದ್ದು ಎಂಡಿ ವ್ಯಾಸಂಗ ಮಾಡಲು ಯೋಜಿಸಿದ್ದರೆಂದು ತಿಳಿದುಬಂದಿದೆ. 

ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದಂತೆ :ಮಧ್ಯಾಹ್ನ 2.45 ರ ಸುಮಾರಿಗೆ ಚಿಂತನ್ ಶಿವಾಜಿನಗರಕ್ಕೆ ತೆರಳುತ್ತಿದ್ದ ಬಸ್ ಹತ್ತಿದಾಗ ಈ ಘಟನೆ ಸಂಭವಿಸಿದೆಅವರು ಮೆಜೆಸ್ಟಿಕ್‌ಗೆ ಟಿಕೆಟ್ ಕೇಳಿದಾಗ, ಕಂಡಕ್ಟರ್ ಈ ಬಸ್ ಮೆಜೆಸ್ಟಿಕ್ ಗೆ ತೆರಳಲ್ಲ ಎಂದಿದ್ದಾರೆ. ಆಗ ಚಲಿಸುತ್ತಿದ್ದ ಬಸ್ಸಿನಿಂದ ಚಿಂತನ್ ಕೆಳಗಿಳಿಯಲು ಪ್ರಯತ್ನಿಸಿದ್ದಾರೆ. ಆಫ಼ರೆ ಆಯತಪ್ಪಿ ಜಾರಿ ಬಿದ್ದಿದ್ದಾರೆ. ಆದರೆ ಚಾಲಕ ಪ್ರಯಾಣಿಕ ಬಿದ್ದಿದ್ದನ್ನು ಗಮನಿಸದೆ ಬಸ್ ಚಲಾಯಿಸಿದ್ದರಿಂದ ಬಸ್ಸಿನ ಹಿಂಭಾಗದ ಚಕ್ರ ಚಿಂತನ್ ಅವರ ತಲೆ ಮೇಲೆ ಉರುಳಿ ಹೋಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದರು" 

ಘಟನೆ ನಡೆದ ನಂತರ ಪ್ರಯಾಣಿಕರು ಕಿರುಚಿಕೊಂಡಿದ್ದಾರೆ. ಆಗ ಬಸ್ ನಿಲ್ಲಿಸಿದ ಚಾಲಕ ಚಿಂತನ್ ಅವರನ್ನು ಸಮೀಪದ ಆಶ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾನೆ. ಆದರೆ ಚಕ್ರ ಚಿಂತನ್ ತಲೆ ಮೇಲೆ ಹರಿದ ಪರಿಣಾಮ ಅವರಾಗಲೇ ಸಾವನ್ನಪ್ಪಿರುವುದು ಗೊತ್ತಾಗಿದೆ. ಘಟನೆ ಕುರಿತಂತೆ ಪ್ರತ್ಯಕ್ಷದರ್ಶಿಯಾಗಿದ್ದ ಬಸವರಾಜ್ ವಿಲ್ಸನ್ ಗಾರ್ಡನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ವೇಳೆ ನಿಯಮ ಬಾಹಿರವಾಗಿ ಬಸ್ಸಿನ ಶೋರ್ ತೆರೆದ ಕಾರಣ ಚಾಲಕ ಕಗ್ಗಲಿಪುರ ನಿವಾಸಿ ತಾಯಣ್ಣ ಬಿ. ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com