ವಿಜಯನಗರ ಪ್ರತ್ಯೇಕ ಜಿಲ್ಲೆ ಘೋಷಣೆಗೆ ಕೋಕ್ ನೀಡಿದ ಬಿಜೆಪಿ ಸರ್ಕಾರ

ಐತಿಹಾಸಿಕ ಹಂಪಿ ಉತ್ಸವಕ್ಕೆ ಇನ್ನೇನು ಕೆಲ ದಿನಗಳು ಬಾಕಿ ಇರುವಂತೆಯೇ  ಹಂಪಿ ನದಿ ತೀರದಲ್ಲಿ ತುಂಗಾರತಿ ಮಾಡುವ ಹಂಪಿ ಉತ್ಸವಕ್ಕೆ  ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಇಂದು ಅಧಿಕೃತವಾಗಿ ಚಾಲನೆ ನೀಡಿದರು.
ತುಂಗಾರತಿ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ
ತುಂಗಾರತಿ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ

ಹೊಸಪೇಟೆ: ಐತಿಹಾಸಿಕ ಹಂಪಿ ಉತ್ಸವಕ್ಕೆ ಇನ್ನೇನು ಕೆಲ ದಿನಗಳು ಬಾಕಿ ಇರುವಂತೆಯೇ  ಹಂಪಿ ನದಿ ತೀರದಲ್ಲಿ ತುಂಗಾರತಿ ಮಾಡುವ ಹಂಪಿ ಉತ್ಸವಕ್ಕೆ  ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಇಂದು ಅಧಿಕೃತವಾಗಿ ಚಾಲನೆ ನೀಡಿದರು.

ಹಂಪಿ ಉತ್ಸವಕ್ಕೂ ಮುನ್ನ ತುಂಗಾರತಿ ಮಾಡೋದು  ವಾಡಿಕೆ. ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಆನಂದ್ ಸಿಂಗ್ ಮತ್ತಿತರರು ಪಾಲ್ಗೊಂಡಿದ್ದರು. ತುಂಗಾರತಿ ಕಾರ್ಯಕ್ರಮವನ್ನು ನದಿ ತಟದಲ್ಲಿ ನೋಡಲು ಜನಸಾಗರವೇ ಹರಿದು ಬಂದಿತ್ತು. 

ತುಂಗಾರತಿಯಲ್ಲಿ ಭಾಗಿಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲಕ್ಷ್ಮಣ್ ಸವದಿ, 
ಸದ್ಯಕ್ಕೆ ವಿಜಯನಗರ ಜಿಲ್ಲೆ ಘೋಷಣೆ ಇಲ್ಲ, ಮೊದಲು ಆನಂದ್ ಸಿಂಗ್ ಮೊದಲು ಮಂತ್ರಿ ಆಗ್ಲಿ ಆಮೇಲೆ ವಿಜಯನಗರ ಜಿಲ್ಲೆ ಘೋಷಣೆ ವಿಚಾರ ಮಾಡೋಣ ಎಂದು ಹೇಳಿದರು. 

ಬರುವ ಹಂಪಿ ಉತ್ಸವದ ದಿನದಂದು ವಿಜಯನಗರ ಜಿಲ್ಲೆ ಘೋಷಣೆ ಆಗುತ್ತೆ ಎಂದು ಆನಂದ್ ಸಿಂಗ್ ಭರವಸೆಯಲ್ಲಿದ್ದರು. ಆದರೆ, ಲಕ್ಷ್ಮಣ್ ಸವದಿ ಈ ರೀತಿಯ ಹೇಳಿಕೆ ನೀಡುವ ಮೂಲಕ ಆನಂದ್ ಸಿಂಗ್ ಇಟ್ಟುಕೊಂಡಿದ್ದ ಭರವಸೆ ಹುಸಿಯಾಗಿದ್ದು, ವಿಜಯನಗರ ಪ್ರತ್ಯೇಕ ಜಿಲ್ಲೆ ಘೋಷಣೆಗೆ ಬಿಜೆಪಿ ಸರ್ಕಾರ ಕೋಕ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com